ಭಾನುವಾರ, ನವೆಂಬರ್ 01, 2020

ವಿಧಾನಸೌಧದಲ್ಲಿ “ಚೆಲ್ಲಿದರು ಮಲ್ಲಿಗೆಯ”: ಕರ್ನಾಟಕಕ್ಕೆ ಜಯವಾಗಲಿ ಎಂದ ದಿನ ಇಂದು

ವಿಧಾನಸಭೆಯಲ್ಲಿ ಮುಖ್ಯಮಂತ್ರಿ ದೇವರಾಜ ಅರಸು ಭಾಷಣ. 1973, ನವೆಂಬರ್‌ 1

1956ರಿಂದ ಮೈಸೂರು ರಾಜ್ಯವೆಂದಿದ್ದ ಪ್ರದೇಶ 1973ರ ನವೆಂಬರ್‌ 1ರಿಂದ "ಕರ್ನಾಟಕ ರಾಜ್ಯ”ವಾಯಿತು. ಕರ್ನಾಟಕಕ್ಕೆ ಜಯವಾಗಲಿ ಎಂಬ ಘೋಷಣೆ ಅಧಿಕೃತವಾಗಿ ಮೊಳಗಿದ ಮೊದಲ ದಿನ ಅದು. ಮುಖ್ಯಮಂತ್ರಿ ದೇವರಾಜ ಅರಸು ಕರ್ನಾಟಕದ ನಾಮಕರಣ ಘೋಷಣೆ ಮಾಡುತ್ತಿದ್ದಂತೆಯೇ ಶಾಸಕರಾದ ವಾಟಾಳ್‌ ನಾಗರಾಜ್‌ ಹಾಗೂ ಎಸ್‌. ಬಂಗಾರಪ್ಪ ಅಕ್ಷರಶಃ ಸದನದಲ್ಲಿ ಮಲ್ಲಿಗೆ ಹೂಗಳ ಮಳೆ ಸುರಿಸಿದರು. ದೇವರಾಜ ಅರಸರು ಮಾಡಿದ ಪ್ರಸ್ತಾವನೆಯ ಭಾಷಣ ಹಾಗೂ ನಾಮಕರಣಕ್ಕೆ ಒಪ್ಪಿಗೆ ದೊರೆತ ಅಪೂರ್ವ ಘಳಿಗೆಯ ಯಥಾವತ್‌ ವರದಿ ಇಲ್ಲಿದೆ.

--------------------------

ಮಾನ್ಯ ಅಧ್ಯಕ್ಷರೇ:
ವಿಶಾಲ ಮೈಸೂರಿನ ಮುಖ್ಯಮಂತ್ರಿಯಾದ ನಾನು, ರಾಜ್ಯದ ಹೆಸರನ್ನುಕರ್ನಾಟಕಎಂದು ಮಾರ್ಪಡಿಸುವ ಸರ್ಕಾರದ ನಿರ್ಣಯವನ್ನು ಸಭೆಯ ಮುಂದೆ ಮಂಡಿಸುತ್ತೇನೆ.ಈ ದಿವಸ ನಮ್ಮ ದೇಶದ ಇತಿಹಾಸದಲ್ಲಿ ಒಂದು ಹೊಸ ಅಧ್ಯಾಯದ ದಿವಸ. ವಿಶಾಲ ಮೈಸೂರು ಆದ ಮೇಲೆ, ಈ ರಾಜ್ಯದ ಹೆಸರು ಬದಲಾವಣೆ ಆಗಬೇಕೆಂಬ ವಿಚಾರ ನಮ್ಮಇಡೀ ರಾಜ್ಯದ ಜನತೆಯ ಮನಸ್ಸನ್ನು ಸೆಳೆದು,
ಆ ಒಂದು ಮಹತ್ವದ ವಿಷಯ ಇದುವರೆಗೂ ಇತ್ಯರ್ಥವಾಗದೆ ಹಾಗೆಯೇ ವಿಚಾರದಲ್ಲಿಯೇ ಉಳಿದು ಬಂದಿದೆ. ಬಹು ಜನರ ಅಪೇಕ್ಷೆ ಬದಲಾವಣೆ ಆಗಬೇಕೆಂಬುದಾಗಿದ್ದರೂ ಅದಕ್ಕೆ ಒಂದು ಪ್ರಬಲ ವಿರೋಧವಿತ್ತು ಎಂದು ನನಗೆ ಗೊತ್ತು. ಆ ಕಾಲದಲ್ಲಿ ರಾಜ್ಯ ಎರಡು ಆಗಬೇಕು ಒಂದು ಆಡಳಿತ ದೃಷ್ಟಿಯಿಂದ, ಇನ್ನೊಂದು ಶಾಸ್ತ್ರೀಯ ದೃಷ್ಟಿಯಿಂದ, ಎಂದು ಹೇಳುವುದರಲ್ಲಿ ನಾನೂ ಒಬ್ಬನಾಗಿದ್ದೆ.
ಮೊದಲು ಕನ್ನಡ ಜನ ಎಲ್ಲಾ ಒಂದು ಕಡೆ ಸೇರೋಣ. ಅದು ಆಗಲಿ ಅನಂತರ ಹೆಸರಿನ ಬದಲಾವಣೆಯ ಬಗ್ಗೆ ನಿಧಾನವಾಗಿ ಯೋಜನೆ ಮಾಡಿ, ಇತರರು ಇದನ್ನು ಮನ ಒಲಿದು ಒಪ್ಪವ ರೀತಿ ಮಾಡಿ ಬದಲಾಯಿಸೋಣ ಎಂದು ಅದನ್ನು ಹಾಗೇ ಇಟ್ಟುಕೊಂಡರು. ಜನತೆ ಒಂದು ಕಡೆ ಹೆಸರು ಬದಲಾವಣೆ ಆಗಬೇಕು ಎಂದು ಇಚ್ಛೆಪಡುತ್ತಾ ಬಂದಿದ್ದರೆ, ಶಾಸನ ಸಭೆಯ ಆಡಳಿತ ಪಕ್ಷದವರು ಇದನ್ನು ಮುಂದೂಡಿಕೊಂಡು ಬಂದಿದ್ದಾರೆ.
1969ನೇ ಜುಲೈ ಕಾಂಗ್ರೆಸ್‌ ಪಕ್ಷದ ಚರಿತ್ರೆ ಬದಲಾವಣೆ ಆಯಿತು. ಆ ಬದಲಾವಣೆಯ ಪರಿಣಾಮವಾಗಿ ನಾವು ಇಲ್ಲಿ ಈ ಸಭೆಯಲ್ಲಿದ್ದೇವೆ. 1970-71ರಲ್ಲಿ ನಡೆದಂಥ ಮಧ್ಯಂತರ ಚುನಾವಣೆ ಕಾಲದಲ್ಲಿ ಅಲ್ಲಲ್ಲಿ ಈ ಹೆಸರು ಬದಲಾವಣೆ ಬಗ್ಗೆ ಬಹಿರಂಗವಾಗಿ, ಅಂತರಂಗವಾಗಿ ವಾದ-ವಿವಾದಗಳು ನಡೆಯುತ್ತಿದ್ದವು. ಮದ್ಯಂತರ ಚುನಾವಣೆ ಆದ ಮೇಲೆ 1972ರ ಚುನಾವಣೆಯ ಕಾಲಕ್ಕೆ ಈ ಹೆಸರಿನ ವಿಚಾರ ಬಹಳ ಪ್ರಬಲವಾಗಿ ಜನಸಾಮಾನ್ಯರ ಮನಸ್ಸನ್ನು ಸೆಳೆಯುವುದಕ್ಕೆ ಒಂದು ಕಾರಣವಾಯಿತು. ಈ ರಾಜಕೀಯ ತಿಕ್ಕಾಟದಲ್ಲಿ ನಾನು ಒಂದು ಕಡೆ ಮಾಡಿದಂಥ ಭಾಷಣದಿಂದ ಸ್ವಲ್ಪ ಕಿಡಿ ಹಾರಿತು. ಅದು ದೇಶದಾದ್ಯಂತ ವ್ಯಾಪ್ತಿಗೊಂಡಿತು.



ನನ್ನ ಅಭಿಪ್ರಾಯ ಏನೇ ಇರಲಿ. ಶ್ರೀ ಸಾಮಾನ್ಯರ ಅಭಿಪ್ರಾಯದಲ್ಲಿ ಅವರಿಗೆ ಈ ಬದಲಾವಣೆಯಿಂದ ಒಂದು ಆನಂದ, ಒಂದು ತೃಪ್ತಿ, ಒಂದು ಸಮಾಧಾನ, ಒಂದು ಭಾವೈಕ್ಯತೆ ಬರುವುದಾದರೆ ನಮಗೆ ಅದರಿಂದ ತೊಂದರೆ ಆಗುವುದು ಏನೂ ಇಲ್ಲ ಸಂತೋಷ ಎಂದು ಹೇಳುವುದರ ಜೊತೆಗೆ ನಾಳೆ ಚುನಾವಣೆ ಆದ ಮೇಲೆ ನಮ್ಮಪಕ್ಷ ಬಹುಮತ ಪಡೆದು ಬಂದು ಅಧಿಕಾರವನ್ನು ಪಡೆಯುವುದಾದರೆ ಸಭೆಯಲ್ಲಿ ಚರ್ಚೆ ಮಾಡಿ, ಶಾಸನ ಸಭೆಯಲ್ಲಿ ಚರ್ಚೆ ಮಾಡಿ, ಶಾಸನ ಸಭೆಯಲ್ಲಿ ನಿಮ್ಮಪ್ರತಿನಿಧಿಗಳು ಯಾರು ಇರುತ್ತಾರೆ ಅವರ ಅಭಿಪ್ರಾಯದಂತೆ ಹೋಗುವುದಕ್ಕೆ ನನ್ನ ಅಡ್ಡಿ ಇಲ್ಲ. ಹೆಸರು ಬದಲಾವಣೆ ಮಾಡೋಣ, ಬಹುಮತ ಅಭಿಪ್ರಾಯದಂತೆ ಹೋಗೋಣ ಎನ್ನುವ ಮಾತನ್ನು ಜನತೆಯ ಮುಂದೆ ನನ್ನ ಪಕ್ಷದ ಪರವಾಗಿ ಹೇಳಿದ್ದುಂಟು. ನಾನು, ನೀವು ಜನತೆಗೆ ಕೊಟ್ಟಂಥ ಮಾತನ್ನು ಉಳಿಸಿಕೊಳ್ಳುವುದಕೋಸ್ಕರ ಇವೊತ್ತು ತಮ್ಮ ಎಲ್ಲರ ಅಪ್ಪಣೆ ಪಡೆದು ಈ ಒಂದು "ಠರಾವನ್ನುನಾನು ಈ ಸಭೆಯ ಮುಂದೆ ಮಂಡಿಸುತ್ತಿದ್ದೇನೆ.

 

ಮತ್ತೆ ಈ ಹೆಸರು ಯಾವುದು ಇರಬೇಕು ಎನ್ನುವ ಬಗ್ಗೆ ಕೂಡ ನಮ್ಮನಾಡಿನಲ್ಲಿ ಬಹಳ ಕಾಲ ಚರ್ಚೆಡೆದಿದೆ. ಇಂತಹ ಬದಲಾವಣೆಯನ್ನು ಮಾಡುವುದು ಎಂದರೆ ಕರ್ನಾಟಕ'” ಎಂದು ಮಾಡಬಹುದು ಎನ್ನುವ ಒಂದು ನಿರ್ಣಯವನ್ನು ಇಲ್ಲಿ ಮಂಡಿಸಿದ್ದೇನೆ. ಕರ್ನಾಟಕ ಎನ್ನುವ ಹೆಸರನ್ನು ಹಿಂದೆ ರಾಜ್ಯಗುರುಗಳು ಉಪಯೋಗಿಸುತ್ತಿದ್ದರು. ಕರ್ನಾಟಕ ಸಿಂಹಾಸನಾಧೀಶ್ವರ ಎಂದು ಒಂದು ಕಾಲದಲ್ಲಿ ಮೈಸೂರು ರಾಜರು ಇಟ್ಟುಕೊಂಡಿದ್ದರು. ಹೊಯ್ಸಳರು ಕದಂಬರರೂ ಇಟ್ಟುಕೊಂಡಿದ್ದರು. ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಈ ಹೆಸರು ಬರುತ್ತಲೇ ಇತ್ತು. ಸಾಹಿತಿಗಳು ಸಾಹಿತ್ಯದಲ್ಲಿ ಕರ್ನಾಟಕಎಂಬ ಹೆಸರನ್ನು ಇಡಬಹುದೆಂದು ಹೇಳಿದ್ದಾರೆ. ಅದರಂತೆ ಇಲ್ಲಿ ನಿರ್ಣಯವನ್ನು ಮಂಡಿಸಿದ್ದೇನೆ.

ಒಂದೂವರೆ ತಿಂಗಳ ಹಿಂದೆ ಈ ಠರಾವನ್ನು ಕ್ಯಾಬಿನೆಟ್‌ ಮುಂದೆ ಬಂದಾಗ ಬಹು ಜನತೆ ಹಾಗೂ ಶಾಸಕರು ಅಭಿಪ್ರಾಯಪಡುವಂತೆ ನಮ್ಮರಾಜ್ಕಕ್ಕೆ ಒಂದು ಶಾಶ್ವತವಾದ ಹೆಸರನ್ನು ಇಟ್ಟು ಈಗಿನ ಹೆಸರನ್ನು ಬದಲಾವಣೆ ಮಾಡಬಹುದು ಎಂಬ ತೀರ್ಮಾನಕ್ಕೆ ಬಂದೆವು. ನಾನು ತಮ್ಮ ಮುಂದೆ ಠರಾದಿನಲ್ಲಿ ಕರ್ನಾಟಕಎಂದು ಏನು ಹೆಸರನ್ನು ಇಟ್ಟಿದ್ದೇನೋ, ಅದೇ ಬಹುಮತ ಅಭಿಪ್ರಾಯ ಎಂದು ನನ್ನ ನಂಬಿಕೆ. ನಮ್ಮಪಕ್ಷದಲ್ಲಿ ಕೂಡ ಇದನ್ನು ಚರ್ಚೆಮಾಡಿ ಎಲ್ಲರೂ ಒಪ್ಪುವಂತೆ ಠರಾವನ್ನು ಇಲ್ಲಿ ತಂದಿದ್ದೇನೆ. ಒಂದು ಸಂತೋಷದ ವಿಚಾರ ಎಂದರೆ ನಮ್ಮಪಕ್ಷದಲ್ಲಿ ಕಿಲವು ವಿಚಾರದಲ್ಲಿ ಅಭಿಪ್ರಾಯ ಭೇದಗಳು ಇದ್ದರೂ ಇದರಲ್ಲಿಲ್ಲ. ಎಲ್ಲರೂ ಇಂತಹ ಒಂದು ಬದಲಾವಣೆಯನ್ನು ಮಾಡಲು ಹೃದಯ ತುಂಬಿ ಒಪ್ಪಿದ್ದಾರೆ.

ಆದರೆ ಪ್ರಜಾಪ್ರಭುತ್ವದ ತತ್ವದ ನೀತಿಗೆ ಕಟ್ಟುಬಿದ್ದು ಬಹುಮತದ ಅಭಿಪ್ರಾಯದಂತೆ ಯಾವ ರೀತಿಯಲ್ಲಿ ಇರಬೇಕೆಂದು ತೀರ್ಮಾನ ಮಾಡುತ್ತಾರೋ ಆ ತೀರ್ಮಾನವನ್ನು ತೆಗೆದುಕೊಂಡು ಅದಕ್ಕೆ ನಾವೆಲ್ಲರೂ ಸಂತೋಷದಿಂದ ಒಪ್ಪಿಕೊಂಡು ಹೋಗೋಣ ಎಂದು ಎಲ್ಲರೂ ಒಂದು ದೊಡ್ಡ ಮನೋಭಾವವನ್ನು ಪ್ರದರ್ಶನ ಮಾಡಿದ್ದಾರೆ. ಇದು ಒಂದು ಹರ್ಷದ ಸಂಗತಿ. ನಾವೆಲ್ಲ ಮೈಸೂರು ಇಲ್ಲವೇ ಕರ್ನಾಟಕ ದೇಶದಲ್ಲಿರಲಿ, ಇಡೀ ಭಾರತ ದೇಶದಲ್ಲಿ ಸೇವೆ ಮಾಡುತ್ತಿದ್ದರೂ ಕಾಲ ಸನ್ನಿವೇಶಕ್ಕೆ ತಕ್ಕ ಹಾಗೆ ಆರ್ಥಿಕವಾಗಿ, ಐಹಿಕ ವಿಚಾರಕ್ಕೆ ಹೆಚ್ಚು ಪ್ರಾಧಾನ್ಯತೆ ಕೊಡುತ್ತಿದ್ದೇವೆ. ಇದು ಮನುಷ್ಯನಿಗೆ ತೃಪ್ತಿ ತರುವ ವಿಚಾರವಾಗಿದ್ದರೂ ಒಂದು ರೀತಿಯಲ್ಲಿ ಇದರಲ್ಲಿ ಹೊಂದಿಕೊಂಡು ಹೋಗುವ ಒಂದು ಭಾವನೆ ಬೆಳೆಯಬೇಕು.

ಇದು ಮನುಷ್ಯನಿಗೆ ಆನಂದವನ್ನು ತರುವ ಒಂದು ಸಂಗತಿಯಾಗಿದೆ. ಇಂತಹ ಒಂದು ಆನಂದವನ್ನು ಅನುಭವಿಸುತ್ತಿರುವ ಸದಸ್ಯರುಗಳನ್ನು ನೋಡಿ ನಾವೂ ಆ ಆನಂದದಲ್ಲಿ ಭಾಗಿಯಾಗಬೇಕು. ನಮ್ಮರಾಜ್ಯದ ಹೆಸರಿನ ಬದಲಾವಣೆಯಿಂದಾಗಿ ಅವರಿಗೆ ಆನಂದ ಹಾಗೂ ಸಂತೋಷ ಉಂಟಾಗುತ್ತದೆ. ಬಹುಜನರು ಎಂದರೆ ಈ ದೇಶದಲ್ಲಿರುವ ಬೇರೆ ಬೇರೆ ವರ್ಗದವರೂ ಸೇರುತ್ತಾರೆ. ಅನೇಕ ಸಾಹಿತಿಗಳು ಕರ್ನಾಟಕದಲ್ಲಿ ಇದ್ದಾರೆ. ಇಂತಹ ಸಾಹಿತಿಗಳಲ್ಲಿ ಹಿರಿಯರಿಂದ ಕಿರಿಯರವರೆಗೂ ಎಂದರೆ ಶ್ರೀಮಾನ್‌ ಬೇಂದ್ರೆಯವರು, ಹಾಗೂ ರಾಷ್ಟ್ರದ ದೊಡ್ಡ ಕವಿಗಳಾದ ಶ್ರೀಮಾನ್‌ ಕೆ. ವಿ. ಪುಟ್ಟಪ್ಪನವರು ಮತ್ತೆ ಇನ್ನಿತರ ಎಲ್ಲ ಸಾಹಿತಿಗಳೂ ಈಗಿರುವ ಹೆಸರನ್ನು ಬದಲಾವಣೆ ಮಾಡಿ ಕರ್ನಾಟಕ ಎಂದು ಮಾಡಬೇಕೆಂದು ಸತತವಾಗಿ ಒತ್ತಾಯ ಮಾಡುತ್ತಾ ಬಂದಿದ್ದಾರೆ.

ಬುದ್ಧಿ ಜೀವಿಗಳೂ ಕೂಡ ಹೆಸರು ಬದಲಾವಣೆಯಾಗಬೇಕೆಂದು ಹೇಳಿದ್ದಾರೆ. ವಿದ್ಯಾರ್ಥಿಗಳು, ಮಧ್ಯಮ ವರ್ಗದ ಜನರೂ, ಬದಲಾವಣೆ ಯಾಗಬೇಕೆಂದು ಹೇಳಿಕೊಂಡು ಬರುತ್ತಿದ್ದಾರೆ. ಅದೇ ರೀತಿ ಆಡಳಿತ ಹಾಗೂ ಕೈಗಾರಿಕಾ ಕ್ಷೇತ್ರದಲ್ಲಿರತಕ್ಕ ಜನ ಅಭಿಪ್ರಾಯಪಟ್ಟಿದ್ದಾರೆ. ಇದು ಅವರೆಲ್ಲರ ಹಿರಿದಾದ ಆಸೆ, ನಾವು ಜನತಾ ಪ್ರತಿನಿಧಿಗಳಾಗಿರುವುದರಿಂದ ಅವರ ಆಸೆಗೆ ಅಡ್ಡಿ ತರತಕ್ಕದ್ದು ಸೂಕ್ತವಲ್ಲ, ಇಷ್ಟೊಂದು ಜನಕ್ಕೆ ಸಂತೋಷವಾಗಬೇಕಾದರೆ ಅಂತಹ ಸಂತೋಷವಾಗಿರುವ ಜನತೆಯಲ್ಲಿ ನಾವೂ ಸಹ ಭಾಗಿಯಾಗೋಣ. ನಮ್ಮ ಕೈಲಾದ ಅಲ್ಪ ಸೇವೆಯನ್ನು ಸಲ್ಲಿಸೋಣ ಎನ್ನುವ ಒಂದು ಸಂತೋಷದಿಂದ ನಾನು ಇಲ್ಲಿ ಇಂತಹ ಒಂದು ನಿರ್ಣಯವನ್ನು ತರುವ ಕಾಲ ಬಂತಲ್ಲ ಎಂದು ಸಂತೋಷಿಸುತ್ತೇನೆ ಮತ್ತು ಇದರಲ್ಲಿ ನಮ್ಮ ಜವಾಬ್ದಾರಿಯೂ ಇದೆ ಎನ್ನುವ ಮಾತನ್ನು ಹೇಳಿ ಇಂತಹ ಒಂದು ನಿರ್ಣಯ ಇಲ್ಲಿ ಬಂದಿದೆ. ಇದನ್ನು ತಮ್ಮಅಪ್ಪಣೆ ಪಡೆದು ನಮ್ಮ ಈ ಸಭೆಯ ಮುಂದೆ ಇಟ್ಟಿದ್ದೇನೆ.

ಹಳೆಯ ಮೈಸೂರಿನ ಭಾಗದಿಂದ ಬಂದ ಜನರಿಗೆ ಮೈಸೂರು ರಾಜ್ಯದ ಹೆಸರಿನ ಬಗ್ಗೆ ಹಿಂದಿನಿಂದಲೂ ಚಾರಿತ್ರಿಕವಾಗಿ ಒಂದು ಅಭಿಮಾನ ಬೆಳೆದು ಬಂದಿದೆ. ಮೈಸೂರು ರಾಜ್ಯ ಎಂಬುದು ಇಡೀ ಇಂಡಿಯಾ ದೇಶದಲ್ಲಿ ಕೀರ್ತಿ ಪಡೆದಿರುವುದಲ್ಲದೆ, ಹೊರ ದೇಶಗಳಲ್ಲಿಯೂ ಸಹ ಕೀರ್ತಿಪಡೆದಿದೆ. ಮೈಸೂರು ಜನತೆಯ ವಿಚಾರದಲ್ಲಿ. ಮೈಸೂರು ಸಾಮಾನುಗಳ ವಿಚಾರದಲ್ಲಿ ತಿಳಿದಂತಹ ಜನರು ಹೊರ ದೇಶಗಳಲ್ಲಿ ಇದ್ದಾರೆ. ಅದಕೋಸ್ಕರ ಮೈಸೂರು ರಾಜ್ಯ ಹೆಚ್ಚಿನ ಗೌರವ ಹಾಗೂ ಕೀರ್ತಿ ಪಡೆದುಕೊಂಡಿದೆ. ಮೈಸೂರು ಎಂಬ ಹೆಸರಿಗೆ ಶಕ್ತಿ ಇದೆ.
ಈ ಹೆಸರು ಅಸ್ತಂಗತವಾದರೂ ಸಹ ಇನ್ನೊಂದು ಹೆಸರು ಉದಯವಾಗುತ್ತಿದೆ. ಹೊಸ ಹೆಸರಿನಲ್ಲಿ ಭಾವೈಕ್ಯತೆ ಇದೆ. ವಿಶ್ವಾಸವಿದೆ. ಹೆಚ್ಚಿನ ಜನರಿಗೆ ಸಂಶೋಷ, ಆನಂದ ಉಂಟಾಗುತ್ತದೆ ಬದಲಾವಣೆಯಲ್ಲಿ ಹಳೆಯದು ಹೋಗಿ, ಹೊಸದು ಬರುವಾಗ ತೊಂದರೆ ಇಲ್ಲ. ಆನಂದ ಬರುತ್ತದೆ. ಆದ್ದರಿಂದ ಈ ಬಗ್ಗೆ ಹೆಚ್ಚು ಚಿಂತನೆ ಮಾಡಬೇಕಿಲ್ಲ, ಹೊಸದನ್ನು ನೋಡಿ, ನಲಿದು ಸಂತೋಷ ಪಡುವ ಕಾಲ ಇದು. ಆದ್ದರಿಂದ ಈ ನಿರ್ಣಯಕ್ಕೆ ಮಾನ್ಯ ಸಭೆ ಒಪ್ಪಿಗೆ ಕೊಡುತ್ತದೆಂಬ ಪೂರ್ಣ ವಿಶ್ವಾಸ ನನಗೆ ಇದೆ. ಬಹುಮತದ ವಿಶ್ವಾಸವಲ್ಲ ನಾವೆಲ್ಲರೂ ಸೇರಿ ಒಮತದಿಂದ ಈ ಹೆಸರನ್ನು ಕರೆಯೋಣ. ಆ ರೀತಿ ನಾವು ಆನಂದದಿಂದ, ಸಂತೋಷದಿಂದ ಕರೆಯುವಾಗ ಕನ್ನಡ ಜನತೆಯ ಏಳಿಗೆಯಾಗಲಿ ಮತ್ತು ಈ ಶುಭ ಮುಹೂರ್ತದಲ್ಲಿ ಈ ಹೆಸರನ್ನು ಕರೆದು ರಾಜ್ಯ ಉನ್ನತವಾಗಿ ಬೆಳೆದು, ಹಿಂದಿನಿಂದ ಈ ರಾಜ್ಯ ಚರಿತ್ರೆಯಲ್ಲಿ ಏನು ಒಂದು ಒಳ್ಳೆಯ ಕೀರ್ತಿ, ಹೆಸರನ್ನು ಪಡೆದಿತ್ತೋ ಅದಕ್ಕಿಂತ ಹೆಚ್ಚಿನ ಕೀರ್ತಿಯನ್ನು ಪಡೆದು ಕನ್ನಡ ಜನಕೋಟಿ ಏನಿದ್ದಾರೆ ಅವರ ಬಾಳ್ವೆ ಹಸನಾಗಬೇಕು.

ನಮ್ಮ ಸಂಸ್ಕೃತಿ, ಸಾಹಿತ್ಯ, ಕಲೆ, ಇವೆಲ್ಲವೂ ಬೆಳೆದು ಇಡೀ ಭಾರತದಲ್ಲಿಯೇ ಅಲ್ಲ ಇಡೀ ಪ್ರಪಂಚದಲ್ಲಿಯೇ ಹೆಚ್ಚಿನ ಕೀರ್ತಿ ಪಡೆಯುವಂತಾಗಬೇಕು. ಅಂತಹ ಕಾರ್ಯಕ್ಕೆ ಇವೂತ್ತು ನಾವು ಅಂಕುರಾರ್ಪಣ ಮಾಡೋಣ ಎನ್ನುವ ಮಾತನ್ನು ತಿಳಿಸಿ ಈ ಠರಾವನ್ನು ತಮ್ಮ ಒಪ್ಪಿಗೆಗಾಗಿ ಮಂಡಿಸುತ್ತಿದ್ದೇವೆ. ನಾನು ಸರಕಾರದ ವತಿಯಿಂದ ಮಂಡಿಸಿದಂಥ ನಿರ್ಣಯಕ್ಕೆ ಎಲ್ಲ ಕಡೆಯಿಂದಲೂ, ಎಲ್ಲಾ ಪಕ್ಷಗಳಿಂದಲೂ ಸರ್ವತೋಮುಖವಾದ ಬೆಂಬಲ ಬಂದಿರತಕ್ಕದ್ದು ನನಗಂತೂ, ಬಹಳ ಸಂತೋಷ ಉಂಟುಮಾಡಿದೆ. ನಾನು ಮೊದಲೇ ಈ ಸಭೆಯಲ್ಲಿ ಅರಿಕೆ ಮಾಡಿಕೊಂಡ ಹಾಗೆ ಏನಾದರೂ ಇಲ್ಲಿ ಸ್ವಲ್ಪ ಭಿನ್ನಾಭಿಪ್ರಾಯ ಇದ್ದರೂ, ಹೆಸರು ಬದಲಾವಣೆ ಆಗತಕ್ಕ ಕಾಲದಲ್ಲಿ ಮನಸ್ಸಿಗೆ ಸ್ವಲ್ಪ ನೋವು ಆದಂಥವರು ಕೂಡ ಅಂತಿಮವಾಗಿ ನಿರ್ಣಯಕ್ಕೆ ಬೆಂಬಲ ಕೊಟ್ಟಿದ್ದಾರೆ ಮತ್ತು ಬದಲಾವಣೆಯನ್ನು ಸ್ವಾಗತಿಸಿದ್ದಾರೆ, ನಾವು ಕರ್ನಾಟಕ ಎಂಬ ಹೆಸರು ಇಡಬೇಕು ಎಂಬುದನ್ನು ಕೂಡ ಒಪ್ಪಿದ್ದಾರೆ. ಆದಕಾರಣ ಮೂರು ದಿವಸಗಳಿಂದ ಮಾತನಾಡಿ ತಮ್ಮ ಹೃದಯದಿಂದ ಬಂದ ಬೆಂಬಲವನ್ನು ಕೊಟ್ಟಂಥ ಮಾನ್ಯ ಸದಸ್ಯರಿಗೂ, ಈ ಚರ್ಚೆಯಲ್ಲಿ ಭಾಗವಹಿಸದೆ ಮೌನದಿಂದ ಕುಳಿತು ಮಾತುಗಳನ್ನು ಕೇಳಿದವರಿಗೂ ಮತ್ತು ಮೌನದಿಂದಲೇ ಬೆಂಬಲ ಕೊಟ್ಟಂಥ ಎಲ್ಲಾ ಸದಸ್ಯರಿಗೂ ನನ್ನ ಧನ್ಯವಾದಗಳನ್ನು ಅರ್ಪಿಸುವುದಕ್ಕೆ ನಾನು ಅಪ್ಪಣೆ ಬೇಡುತ್ತೇನೆ. ಈ ಸಂದರ್ಭದಲ್ಲಿನಾನು ಈ ನಿರ್ಣಯವನ್ನು ಮಂಡಿಸುವುದಕ್ಕೆ ಮನಸ್ಸು ಮಾಡಿದ್ದಕ್ಕಾಗಿ ಅಥವಾ ತಂದಿದ್ದಕ್ಕಾಗಿ ನನ್ನ ಬಗ್ಗೆ ಕೆಲವರು ಒಳ್ಳೆಯ ಭಾಷಣವನ್ನು ಮಾಡಿದ್ದಾರೆ, ಮೆಚ್ಚುಗೆಯನ್ನು ನನ್ನ ಮಿತ್ರರು, ಎದುರು ಪಕ್ಷದಲ್ಲಿರತಕ್ಕ ನಾಯಕರು ವ್ಯಕ್ತಪಡಿಸಿದ್ದಾರೆ.

ಇಂತಹ ಮಹತ್ವದ ಕಾರ್ಯಗಳು ಆಗುವಾಗ, ನಾವು ಒಂದೊಂದು ಕಾಲಕ್ಕೆ ನಿಮಿತ್ತ ಮಾತ್ರರಾಗುತ್ತೇವೆ ಅಷ್ಟೇ ಎಂದು ನಾನು ತಿಳಿದುಕೊಂಡಿದ್ದೇನೆ. ಇದು ನನಗೆ ವೈಯಕ್ತಿಕವಾಗಿ ಹೆಮ್ಮೆ ಎಂದಲ್ಲ, ನಾನು ಒಂದು ನಿಮಿತ್ತವಾಗಿದ್ದೇನೆ, ಅದಕ್ಕೆ ಸಂದರ್ಭ ಕಾರಣ. ಇದರಿಂದ ಬರತಕ್ಕ ಕೀರ್ತಿ ಮೆಚ್ಚಿಗೆ ಇಡೀ ಸದನಕ್ಕೆ ಸೇರಿದ್ದು. ಅದರಲ್ಲಿ ನಾನೂ ಒಬ್ಬ ಇದ್ದೇನೆ ಅಷ್ಟೇ. ವೈಯಕ್ತಿಕವಾಗಿ ಇದರಲ್ಲಿ ನನ್ನ ಪ್ರತಿಷ್ಠೆ ಇಲ್ಲ, ಜನಮನಕ್ಕೆ ಸ್ಪಂದಿಸಿದ್ದೇನೆ ನುಡಿದಂತೆ ನಡೆದಿದ್ದೇನೆ ಎಂಬ ನಂಬಿಕೆ. ತಿಳಿವಳಿಕೆ ಇಲ್ಲದೆ ಧ್ಹರ್ಯ ಬರುವುದಿಲ್ಲ. ನಡೆದ ವಿಚಾರವನ್ನು ಸರಿಯಾಗಿ ತಿಳಿಯಬೇಕಾದರೆ ನಿರ್ವಿಕಾರ ಮನಸ್ಸು ಬೇಕು. ಈ ದೃಷ್ಟಿಯಿಂದ ನಡೆಯುವುದಕ್ಕೆ ಧೈರ್ಯ ಮಾಡಿದೆ ಅಷ್ಟೇ.

ಯುಗಯುಗಾಂತರಗಳಿಂದ ಸಾಮಾಜಿಕವಾಗಿ, ಆರ್ಥಿಕವಾಗಿ ನೊಂದು, ಬೆಂದು ಹಿಂದುಳಿದಿರತಕ್ಕೆ, ಜನ-ಜನಾಂಗಗಳ ಉದ್ದಾರ ಆಗಬೇಕು. ಆ ದಿಕ್ಕಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿದ್ದೇವೆ. ಅದಕ್ಕೆ ಎಲ್ಲರ ತೆರೆದ ಹೃದಯದ ಸಹಕಾರಬೇಕು. ಈ ದಿಕ್ಕಿನಲ್ಲಿ ಅಂಜದೆ ನಾವು ನುಡಿದಂತೆ ನಡೆಯಬೇಕಾದುದ್ದು ನಮ್ಮ ಕರ್ತವ್ಯ. ಅದನ್ನು ಮಾಡುತ್ತೇವೆಂದು ಹೇಳಿ ತಮಗೆ ಆಶ್ವಾಸನೆ ಕೊಡಬಲ್ಲೆ. ಕೆಲವು ಭಾಗಗಳಲ್ಲಿ ಕೆಲವು ತೊಂದರೆಗಳಿವೆ. ನೀರಿನ ಅಭಾವ, ಮಳೆ ಇಲ್ಲದೆ ತೊಂದರೆ, ಯಾವ ಭಾಗದಲ್ಲಿ ತೊಂದರೆಯಾದರೂ ಅದನ್ನು ಪರಿಹರಿಸುವುದು ಸರ್ಕಾರದ ಕರ್ತವ್ಯ. ಎಲ್ಲಿಯವರೆಗೆ ನಮಗೆ ಸರ್ಕಾರ ನಡೆಸುವ ಜವಾಬ್ದಾರಿ ಇರುತ್ತದೆಯೋ ಅಲ್ಲಿಯವರೆಗೆ ಆ ಭಾಗ, ಈ ಭಾಗ, ನಮ್ಮವರು, ನಿಮ್ಮವರು ಎಂಬ ಪಕ್ಷಪಾತಕ್ಕೆ ಎಡೆಯಲ್ಲ. ಎಲ್ಲ ಭಾಗಗಳೂ ನಮ್ಮ ರಾಜ್ಯ, ನಮ್ಮ ಜನ ಎಂಬ ಒಂದೇ ಗುರಿ ಎನ್ನುವ ಆಶ್ವಾಸನೆಯನ್ನು ಕೂಡಾ ನಾನು ಕೊಡುತ್ತೇನೆ.

ಕೊನೆಯದಾಗಿ ಒಂದು ಮಾತು. ಈ ನಿರ್ಣಯವನ್ನು ನನ್ನ ಒಂದು ಸ್ಥಾನದಿಂದ ತಂದಿರತಕ್ಕದ್ದು ಸಂತೋಷ ಎಂಬ ಅಭಿಪ್ರಾಯ, ಇವರು ಅರಸು ಮನೆತನದವರು ಆಗಿದ್ದರೂ ಇದನ್ನು ತಂದಿದ್ದಾರೆಂದು ಹೇಳಿದ್ದಾರೆ. ಇದರ ಬಗ್ಗೆ ನಾನು ಏನೂ ಹೇಳಬೇಕಾದ ಅಗತ್ಯವಿಲ್ಲ. ನಾನು ಯಾವಾಗ ರಾಜಕೀಯದಲ್ಲಿ ಕಾಲಿಟ್ಟನೋ ಆವಾಗಿನಿಂದ ನಾನು ಅರಸು ಮನೆತನಕ್ಕೆ ಸೇರಿದವನು ಜನತೆಯೇ ಬೇರೆ ನಾನು ಬೇರೆ ಎಂದು ತಿಳಿದವನಲ್ಲ. ನಾನು ಹುಟ್ಟಿದ್ದು ಹಳ್ಳಿಯಲ್ಲಿ ಬೆಳೆದಿದ್ದು ಹಳ್ಳಿಯಲ್ಲಿ ಇದ್ದದ್ದೂ ಹಳ್ಳಿಯಲ್ಲಿ ದೇಶದ ವಿಚಾರ ಬಂದಾಗ ದೇಶಾಭಿಮಾನ ಇರುವಂಥವನು, ಯಾವ ಜಾತಿ, ಮತ ಭೇದವಿಲ್ಲದೆ, ಯಾರ್ಯಾರಿಗೆ ಸ್ವಾತಂತ್ರಾಭಿಮಾನ ಇದೆಯೋ, ಅವರೆಲ್ಲರೂ ದೇಶಕ್ಕಾಗಿ ಹೋರಾಟವನ್ನು ಮಾಡಿದ್ದಾರೆ. ಅಂತಹ ಹೋರಾಟ ಮಾಡಿದ ಲಕ್ಟೋಪಲಕ್ಷ ಜನರಲ್ಲಿ ನಾನೂ ಒಬ್ಬ. ನನಗೆ ತನ್ನ ಜಾತಿಯೆಂದು ಏನೂ ಹೆಚ್ಚಿನ ಪ್ರೀತಿಯೂ ಇಲ್ಲ ಅಥವಾ ಬೇರೆ ಜಾತಿಯವರಲ್ಲಿ ಕಡಿಮೆ ರೀತಿಯ ಪ್ರೀತಿಯೂ ಇಲ್ಲ. ನಾವೆಲ್ಲರೂ ಒಂದೇ ಜಾತಿಯವರು ಎಂಬ ಭಾವನೆ. ಈ ರಾಜತತ್ವಕ್ಕೆ ನಾನು ಎಂದೋ ವಿರೋಧಿ ಗಾಂಧೀಜಿಯವರು ಈ ರಾಜರುಗಳ ಬಗ್ಗೆ ಹೇಳಿದಾಗ ಅದು ಸರಿ ಎಂದು ನನಗೆ ತೋರಿ ಆಗಿನಿಂದಲೇ ವಿರೋಧವಾದ ಮನೋಭಾವ ಬೆಳೆದು ಬಂದಿತ್ತು. ಅವರ ವಿರುದ್ಧವಾಗಿ ಎದ್ದು ನಿಂತಿದ್ದೇನೆ.

ತಾವೆಲ್ಲರೂ ಈ ನಿರ್ಣಯವನ್ನು ವಿರೋಧ ಮಾಡದೆ ಸರ್ವಾನುಮತದ ಸ್ವಾಗತ ಮಾಡಿದ್ದಕ್ಕಾಗಿ ತಮಗೆಲ್ಲರಿಗೂ ನಾನು ಅಭಿನಂದಿಸುತ್ತೇನೆ. ಈ ಮಹತ್ತರವಾದ ನಿರ್ಣಯವನ್ನು ತಮ್ಮಅಧ್ಯಕ್ಷತೆಯಲ್ಲಿ ಚರ್ಚೆ ಮಾಡಿ ಅಂಗೀಕರಿಸುತ್ತಿದ್ದೇವೆ. ಇದು ಹೆಮ್ಮೆ ಮತ್ತು ಸಂತೋಷ ಪಡುವ ವಿಚಾರ. ತಮ್ಮಘನ ಅಧ್ಯಕ್ಷತೆಯಲ್ಲಿ ಈ ಒಂದು ಚರಿತ್ರಾರ್ಹವಾದ ಘಟನೆ ನಡೆದಿರುವುದು ನಮ್ಮಪುಣ್ಯ ಹಾಗೂ ಶುಭ ಸಂಕೇತವೆಂದು ತಿಳಿದು ನಾನು ತಮನ್ನು ಮತ್ತೊಮ್ಮೆ ಅಭಿನಂದಿಸಿ ಈ ನಿರ್ಣಯಕ್ಕೆ ತಮ್ಮೆಬರ ಬೆಂಬಲವನ್ನು ಕೊಡಬೇಕೆಂದು ಪ್ರಾರ್ಥನೆ ಮಾಡಿಕೊಂಡು ನನ್ನ ಮಾತುಗಳನ್ನು ಮುಗಿಸುತ್ತೇನೆ.

(ಎಲ್ಲರೂ ಕರತಾಡನ ಮಾಡಿ ಸಂತೋಷ ವ್ಯಕ್ತಪಡಿಸಿದರು)


ಅಧ್ಯಕ್ಷರು:
ನಾನು ಈ ನಿರ್ಣಯವನ್ನು ಸಭೆಯ ಒಪ್ಪಿಗೆಗೆ ಹಾಕುತ್ತೇನೆ, ಅದು ಹೀಗೆ:

ಭಾರತದ ಸಂವಿಧಾನದಲ್ಲಿ ನಮೂದಿಸಿದ ಈ ರಾಜ್ಯದ ಹೆಸರನ್ನು ಕರ್ನಾಟಕ ಎಂಬುದಾಗಿ ಬದಲಾಯಿಸಬೇಕೆಂದೂ ಈ ಸಭೆಯವರು ತಮ್ಮ ಖಚಿತ ಅಭಿಪ್ರಾಯವನ್ನು ಘೋಷಿಸಿ ಈ ಬಗ್ಗೆ ಅಗತ್ಯವಾದ ಸಂವಿಧಾನದ ತಿದ್ದುಪಡಿಗಳನ್ನು ರಾಜ್ಯ ಸರ್ಕಾರದವರು ಪಡೆದುಕೊಳ್ಳಲು ಕ್ರಮ ಕೈಗೊಳ್ಳಬೇಕೆಂದು ಈ ಸಭೆಯವರು ಶಿಫಾರಸ್ಸು ಮಾಡುತ್ತಾರೆ (ಎಲ್ಲಾ ಸದಸ್ಯರು ಜಯಕಾರ ಮಾಡಿದರು.)

ಅಧಕ್ಷರು:

ನಿರ್ಣಯದ ವಿರೋಧ ಯಾರು ಇಲ್ಲವಾದ್ದರಿಂದ ಈ ನಿರ್ಣಯವನ್ನು (ಸರ್ವಾನುಮತದಿಂದ) ಅಂಗೀಕರಿಸಲ್ಪಟ್ಟಿತ್ತು. The Resolution was Adopted


ಶ್ರೀ ವಾಟಾಳ್‌ ನಾಗರಾಜ್‌:
ಈ ಶುಭ ಸಂತೋಷದ ಸಮಯದಲ್ಲಿ ಸಂತೋಷ ಸೂಚಕವಾಗಿ ನಾನು ಈ ಮಲ್ಲಿಗೆ ಹೂಗಳನ್ನು ಎಲ್ಲರ ಮೇಲೆಯೂ ಚೆಲ್ಲುತ್ತೇನೆ. (ವಾಟಾಳ್‌ ನಾಗರಾಜರು ಮತ್ತು ಎಸ್‌. ಬಂಗಾರಪ್ಪನವರು ಮಲ್ಲಿಗೆ ಹೂಗಳನ್ನು ಚೆಲ್ಲಿದರು)

ಶ್ರೀ ಡಿ. ದೇವರಾಜ್‌ ಅರಸ್‌:
ನಾನು ಈಗ ಕರ್ನಾಟಕಕ್ಕೆ ಎಂದು ಹೇಳುತ್ತೇನೆ. ತಾವೆಲ್ಲರೂ ಒಕ್ಕಂಠದಿಂದ ಜಯವಾಗಲಿ ಎಂದು ಹೇಳಬೇಕು.

ಶ್ರೀ ಡಿ. ದೇವರಾಜ್‌ ಅರಸ್‌:
 ಕರ್ನಾಟಕಕ್ಕೆ.

ಎಲ್ಲ ಸದಸ್ಯರು:
ಜಯವಾಗಲಿ.
(ಎಲ್ಲಾ ಸಧಸ್ಮರು ಕರ್ನಾಟಕಕ್ಕೆ ಜಯವಾಗಲಿ ಎಂದು ಘೋಷಣೆಯನ್ನು ಮತ್ತು ಕರತಾಡನವನ್ನು
ಮಾಡಿದರು).

--------

(ಆಕರ: ಪ್ರತಿಭಾವಂತ ಸಂಸದೀಯ ಪಟುಗಳ ಬದುಕು ಬರಹ ಮಾಲಿಕೆ: ಡಿ. ದೇವರಾಜ ಅರಸು. ಪ್ರಕಟಣೆ: ಗ್ರಂಥಾಲಯ ಉಪಸಮಿತಿ, ಕರ್ನಾಟಕ ವಿಧಾನಸಭೆ ಸಚಿವಾಲಯ. ಇಸವಿ: 2,000)

ಶುಕ್ರವಾರ, ಅಕ್ಟೋಬರ್ 02, 2020

ಇತಿಹಾಸದ ಪುಟಗಳಿಗೆ ಮರಳಲು ಬಯಸುವವರಿಗೆ 'ಬಿಜೆಪಿ 25+1' ಕೃತಿ ದಾರಿದೀಪ! - ಮೇಜರ್ ಡಾ. ಕುಶ್ವಂತ್ ಕೋಳಿಬೈಲು ಅವರ ವಿಮರ್ಶೆ

 ರಮೇಶ ದೊಡ್ಡಪುರರು ಬರೆದ BJP 25 + 1 ಪುಸ್ತಕವನ್ನು ಸುಮಾರು ಒಂದು ವಾರದ ಕೆಳಗೆ ಓದಿ ಕೆಳಗಿಟ್ಟಿದ್ದೆ. ನಿನ್ನೆಯ ದಿನ ಅವರ ಜೊತೆ ಮಾತನಾಡಿದ ನಂತರ ( ಆಫ್ ದಿ ರೆಕಾರ್ಡ್ !!)  ಪುಸ್ತಕದ ಬಗ್ಗೆ ಒಂದಷ್ಟು ಬರೆಯಬೇಕೆನಿಸಿತು.ಸಮಕಾಲೀನ ರಾಜಕೀಯ ಬೆಳವಣಿಗೆಗಳ ವಿಶ್ಲೇಷಣೆಯಿರುವ ಈ ಪುಸ್ತಕ ರಾಜ್ಯದ ಕಳೆದ ದಶಕದ ರಾಜಕೀಯ ಬೆಳವಣಿಗೆಗಳ ಅನೇಕ ಸೂಕ್ಷ್ಮ ವಿಚಾರಗಳ ಮೇಲೆ ಬೆಳಕು ಚೆಲ್ಲಿದೆ. ಅಂತರಾಷ್ಟ್ರೀಯ ಮತ್ತು ರಾಷ್ಟ್ರೀಯ ರಾಜಕೀಯ ಮತ್ತು ಸಾಮಾಜಿಕ ಬೆಳವಣಿಗೆಗಳ ಬಗ್ಗೆ ಓದಿ ತಿಳಿಯುವ ಚಟವಿರುವ ನಾನು ಲೇಖಕರು  ಈ ಪುಸ್ತಕದಲ್ಲಿ ಸರಳ ರೀತಿಯಲ್ಲಿ ಅನೇಕ ಕುತೂಹಲಕಾರಿ ವಿಚಾರಗಳನ್ನು ಹೇಳಿದನ್ನು ಓದಿ ಅನುಭವಿಸಿದ್ದೇನೆ. ಸೋಜಿಗದ ಸಂಗತಿಯೆಂದರೆ ಅನೇಕ ಸೂಕ್ಷ್ಮ ವಿಚಾರಗಳನ್ನು ಅವರು ಬರೆಯದೆ ನಮ್ಮ ಗ್ರಹಿಕೆಗೆ ಬಿಟ್ಟುಬಿಟ್ಟಿದ್ದಾರೆ (ಉದಾಹರಣೆಗೆ - Why did not Bjp get a clear mandate in 2018 Vidhanasabha polls)

Click here to Purchase Book

ಆ ವಿಷಯಕ್ಕೆ ಆಮೇಲೆ ಬರುತ್ತೇನೆ..
ಮೊದಲಿಗೆ ಲೇಖಕರಿಗೆ ಶುಭಾಶಯಗಳನ್ನು ತಿಳಿಸಬೇಕಿದೆ.ಈ ಮಾದರಿಯ ಪುಸ್ತಕಗಳ ಆಯಾ ಕಾಲಘಟ್ಟದ ರಾಜಕೀಯ ಬೆಳವಣಿಗೆಗಳನ್ನು ದಾಖಲಿಸುವ ಮಹತ್ವದ ಕೆಲಸವನ್ನು ಮಾಡುತ್ತವೆ. ಕನ್ನಡದ ಪತ್ರಿಕೋದ್ಯಮ ವೈಬ್ರೆಂಟ್ ಮತ್ತು ಶಕ್ತಿಶಾಲಿಯಾಗಿದ್ದ ಕಾಲವೂ ಇತ್ತು. ಗುಂಡೂರಾಯರ ಸರಕಾರವನ್ನು ಅಲ್ಲಾಡಿಸುವಲ್ಲಿ ಲಂಕೇಶ್ ಪತ್ರಿಕೆ ಪ್ರಮುಖ ಪಾತ್ರವಹಿಸಿದಂತೆ. ಆದರೆ ಸಮಕಾಲೀನ ರಾಜಕೀಯ ವಿದ್ಯಮಾನಗಳ ಬಗೆಗೆ ಪುಸ್ತಕಗಳು ಕನ್ನಡದಲ್ಲಿ ಕಡಿಮೆ (ನನಗೆ ತಿಳಿದ ಮಟ್ಟಿಗೆ). ಹಾಗಾಗಿ ಈ ಪುಸ್ತಕ ಮುಂದಿನ ದಿನಗಳಲ್ಲಿ ಇತಿಹಾಸದ ಪುಟಗಳಿಗೆ ಮರಳಲು ಬಯಸುವವರಿಗೆ ದಾರಿದೀಪ!!
ಆಯಾ ಕಾಲಘಟ್ಟದ ಸಾಮಾಜಿಕ ಮತ್ತು ರಾಜಕೀಯ ವಿದ್ಯಮಾನಗಳನ್ನು ನಾನು ಈಗಿನ ತನಕ ಗ್ರಹಿಸಿಕೊಂಡದ್ದು ಆಗಿನ ಸಮಕಾಲೀನ‌ ನಾಯಕರ ಆತ್ಮಕಥೆಗಳ ಮೂಲಕ. ಆತ್ಮಕಥೆಗಳು ಅನೇಕ ಬಾರಿ ವಾಸ್ತವತೆಯಿಂದ ದೂರ ಸರಿದು ಸ್ವಪ್ರಶಂಸೆಗೆ ಸೀಮಿತವಾಗಿತ್ತದೆ ಮತ್ತು biased ಇರುವ ಸಂಭವವೂ ಇರುತ್ತದೆ. ಲೇಖಕರು Pro BJP ಪರವಾಗಿ / ಅಥವಾ ಬಲಪಂಥೀಯ ಸಿದ್ಧಾಂತದ ಪರವಾಗಿ  biased ಅಂತ ಅನಿಸದಿದ್ದರೂ ಒಂದಷ್ಟು ಸಾಫ್ಟನೆಸ್ ಇರುವುದಂತೂ ಸತ್ಯ.. After all we all are biased.. ನಮ್ಮ ನಮ್ಮ ಸ್ನೇಹಿತರೆಂದರೆ ಯಾರಿಗೆ ಇಷ್ವವಿರುವುದಿಲ್ಲ ಹೇಳಿ!! ಆದರೆ ಮೆಚ್ಚಬೇಕಾದ ಅಂಶವೆಂದರೆ ಲೇಖಕರು ಬಿಜೆಪಿಯ ಕಹಿಸತ್ಯಗಳ ಮೇಲೂ ಬೆಳಕು ಚೆಲ್ಲುವುದರ ಜೊತೆಗೆ ಬೇರೆ ನಾಯಕರ ಒಳ್ಳೆಯತನವನ್ನೂ ಗಮನಿಸಿದ್ದಾರೆ.
ಉದಾಹರಣೆಗೆ
೧) ಬೆಂಗಳೂರಿನ‌ ರಾಜಕೀಯ ನಾಯಕರ ಪಕ್ಷಾತೀತ ಸ್ನೇಹಗಳು ಮತ್ತು "ತಾಳ ಮೇಳ"
೨) ಶ್ರೀಮತಿ ತೇಜಸ್ವಿ ಅನಂತಕುಮಾರರಿಗೆ ಟಿಕೆಟ್ ಕೊಡದಿರುವ ಹಿಂದಿದ್ದ ಪೊಲಿಟಿಕಲ್ ದೂರದೃಷ್ಟಿ!!
೩) ಚುನಾವಣಾ ಪ್ರಣಾಳಿಕೆಗಳನ್ನು ಗಂಭೀರವಾಗಿ ತಗೆದುಕೊಂಡು ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯರ ದಿಟ್ಟತನ.
ಈ ಪುಸ್ತಕದಲ್ಲಿ ಎರಡು ಪ್ರಮುಖ ವಿಷಯಗಳಿವೆ.
ಪುಸ್ತಕದ ಹೆಸರೇ ಹೇಳುವಂತೆ "ಬಿಜೆಪಿ 25+1" ೨೦೧೯ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಒಂದು ರಾಜಕೀಯ ಪಕ್ಷವಾಗಿ ಮಾಡಿದ ಅದ್ಭುತವಾದ ಸ್ಟ್ರಾಟಜಿಗಳು. ರಾಜಕೀಯ ಭಾಷೆಯಲ್ಲಿ ಹೇಳಬೇಕೆಂದರೆ ಪ್ರತಿ ಜಿಲ್ಲಾ ಮಟ್ಟದಲ್ಲಿ ಮಾಡಿದ ಸ್ಥಳೀಯ "ವರ್ಕೌಟುಗಳು"

ಮೇಜರ್ ಡಾ. ಕುಶ್ವಂತ್ ಕೋಳಿಬೈಲು

ಉದಾಹರಣೆಗೆ - ಖರ್ಗೆಸಂತ್ರಸ್ತರನ್ನು ಒಗ್ಗೂಡಿಸಿದ್ದು.. ಸುಮ್ಮನೆ ಸುಮಕ್ಕನ ಬೆನ್ನಿಗೆ ನಿಂತದ್ದು ಇತ್ಯಾದಿ..
ಮೇಲಿನ ವಿಷಯಗಳು ಈ ಪುಸ್ತಕದಲ್ಲಿ ಬಹಳ ಸ್ವಷ್ಟವಾಗಿ ಮೂಡಿಬಂದಿದೆ..
ಪುಸ್ತಕದ ಮೊದಲ  ಅರ್ಧ ಭಾಗದಲ್ಲಿ  ಕರ್ನಾಟಕದ 2018ರ ವಿಧಾನಸಭೆ ಚುನಾವಣೆಗಳ ಆಸುಪಾಸಿನ ಬೆಳವಣಿಗೆಗಳ ಬಗ್ಗೆ ಬರೆದಿದ್ದಾರೆ. ಆಡಳಿತಾರೂಢ ಸರಕಾರದ ವಿರುದ್ಧ ಅಲ್ಪಸಂಖ್ಯಾತರನ್ನು ಓಲೈಸುವದರ ಆಪಾದನೆಯ ಜೊತೆಗೆ ಒಕ್ಕಲಿಗ ಮತ್ತು ಲಿಂಗಾಯಿತ ವಿರೋಧಿ ಸರಕಾರವೆಂಬ ಬಲವಾದ #perception ಸೃಷ್ಟಿಯಾಗಿದ್ದರೂ ಬಿಜೆಪಿಗೆ ಯಾಕೆ ಸ್ಪಷ್ಟವಾದ ಬಹುಮತ ಬರಲಿಲ್ಲವೆಂಬ ಕಹಿ ಸತ್ಯಗಳನ್ನು ಅವರು ಹೇಳದೇ ಉಳಿಸಿದ್ದಾರೆ.
ಆ ಚುನಾವಣೆಯಲ್ಲಿ ಪವರ್ ಸೆಂಟರ್ಗಳಾದ ಯಡಿಯೂರಪ್ಪ , ಬಿ ಯಲ್ ಸಂತೋಷ್ ಮತ್ತು ದೆಹಲಿಯಿಂದ ಬಂದು ಹೆಡ್ ಮಾಸ್ಟರ್ ಮಾದರಿಯಲ್ಲಿ ಕೆಲಸ ಮಾಡುತ್ತಿದ್ದ ಅಮಿತ್ ಶಾ ಈ ಮೂವರೂ ಶಕ್ತಿ ಮೀರಿ ದುಡಿದರೂ ಬಹುಮತದ ಗುರಿಮುಟ್ಟದ ಬಗ್ಗೆ ಇನ್ನೂ ಆಳವಾಗಿ ಬರೆಯಬಹುದಿತ್ತು. ಅವರ individual brilliance ಅದರೆ collective failure ಬಗ್ಗೆ ಪತ್ರಕರ್ತ ಮತ್ತು ರಾಜಕೀಯ ವಿಶ್ಲೇಷಕರಾಗಿರುವ ಲೇಖಕರು ಕುಟುಕಬೇಕಿತ್ತು. ಹೊಗಳಲು ಅವರ ಅಭಿಮಾನಿಗಳು ಇದ್ದಾರೆ, ಪತ್ರಕರ್ತರ ಪೆನ್ನು ಇರುವುದೇ ತಿವಿಯಲು..


ಭಾನುವಾರ, ಜುಲೈ 14, 2019

ತಾರೆಗಳ ದಾಟುವೆವು- ಚಂದಿರನ ಮೀಟುವೆವು

ಚಂದ್ರನ ಮೇಲೆ ಮಾನವ ಕಾಲಿಟ್ಟ ೫೦ನೇ ವರ್ಷಕ್ಕೆ ಸರಿಯಾಗಿ ಭಾರತದ ಚಂದ್ರಯಾನ-೨ ಅರಂಭವಾಗುತ್ತಿದೆ. ಭಾರತೀಯನೊಬ್ಬ/ಒಬ್ಬಳು ಚಂದ್ರನ ಮೇಲೆ ಕಾಲಿಡುವ ಮುನ್ನ ಅಲ್ಲಿ ಅಶೋಕ ಚಕ್ರದ ಮುದ್ರೆ ಒತ್ತುವ ಕಾಲ. ಈ ಹೊತ್ತಿನಲ್ಲಿ ಇವತ್ತಿನ ವಿಜಯವಾಣಿ ವಿಜಯ_ವಿಹಾರದಲ್ಲಿ ಪರಿಚಯಾತ್ಮಕ ಲೇಖನ, ಸಣ್ಣ ವಿಶ್ಲೇಷಣೆ ಜತೆಗೆ.





ಶನಿವಾರ, ಫೆಬ್ರವರಿ 09, 2019

ನರೇಂದ್ರ ಮೋದಿ ಸರ್ಕಾರ 2014-2019- ಕರ್ನಾಟಕ

ಹಾಲು ಬೆಳಕಿನ ಉಜಾಲಾ ಯೋಜನೆ

ವಿದ್ಯುತ್ತನ್ನು ಉಳಿತಾಯ ಮಾಡುವುದು, ಹೆಚ್ಚಿನ ವಿದ್ಯುತ್ತನ್ನು ಉತ್ಪಾದಿಸುವುದಕ್ಕಿಂತಲೂ ಕಷ್ಟದ ಕೆಲಸ ಎಂದು ಪ್ರಧಾನಿ ನರೇಂದ್ರ ಮೋದಿಯವರು ತಿಳಿಸುವ ಮೂಲಕ ವಿದ್ಯುತ್ ಉಳಿತಾಯದ ಮಹತ್ವವನ್ನು 2015ರ ಜ.5ಕ್ಕೆ ಸಾರಿದ್ದರು. ಕಡಿಮೆ ವಿದ್ಯುತ್ ಬಳಸಿ ಹೆಚ್ಚಿನ ಪ್ರಕಾಶಮಾನವಾದ ಬೆಳಕು ನೀಡುವ, ದೀರ್ಘಕಾಲ ಬಾಳಿಕೆ ಬರುವ ಎಲ್‌ಇಡಿ ಬಲ್ಬ್‌ಗಳನ್ನು ಪ್ರಕಾಶ ಪಥ ಎಂದು ಬಣ್ಣಿಸಿದ್ದರು. ಜನಸಾಮಾನ್ಯನ ಬದುಕಿನಲ್ಲಿ ಹಾಲು ಬೆಳಕು ಚೆಲ್ಲುವ ಯೋಜನೆಗೆ ಉಜಾಲಾ ನಾಮಕರಣ ಮಾಡಿದ್ದರು.
ಮಾರುಕಟ್ಟೆಯಲ್ಲಿ 300-400 ರೂ. ಇದ್ದ ಎಲ್‌ಇಡಿ ಬಲ್ಬ್‌ಗಳನ್ನು ಬೃಹತ್ ಪ್ರಮಾಣದಲ್ಲಿ ಕಂಪನಿಯಿಂದ ಸರ್ಕಾರವೇ ಖರೀದಿಸಿದ್ದರಿಂದ ಬೆಲೆ ಕೇವಲ 130 ರೂ.ಗೆ ದೊರಕಿತ್ತು. ಸರ್ಕಾರದ ಪರಿಶ್ರಮ ಹಾಗೂ ಜನರ ತೆರಿಗೆ ಹಣವನ್ನು ವೆಚ್ಚ ಮಾಡುವ ಮುನ್ನ ಎಚ್ಚರಿಕೆ ವಹಿಸುವ ಪ್ರಧಾನಿ ಮೋದಿಯವರು, ಮೊದಲಿಗೆ ನವದೆಹಲಿಯ ಸೌತ್ ಬ್ಲಾಖ್‌ನಲ್ಲಿರುವ ತಮ್ಮ ಕಚೇರಿಗೆ ಎಲ್‌ಇಡಿ ಬಲ್ಬ್‌ಗಳನ್ನು ಅಳವಡಿಸಿ ಅದರ ಸಾಧಕ ಬಾಧಕ ಪರೀಕ್ಷೆ ಮಾಡಿದ್ದರು. ಪ್ರತಿ ತಿಂಗಳಿಗೆ 7 ಸಾವಿರ ಯುನಿಟ್ ವಿದ್ಯುತ್ ಉಳಿತಾಯ ಆಗುತ್ತದೆ ಎಂಬುದು ಖಾತ್ರಿಯಾದ ಬಳಿಕವಷ್ಟೆ ಸಾರ್ವಜನಿಕರಿಗೆ ವಿತರಣೆ ಆರಂಭಿಸಲಾಯಿತು.
2015ರಿಂದ ಇಲ್ಲಿವರೆಗೆ ದೇಶಾದ್ಯಂತ 32, 13, 45, 671(32.13 ಕೋಟಿ) ಎಲ್‌ಇಡಿ ಬಲ್ಬ್ ವಿತರಣೆ ಮಾಡಲಾಗಿದೆ. ಇದರಿಂದ ಪ್ರತಿ ವರ್ಷ 16,693 ಕೋಟಿ ರೂ. ಮೊತ್ತದ 41, 732 ದಶಲಕ್ಷ ಕಿ.ವ್ಯಾ ವಿದ್ಯುತ್ ಉಳಿತಾಯವಾಗುತ್ತಿದೆ. ಸಾಮಾನ್ಯ ಬಲ್ಬ್ ಬಳಕೆಯಿಂದ ಹೊರಸೂಸುವ ವಾರ್ಷಿಕ 3, 38, 03, 081 ಟನ್ ಇಂಗಾಲಾಮ್ಲವನ್ನು(ಸಿಒ2) ಇದರಿಂದ ಕಡಿಮೆ ಮಾಡಲಾಗಿದೆ.
ಕರ್ನಾಟಕದಲ್ಲಿ 2,19,25, 981 ಎಲ್‌ಇಡಿ ಬಲ್ಬ್ ವಿತರಣೆ ಮಾಡಲಾಗಿದೆ. ಇದರಿಂದ ಪ್ರತಿ ವರ್ಷ 1,139 ಕೋಟಿ ರೂ. ಮೊತ್ತದ 28,47, 461 ಮೆ. ವ್ಯಾ. ವಿದ್ಯುತ್ ಉಳಿತಾಯವಾಗುತ್ತಿದೆ. ಸಾಮಾನ್ಯ ಬಲ್ಬ್ ಬಳಕೆಯಿಂದ ಹೊರಸೂಸುವ 23, 06,44 ಟನ್ ವಾರ್ಷಿಕ ಇಂಗಾಲಾಮ್ಲವನ್ನು(ಸಿಒ2) ಕಡಿಮೆ ಮಾಡಲಾಗಿದೆ.
ಬಲ್ಬ್ ಮಾತ್ರವಲ್ಲದೆ, ಎಲ್ಲ ವಿದ್ಯುತ್ ಉಪಕರಣಗಳನ್ನು ಉತ್ತಮ ಗುಣಮಟ್ಟದ್ದೇ ಬಳಸುವುದರಿಂದ ವಿದ್ಯುತ್ ಉಳಿತಾಯ ಸಾಧ್ಯ ಎಂಬುದನ್ನು ಸಾರಲು, ಉಜಾಲಾ ಯೋಜನೆಯಲ್ಲಿ ಟ್ಯೂಬ್‌ಲೈಟ್ ಹಾಗೂ ಫ್ಯಾನ್‌ಗಳನ್ನೂ ವಿತರಣೆ ಮಾಡಲಾಗಿದೆ. ರಾಜ್ಯದಲ್ಲಿ 54,083 ಫ್ಯಾನ್ ಹಾಗೂ 3,92, 484 ಟ್ಯೂಬ್ ಲೈಟ್‌ಗಳನ್ನು ವಿತರಣೆ ಮಾಡಿ ಬಡವರ ಮನೆಗಳಲ್ಲಿ ಪ್ರತಿ ತಿಂಗಳು ಪಾವತಿಸುವ ವಿದ್ಯುತ್ ಬಿಲ್‌ನಲ್ಲಿ ಉಳಿತಾಯದ ಜತೆಗೆ ಪರಿಸರ ಸಂರಕ್ಷಣೆಯನ್ನೂ ಮಾಡಲಾಗುತ್ತಿದೆ.

ಜಿಲ್ಲಾವಾರು ಎಲ್‌ಇಡಿ ಬಲ್ಬ್ ವಿತರಣೆ(23.01.2019ರವರೆಗೆ)

ವಿಜಯಪುರ 26,149
ಬಾಗಲಕೋಟೆ 84,561
ಬೆಳಗಾವಿ 13,09,048
ಧಾರವಾಡ 3,98,305
ಹಾವೇರಿ 1,38,350
ಉತ್ತರ ಕನ್ನಡ 1,36,453
ಶಿವಮೊಗ್ಗ 10,27,836
ಚಿಕ್ಕಮಗಳೂರು 5,01,627
ಉಡುಪಿ 4,04,953
ಹಾಸನ  6,75,884
ದಕ್ಷಿಣ ಕನ್ನಡ  20,19,325
ಕೊಡಗು  4,72,674
ಬೀದರ್  75,561
ಕಲಬುರ್ಗಿ  3,66,993
ಯಾದಗಿರಿ  81,270
ಗದಗ  66,278
ರಾಯಚೂರು  1,38,067
ಕೊಪ್ಪಳ  72,394
ದಾವಣಗೆರೆ  2,99,869
ಬಳ್ಳಾರಿ  4,89,519
ಚಿತ್ರದುರ್ಗ  48,777
ತುಮಕೂರು  4,48,304
ಚಿಕ್ಕಬಳ್ಳಾಪುರ  3,41,415
ಬೆಂಗಳೂರು ಗ್ರಾ.  8,39,868
ಕೋಲಾರ  2,40,182
ಬೆಂಗಳೂರು ನ.  76,55,461
ಮಂಡ್ಯ  5,05,971
ರಾಮನಗರ  4,25,184
ಮೈಸೂರು  23,21,173
ಚಾಮರಾಜನಗರ  3,14,530
-------------------------------------------------------------

 ಉಜ್ವಲ ಯೋಜನೆ

ಮನೆಮಂದಿಗೆಲ್ಲ ಅಡುಗೆ ಮಾಡಿ ಬಡಿಸುವ ಗ್ರಾಮೀಣ ಹಾಗೂ ನಗರದ ಬಡ ಮಹಿಳೆಯರು ಪ್ರತಿ ದಿನ 400 ಸಿಗರೇಟ್‌ನಷ್ಟು ಹೊಗೆ ಸೇವಿಸುತ್ತಿದ್ದರು.!! ಹೌದು. ಯಾವುದೇ ದುಶ್ಚಟಗಳು ಇಲ್ಲದಿದ್ದಾಗ್ಯೂ, ಪ್ರತಿ ನಿತ್ಯ ಕಟ್ಟಿಗೆ ಒಲೆ ಎದುರು ಅಡುಗೆ ಮಾಡುತ್ತಿದ್ದ ತಾಯಂದಿರು ಇಷ್ಟು ಪ್ರಮಾಣದ ಸಿಗರೇಟ್ ಸೇದುವುದರಿಂದ ಬರುವಷ್ಟು ಹೊಗೆಯನ್ನು ಸೇವಿಸಿ ಶ್ವಾಸಕೋಶ ಸೇರಿ ಅನೇಖ ತೊಂದರೆಗಳಿಒಗೆ ಈಡಾಗುತ್ತಿದ್ದರು.
ಮಹಿಳೆಯರ ಈ ಸಂಕಷ್ಟವನ್ನು ಹೋಗಲಾಡಿಸಲು ಪ್ರಧಾಣಿ ನರೇಂದ್ರ ಮೋದಿ ಅವರು ಉಜ್ವಲಾ ಯೋಜನೆಯನ್ನು ಜಾರಿಗೆ ತಂದರು. ಸರ್ಕಾರದಿಂದ ಯೋಜನೆಗೆ ಹಣ ನೀಡುವುದು ಒಂದೆಡೆಯಾದರೆ, ಬಡ ಹಾಗೂ ಗ್ರಾಮೀಣ ಮಹಿಳೆಯರ ಬಗ್ಗೆ ಸಮಾಜದಲ್ಲಿ ಸಂವೇದನೆ ಹೆಚ್ಚಿಸುವತ್ತಲೂ ಪ್ರಧಾನಿಯವರು ದೃಢ ಹೆಜ್ಜೆ ಇಟ್ಟರು.
ಸಾಕಷ್ಟು ಉತ್ತಮ ಆದಾಯವಿರುವ, ಎಲ್‌ಪಿಜಿಗೆ ಸರ್ಕಾರದಿಂದ ನೀಡುವ ಸಬ್ಸಿಡಿ ಹಣದ ಅವಶ್ಯಕತೆ ಇಲ್ಲದೆ ಮಾರುಕಟ್ಟೆ ದರದಲ್ಲೆ ಖರೀದಿಸಬಲ್ಲ ಆರ್ಥಿಕ ಶಕ್ತಿ ಉಳ್ಳವರು ಸಬ್ಸಿಡಿ ಹಣವನ್ನು ತ್ಯಜಿಸುವ ಗಿವ್ ಇಟ್ ಅಪ್ ಯೋಜನೆಗೆ 27. ಮಾರ್ಚ್ 2015ರಲ್ಲಿ ಚಾಳನೆ ನೀಡಲಾಯಿತು. ಸಬ್ಸಿಡಿ ತ್ಯಜಿಸಿದ್ದರಿಂದ ಉಳಿತಾಯವಾಗುವ ಹಣದಲ್ಲಿ ಗ್ರಾಮೀಣ ಮಹಿಳೆಯರಿಗೆ ಉಚಿತ ಸಂಪರ್ಕ ನೀಡುವುದಾಗಿ ಘೋಷಿಸಲಾಯಿತು. ಸಮಾಜದಲ್ಲಿದ್ದ ಸಂವೇದನೆ, ಪ್ರಧಾನಿ ಮೋದಿಯವರ ಮನವಿಗೆ ಸ್ಪಂದಿಸಿತು. 2016ರ ವೇಳೆಗೇ ದೇಶದಲ್ಲಿ 1 ಕೋಟಿ ಎಲ್‌ಪಿಜಿ ಬಳಕೆದಾರರು ಸಬ್ಸಿಡಿ ಬೇಡ ಎಂದು ಘೋಷಿಸಿದರು.
ಅಂದಿನಿಂದ ದೇಶದ 715 ಜಿಲ್ಲೆಗಳಲ್ಲಿ ಐಒಜನೆ ಜಾರಿಯಾಗಿದೆ. ಇಲ್ಲಿವರೆಗೆ 8,14, 88, 334 ಉಚಿತ ಎಲ್‌ಪಿಜಿ ಸಂಪರ್ಕಗಳನ್ನು ನೀಡಲಾಗಿದೆ. ಉಚಿತ ಸಂಪರ್ಕದ ಜತೆಗೆ ಉಚಿತ ಗ್ಯಾಸ್ ಸ್ಟೌ ಹಾಗೂ ಮೊದಲ ಸಿಲಿಂಡರ್ ಉಚಿತವಾಗಿ ನೀಡಲಾಯಿತು. ಅತಿ ಹೆಚ್ಚು ಉಚಿತ ಸಂಪರ್ಕ ಪಡೆದ ರಾಜ್ಯಗಳಲ್ಲಿ ಕರ್ನಾಟಕ ಸ್ಥಾನ ಪಡೆದಿದೆ.

ಪ್ರಮುಖ ರಾಜ್ಯಗಳು(22.01. 2019ರವರೆಗೆ)

ಕರ್ನಾಟಕ 19,68,234
ಮಹಾರಾಷ್ಟ 36,10,706
ತಮಿಳುನಾಡು    28,81,892
ಉತ್ತರಪ್ರದೇಶ   1,06,03,600
ಅಸ್ಸಾಂ 24,38,582
ಬಿಹಾರ 72,07,006
ಛತ್ತೀಸ್‌ಗಢ 26,73,737
ಗುಜರಾತ್ 20,10,870
ಮಧ್ಯಪ್ರದೇಶ     55,15,416

-------------------------------------

ಕರ್ನಾಟಕದಲ್ಲಿ ಚಾಲ್ತಿಯಲ್ಲಿರುವ ರೈಲ್ವೆ ಯೋಜನೆಗಳು

-ಹೊಸ ಹಳಿ ನಿರ್ಮಾಣ: 16 ಯೋಜನೆಗಳು, 2,146 ಕಿ.ಮೀ ಉದ್ದ, 21, 098 ಕೋಟಿ ರೂ. ಮೊತ್ತ
-ಡಬ್ಲಿಂಗ್ ಕಾಮಗಾರಿ: 15 ಯೋಜನೆಗಳು, 1,923 ಕಿ.ಮೀ ಉದ್ದ, 14, 105 ಕೋಟಿ ರೂ. ಮೊತ್ತ. 
ಹೊಸ ಹಳಿ ಯೋಜನೆಗಳು

ಮಾರ್ಗ ಉದ್ದ(ಕಿ.ಮೀ)

ಕಡೂರು- ಚಿಕ್ಕಮಗಳೂರು- ಸಕಲೇಶಪುರ 93
ಹೆಜ್ಜಾಲ-ಚಿಕ್ಕಮಗಳೂರು 142
ಹುಬಬ್ಳ್ಳೀ- ಅಂಕೋಲ 167
ಮುನಿರಾಬಾದ್- ಮೆಹಬೂಬ್‌ನಗರ್ 246
ರಾಯದುರ್ಗ- ತುಮಕೂರು 213
ಕಡಪ- ಬೆಂಗಳೂರು 255.40
ಬಾಗಲಕೋಟೆ- ಕುಡಚಿ 142
ಶಿವಮೊಗ್ಗ-ಹರಿಹರ 79
ವೈಟ್‌ಫೀಲ್ಡ್-ಕೋಲಾರ 53
ಮಾರಿಕುಪ್ಪಮ್-ಕುಪ್ಪಮ್ 24
ತುಮಕೂರು-ದಾವಣಗೆರೆ 200
ಗದಗ- ವಾಡಿ 252
ಚಿಕ್ಕಬಳ್ಳಾಪುರ- ಗೌರಿಬಿದನೂರು 44
ಚಿಕ್ಕಬಳ್ಳಾಪುರ- ಪುಟ್ಟಪರ್ತಿ- ಶ್ರೀ ಸತ್ಯಸಾಯಿ ನಿಲಯಂ 103
ಶ್ರೀನಿವಾಸಪುರ- ಮದನಪಲ್ಲಿ 75
ಗದಗ-ಯಳವಿಗಿ 58

ಮೋದಿ ಸರ್ಕಾರದ ಅವಧಿಯಲ್ಲಿ:

  1. -26 ರೈಲ್ವೆ ಮೇಲ್ಸೇತುವೆ, 41 ರೈಲ್ವೆ ಕೆಳಸೇತುವೆ ಮಂಜೂರು
  2. - ಒಟ್ಟು 2754 ಕಿ.ಮೀ. ಉದ್ದದ 21 ಹೊಸ ಮಾರ್ಗ ಸಮೀಕ್ಷೆಗೆ ನಿರ್ಧಾರ
  3. - ಒಟ್ಟು 2510 ಕಿ.ಮೀ ಉದ್ದದ 13 ಮಾರ್ಗಗಳಲ್ಲಿ ವಿದ್ಯುದೀಕರಣ ಮಂಜೂರು
-----------------------------------

ಬಡವರ ಕೌಶಲಕ್ಕೆ ಪ್ರಧಾನಿ ಮುದ್ರಾ

ಸಣ್ಣ ಉದ್ಯಮಿಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಮೈಕ್ರೊ ಯುನಿಟ್ಸ್ ಡೆವಲಪ್‌ಮೆಂಟ್ ಆಯಂಡ್ ರಿ ಫೈನಾನ್ಸ್ ಏಜೆನ್ಸಿ(ಮುದ್ರಾ) ಹಾಗೂ ಪ್ರಧಾನ ಮಂತ್ರಿ ಮುದ್ರಾ ಯೋಜನೆಯನ್ನು ಜಾರಿ ಮಾಡಲಾಯಿತು.
ಯೋಜನೆ ಜಾರಿಯಾದ ವರ್ಷಕ್ಕೆ ಅಂದರೆ 2017ರಲ್ಲಿ ದೇಶಾದ್ಯಂತ 2, 46, 437 ಕೋಟಿ ರೂ. ಸಾಲ ನೀಡಲಾಗಿತ್ತು. ಇದರಲ್ಲಿ ಶೇ. 40 ಸಾಲವನ್ನು ಮಹಿಳೆಯರಿಗೆ, ಶೇ. 33 ಪ್ರಮಾಣವನ್ನು ಎಸ್‌ಸಿಎಸ್‌ಟಿ, ಒಬಿಸಿ ಸಮುದಾಯದವರಿಗೆ ನೀಡಲಾಯಿತು. ಯೋಜನೆಯಿಂದ ಒಟ್ಟಾರೆ 4.81 ಕೋಟಿ ಸೂಕ್ಷ್ಮ ಸಾಲಗಾರರು ಇದರಿಂದ ಲಾಭ ಪಡೆದಿದ್ದರು.

ಕರ್ನಾಟಕದಲ್ಲಿ ಮುದ್ರಾ ಪ್ರಭಾವ

ವಿಭಾಗ 2015-16 2016-17 2017-18 2018-19(ಅಂದಾಜು)

ಶಿಶು (50 ಸಾವಿರ ರೂ.ವರೆಗೆ ಸಾಲ) 9071.71 8166.92 10351.83 7064.60
ಕಿಶೋರ(50,001-5 ಲಕ್ಷ ರೂ.ವರೆಗೆ)  4744.94 5402.85 7177.23 4889.05
ತರುಣ(5,00001-10 ಲಕ್ಷ ರೂ.ವರೆಗೆ)2652.78 3720.93 4971.61 3160.36
(ಕೋಟಿ ರೂ.ಗಳಲ್ಲಿ)
ಮಧ್ಯಮ ವರ್ಗ, ಬಡ ವರ್ಗದವರಲ್ಲಿರುವ ಕೌಶಲಗಳಿಗೆ ರೆಕ್ಕೆ ನೀಡುವ ವಿಶಿಷ್ಠ ಯೋಜನೆ ಮುದ್ರಾ. ನಮ್ಮ ಜನರಲ್ಲಿರುವ ಔದ್ಯಮಿಕ ಕೌಶಲವನ್ನು ಉತ್ತೇಜಿಸುವ ಹಾಗೂ ಅವರಲ್ಲಿ ಸ್ವಾವಲಂಬನೆಯನ್ನು ಮೂಡಿಸುವಲ್ಲಿ ಯೋಜನೆ ಸಹಕಾರಿ.
-ನರೇಂದ್ರ ಮೋದಿ, ಪ್ರಧಾನಿ

-------------------------------------

ಆಯಷ್ಮಾನ್ ಭಾರತ

ವೈದ್ಯಕೀಯ ಕ್ಷೇತ್ರ ವ್ಯಾಪಾರಿಕರಣವಾಗುತ್ತಿರುವ ಸಮಯದಲ್ಲಿ, ಬಡವರು ಆರೋಗ್ಯ ಸೇವೆ ಪಡೆಯಲು ಸರ್ಕಾರದ ಅತ್ಯಂತ ಮಹತ್ವದ ಕಾರ್ಯಕ್ರಮ ಆಯುಷ್ಮಾನ್ ಭಾರತ ಯೋಜನೆಯನ್ನು 2018ರಲ್ಲಿ ಪ್ರಧಾನಿ ಮೋದಿ ಸರ್ಕಾರ ಆರಂಭಿಸಿತು.
ದೇಶದ 10 ಕೋಟಿ ಕುಟುಂಬಗಳ ಸುಮಾರು 50 ಕೋಟಿ ಬಡ ಜನರಿಗೆ, ಕುಟುಂಬವೊಂದಕ್ಕೆ ವಾರ್ಷಿಕ 5 ಲಕ್ಷ ರೂ.ವರೆಗೆ ಆರೋಗ್ಯ ವಿಮೆ ನೀಡುವ ಇಂತಹ ಮತ್ತೊಂದು ಕಾರ್ಯಕ್ರಮ ಜಗತ್ತಿನಲ್ಲೆ ಇಲ್ಲ. 2018ರ ಸೆಪ್ಟೆಂಬರ್‌ನಲ್ಲಿ ಯೋಜನೆ ಜಾರಿಯಾದಾಗಿನಿಂದ ದೇಶಾದ್ಯಂತ 8.9 ಲಕ್ಷ ಜನರು ದುಬಾರಿ ಚಿಕಿತ್ಸೆಗಳನ್ನು ಉಚಿತವಾಗಿ ಪಡೆದಿದ್ದಾರೆ.
ಯೋಜನೆ ಜಾರಿ ಮಾಡಿ 130 ದಿನದಲ್ಲೆ(ಜನವರಿ 29ರವರೆಗೆ) 1 ಕೋಟಿಗೂ ಹೆಚ್ಚೂ(1,00,28,168) ಕುಟುಂಬಗಳಿಗೆ, ಅಂದರೆ ಸುಮಾರು ನಾಲ್ಕು ಕೋಟಿಗೂ ಹೆಚ್ಚು ಜನರಿಗೆ ಇ ಕಾರ್ಡ್ ಮುದ್ರಿಸಿ ಅವರ ಮನೆ ಬಾಗಿಲಿಗೆ ತಲುಪಿಸಲಾಗಿದೆ.
-----------------------------------------------

ಉದ್ಯಮ ಸ್ನೇಹಿ ವಾತಾವರಣ

ಏಕಕಾಲಕ್ಕೆ ಲಕ್ಷಾಂತರ ಜನರಿಗೆ ಉದ್ಯೋಗ ಕಲ್ಪಿಸುವ ಉದ್ಯಮ ವಲಯಕ್ಕೆ ಪ್ರೋತ್ಸಾಹ ನೀಡುವ ಸಲುವಾಗಿ ದೇಶದಲ್ಲಿ ಉದ್ಯಮ ಸ್ನೇಹಿ ವಾತಾವರಣವನ್ನು ನಿರ್ಮಿಸಲು ಮೋದಿ ಸರ್ಕಾರ 2015ರಲ್ಲಿ ಯೋಜನೆಯೊಂದನ್ನು ರೂಪಿಸಿತು. ವಿಶ್ವ ಬ್ಯಾಂಗ್ ಸಮೂಹದ ಜತೆ ಸೇರಿ ಪ್ರತಿ ರಾಜ್ಯದ ಉದ್ಯಮ ಸ್ನೇಹಿ ವಾತಾವರಣ ರ‌್ಯಾಂಕಿಂಗ್ ಪ್ರಕಟಿಸುವ ಮೂಲಕ ರಾಜ್ಯಗಳ ನಡುವೆ ಆರೋಗ್ಯಕರ ಸ್ಪರ್ಧೆಗೆ ಪಾರದರ್ಶಕ ವ್ಯವಸ್ಥೆ ರೂಪಿಸಲಾಯಿತು. ರಾಜ್ಯಗಳ ನಡುವಣ ರ‌್ಯಾಂಕ್‌ಗಳಲ್ಲಿ ಸ್ವಲ್ಪ ಪ್ರಮಾಣದ ಏರಿಳಿತ ಕಂಡರೂ, ಒಟ್ಟಾರೆ ಉದ್ಯಮ ಸ್ನೇಹಿ ವಾತಾವರಣ ನಿರ್ಮಾಣದಲ್ಲಿ ಅಗಾಧ ಬದಲಾವಣೆ ಕಂಡಿದೆ. 2015ರಲ್ಲಿ ಉದ್ಯಮ ಸ್ನೇಹಿ ಮಾರ್ಗಸೂಚಿಗಳ ಪಾಲನೆಯಲ್ಲಿ ಕೇವಲ ಶೇ.48.50 ಗುರಿ ಸಾಧಿಸಿದ್ದ ಕರ್ನಾಟಕ 2017ರ ವೇಳೆಗೆ ದ್ವಿಗುಣಗೊಂಡು ಶೇ.96.42ಕ್ಕೇರಿರುವುದೇ ಇದಕ್ಕೆ ಉದಾಹರಣೆ.

ಕರ್ನಾಟಕದಲ್ಲಿ ಉದ್ಯಮ ಸ್ನೇಹಿ ವಾತಾವರಣ(ಈಸ್ ಆಫ್ ಡೂಯಿಂಗ್ ಬಿಸಿನೆಸ್)

ಇಸವಿ ಅಂಕ(ಶೇ.) ರ‌್ಯಾಂಕ್
2015 48.50 9
2016 88.39 9
2017 96.42 8
----------------------------------------

ಕೇಂದ್ರ ಸರ್ಕಾರದಿಂಧ ಅನುದಾನ


ಕೇಂದ್ರ ಸರ್ಕಾರದಿಂಧ ಲಭಿಸಬೇಕಿದ್ದ ಅನುದಾನದಲ್ಲಿ 13ನೇ ಹಣಕಾಸು ಆಯೋಗ(ಯುಪಿಎ ಅವಧಿ) ಹೋಲಿಕೆಯಲ್ಲಿ 14ನೇ ಹಣಕಾಸು ಆಯೋಗ(ಎನ್‌ಡಿಎ ಅವಧಿ) ಅನ್ಯಾಯ ಮಾಡಿದೆ ಎಂದು ಕರ್ನಾಟಕದಲ್ಲಿ ಗುಲ್ಲೆಬ್ಬಿಸಲಾಗುತ್ತದೆ. ಆದರೆ ಸತ್ಯಾಂಶ ಬೇರೆಯೇ ಇದೆ.
ಕೇಂದ್ರದಿಂದ ಕರ್ನಾಟಕಕ್ಕೆ ಹಣದ ಹರಿವು(ಹಣಕಾಸು ಆಯೋಗವಾರು)

ಕ್ರಮ.ಸಂ.      ವಿಭಾಗ                                               13ನೇ ಆಯೋಗ          14ನೇ ಆಯೋಗ          ಹೆಚ್ಚಳ(ರೂ.)          ಹೆಚ್ಚಳ(ಶೇ.)

1                 ಕೇಂದ್ರದ ತೆರಿಗೆಯಲ್ಲಿ ರಆಜ್ಯದ ಪಾಲು           61691.02              186925.00        125233.98              203.00
2                 ರಾಜ್ಯ ವಿಪತ್ತು ಪರಿಹಾರ ನಿಧಿ(ಎಸ್‌ಡಿಆರ್‌ಎಫ್)667.07                  1145.25             478.18                   71.68
3                 ಸ್ಥಳೀಯ ಸಂಸ್ಥೆಗಳಿಗೆ ಅನುದಾನ                  6534.44                15145.54           8611.10                 131.78

ಕೇಂದ್ರದಿಂದ ಕರ್ನಾಟಕಕ್ಕೆ ಹಣದ ಹರಿವು(ವರ್ಷವಾರು)

               ವಿಭಾಗ 2015-16 2016-17

  • ಕೇಂದ್ರದ ತೆರಿಗೆ ಪಾಲು 23983.34 28759.94
  • ಹಣಕಾಸು ಆಯೋಗ ಅನುದಾನ 1741.44 2773.16
  • ಇತರೆ ಅನುದಾನ 12187.31 14797.69 (ಕೇಂದ್ರ ಪ್ರಾಯೋಜಿತ ಯೋಜನೆ ಸೇರಿ)

ಕೇಂದ್ರ ಸರ್ಕಾದಿಂದ ಸಹಾಯಾನುದಾನ

ಇಸವಿ ಮೊತ್ತ(ಕೋಟಿ ರೂ.)
2015-16 13928.75
2016-17 15703.19
2017-18 16082.91
---------------------------------------

ಕರ್ನಾಟಕದಲ್ಲಿ ಹೊಸ ರಾಷ್ಟ್ರೀಯ ಹೆದ್ದಾರಿ ಹಾಗೂ ನಿರ್ವಹಣೆ


ಇಸವಿ  ರಸ್ತೆಯ ಉದ್ದ(ಕಿ.ಮೀ) ವೆಚ್ಚ(ಕೋಟಿ ರೂ)
2015-16  311  173.66
2016-17  678  217.15
2017-18  771  167.82

ಚತುಷ್ಪಥ ಮತ್ತು ಷಟ್ಪಥ

ಇಸವಿ  ಉದ್ದ(ಕಿ.ಮೀ)
2015-16  114.59
2016-17 507.93
2017-18  355.25


ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ಗ್ರಾಮೀಣ ರಸ್ತೆ ನಿರ್ಮಾಣ


ಇಸವಿ ಗುರಿ(ಕಿ.ಮೀ)  ಸಾಧನೆ(ಕಿ.ಮಿ) 
2014-15   650   470
2015-16   715   999
2016-17   800  897
2017-18  66  58
2018-19  12  6.6

----------------------------------

ಅಮೃತ್ ಯೋಜನೆ

ಸಣ್ಣ ನಗರಗಳಲ್ಲಿನ ಮೂಲಸೌಕರ್ಯ ಅಭಿವೃದ್ಧಿಯ ಅವಶ್ಯಕತೆಯನ್ನು ಮನಗಂಡ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಅಟಲ್ ಮಿಷನ್ ಫಾರ್ ರಿಜುವಿನೇಷನ್ ಆ್ಯಂಡ್ ಅರ್ಬನ್ ಟ್ರಾನ್ಸ್‌ಫಾರ್ಮೇಷನ್(ಅಮೃತ್) ಯೋಜನೆಯನ್ನು ಜಾರಿ ಮಾಡಿದರು. ಈ ಯೋಜನೆಗೆ ಕರ್ನಾಕದ 27 ನಗರಗಳನ್ನು ಆಯ್ಕೆ ಮಾಡಲಾಯಿತು. ಯೋಜನೆ ಜಾರಿಗೆ ಕರ್ನಾಟಕಕ್ಕೆ 2015ರ ಡಿ.28ಕ್ಕೆ 118.46 ಕೋಟಿ ರೂ., 2016ರ ಆ.23ಕ್ಕೆ 154.32 ಕೋಟಿ ರೂ., 20174 ಏ.28ಕ್ಕೆ 190.98 ಕೋಟಿ ರೂ., 20184 ಮಾ.28ಕ್ಕೆ 88.08 ಕೋಟಿ ರೂ., 2017ರ ಡಿ.22ಕ್ಕೆ 61.49 ಕೋಟಿ ರೂ.,  2018ರ ಮೇ 28ಕ್ಕೆ 544.01 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.

ಅಮೃತ್ ಯೋಜನೆಗೆ ಆಯ್ಕೆಯಾದ ರಾಜ್ಯದ ನಗರಗಳು

  1.  ಬಾದಾಮಿ
  2. ಬಾಗಲಕೋಟೆ
  3. ಬಿಬಿಎಂಪಿ
  4. ಬೆಳಗಾವಿ
  5. ಬಳ್ಳಾರಿ
  6. ಭದ್ರಾವತಿ
  7. ಬೀದರ್
  8. ವಿಜಯಪುರ
  9. ಚಿಕ್ಕಮಗಳೂರು
  10. ಚಿತ್ರದುರ್ಗ
  11. ದಾವಣಗೆರೆ
  12. ಗದಗ-ಬೆಟಗೇರಿ
  13. ಗಂಗಾವತಿ
  14. ಕಲಬುರ್ಗಿ
  15. ಹಾಸನ
  16. ಹೊಸಪೇಟೆ
  17. ಹುಬ್ಬಳ್ಳಿ-ಧಾರವಾಡ
  18. ಕೋಲಾರ
  19. ಮಂಡ್ಯ
  20. ಮಂಗಳೂರು
  21. ಮೈಸೂರು
  22. ರಾಯಚೂರು
  23. ರಾಣೆಬೆನ್ನೂರು
  24. ರಾಬರ್ಟ್‌ಸನ್‌ಪೇಟೆ
  25. ಶಿವಮೊಗ್ಗ
  26. ತುಮಕೂರು
  27. ಉಡುಪಿ
-------------------------------------------------


ಹೃದಯ್ ಯೋಜನೆ

ಐತಿಹಾಸಿಕ ಹಿನ್ನೆಲೆಯುಳ್ಳ ನಗರಗಳಲ್ಲಿ ಮೂಲಸೌಕರ್ಯ ವೃದ್ಧಿಸಿ ಅಲ್ಲಿನ ಪ್ರವಾಸೋದ್ಯಮಕ್ಕೆ ಇಂಬು ನೀಡುವ ನಿಟ್ಟಿನಲ್ಲಿ ಹೃದಯ್ ಯೋಜನೆಯನ್ನು ಘೋಷಿಸಲಾಯಿತು. ಯೋಜನೆಯಲ್ಲಿ ಕರ್ನಾಟಕದ ಬಾದಾಮಿ ಆಯ್ಕೆಯಾಗಿದೆ. ಬಾದಾಮಿಯಲ್ಲಿ ಇಲ್ಲಿವರೆಗೆ ಒಟ್ಟು ನಾಲ್ಕು ಯೋಜನೆಗಳಿಗೆ ಒಪ್ಪಿಗೆ ನೀಡಲಾಗಿದೆ. 
ಬಾದಾಮಿ(2019ರ ಜನವರಿವರೆಗೆ ಪ್ರಗತಿ)
ಕ್ರ. ಸಂ.      ಯೋಜನೆ                                                                 ಯೋಜನೆ ಮೊತ್ತ      ಬಿಡುಗಡೆಯಾದ ಮೊತ್ತ      ಪ್ರಗತಿ(ಶೇ.)
1             ರಸ್ತೆ ಸಾರಿಗೆ ಮೂಲ ಸೌಕರ್ಯ, ಪಾರ್ಕಿಂಗ್, ಸೂಚನಾ ಫಲಕ.     14.25                2.75                           60
2             ಜೀರೋ ವೇಸ್ಟ್ ಮ್ಯಾನೇಜ್‌ಮೆಂಟ್                                        1.59               0.46                           100
3             ಹಳೆ ಬಾದಾಮಿಯಲ್ಲಿ ಒಳಚರಂಡಿ                                          0.42.40          0.37.87                       97
4             ಐತಿಹಾಸಿಕ ಕಟ್ಟಡ ಅಭಿವೃದ್ಧಿ                                                2.17               0.41                              0

               ಒಟ್ಟು                                                                          18.44               4.01                            57.23


----------------------------------

ಸ್ಮಾರ್ಟ್ ಸಿಟಿ

ನಗರಗಳಲ್ಲ ಮೂಲಸೌಕರ್ಯ ಅಭಿವೃದ್ಧಿಪಡಿಸಿ ಅಲ್ಲಿನ ನಾಗರಿಕರಿಗೆ ಉತ್ತಮ ಜೀವನ ನಿರ್ವಹಣೆ ವಾತಾವರಣ ನಿರ್ಮಿಸುವುದು ಸ್ಮಾರ್ಟ್‌ಸಿಟಿ ಯೋಜನೆಯ ಉದ್ದೇಶ. ಪ್ರಧಾನಿ ನರೇಂದ್ರ ಮೋದಿಯವರ ಅಚ್ಚುಮೆಚ್ಚಿನ ಯೋಜನೆಗಳಲ್ಲೊಂದಾದ ಸ್ಮಾರ್ಟ್ ಸಿಟಿ ಯೋಜನೆಗೆ ಕರ್ನಾಟಕದಿಂದ ಆರು ನಗರಗಳನ್ನು ಆಯ್ಕೆ ಮಾಡಲಾಯಿತು. ಆಯಾ ನಗರಗಳಲ್ಲಿ ಕೇಂದ್ರ ಸರ್ಕಾರದ ಸಹಯೋಗದಲ್ಲಿ ರೂಪಿಸಿರುವ ವಿಶೇಷ ವಾಹಕಗಳ(ಎಸ್‌ಪಿವಿ) ಮೂಲಕ ಜಿಲ್ಲಾಧಿಕಾರಿಗಳ ಯೋಜನೆಗೆ ಅನುಗುಣವಾಗಿ ಹಣ ಬಿಡುಗಡೆ ಮಾಡಲಾಗುತ್ತಿದೆ. ವಿವಿಧ ರಾಜ್ಯಗಳು, ನಗರಗಳ ಅಭಿವೃದ್ಧಿ ಹಾಗೂ ಸಂಸ್ಕೃತಿ ವಿಭಿನ್ನವಾದ ಕಾರಣ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಆಯಾ ನಗರಗಳ ಅವಶ್ಯಕತೆಗೆ ಅನುಗುಣವಾಗಿ ಯೋಜನೆ ರೂಪಿಸಲಾಗಿದೆ ಹಾಗೂ ಮಂಜೂರು ಮಾಡಲಾಗುತ್ತಿದೆ.

ಬೆಳಗಾವಿ:

ಭೂ ಅಂತರ್ಗತ ಕೇಬಲ್‌ಗೆ 168 ಕೋಟಿ ರೂ., ಸಾಗಣಿಕೆ ಹಾದಿ ಅಭಿವೃದ್ಧಿಗೆ 128 ಕೋಟಿ ರೂ., ಕೇಂದ್ರ ಹಾಗೂ ನಗರ ಬಸ್ ನಿಲ್ದಾಣ ಅಭಿವೃದ್ಧಿಗೆ 110 ಕೋಟಿ ರೂ., ಮೇಲ್ಸೇತುವೆ 129 ಕೋಟಿ ರೂ., ರೈಲ್ವೆ ಮೇಲ್ಸೇತುವೆಗೆ 101 ಕೋಟಿ ರೂ., ಎಸ್‌ಟಿಪಿ ಹಾಗೂ ಇನ್ನಿತರೆ ತ್ಯಾಜ್ಯ ನೀರು ನಿರ್ವಹಣೆ ವ್ಯವಸ್ಥೆಗೆ 156 ಕೋಟಿ ರೂ., ತಾರಸಿ ಸೌರ ಘಟಕ 195 ಕೋಟಿ ರೂ., ಪವನ ವಿದ್ಯುತ್ ಉತ್ಪಾದನೆಗೆ 186 ಕೋಟಿ ರೂ., ಭೂ ಅಂತರ್ಗತ ಹೈ ಟೆನ್ಷನ್ ಲೈನ್ 316.27 ಕೋಟಿ ರೂ., ದಿನಪೂರ್ತಿ ನೀರು ಸರಬರಾಜು 427 ಕೋಟಿ ರೂ., ಬಸ್ ನಿಲ್ದಾಣಗಳು 130 ಕೋಟಿ ರೂ., ನಗರ ಅನಿಲ ಸರಬರಾಜು 150 ಕೋಟಿ ರೂ., ನದಿ ತೀರ ಅಭಿವೃದ್ಧಿ: ಆರ್ಥಿಕ ದುರ್ಬಲ ವರ್ಗಕ್ಕೆ ಕೈಗೆಟುಕುವ ದರದಲ್ಲಿ ಗೃಹ ನಿರ್ಮಾಣಕ್ಕೆ 84 ಕೋಟಿ ರೂ., ಬುಡಾ ಲೇಔಟ್‌ನಲ್ಲಿ ಕೈಗೆಟುಕುವ ದರದಲ್ಲಿ ಮನೆ ನಿರ್ಮಿಸಲು 43.52 ಕೋಟಿ ರೂ., ಹೆರಿಟೇಜ್ ಪಾರ್ಕ್ ನಿರ್ಮಾಣಕ್ಕೆ 26 ಕೋಟಿ ರೂ., ರೆಕ್ರಿಯೇಷನಲ್ ಸ್ಪೇಸಸ್ ನಿರ್ಮಾಣಕ್ಕೆ 15 ಕೋಟಿ ರೂ., ನಗರೋದ್ಯಾನ 5 ಕೋಟಿ ರೂ., ರಸ್ತೆ ಬದಿ ಮರ 2 ಕೋಟಿ ರೂ., ಕಲಾ ಗ್ಯಾಲರಿ ಮತ್ತು ಪ್ರದರ್ಶನ ಸ್ಥಳ ಹಾಗೂ ಮಕ್ಕಳ ವಿಜ್ಞಾನ ಪಾರ್ಕ್ 14 ಕೋಟಿ ರೂ., ಸರೋವರ ಅಭಿವೃದ್ಧಿಗೆ 10 ಕೋಟಿ ರೂ., ಇ ಆಡಳಿತಕ್ಕೆ 12 ಕೋಟಿ ರೂ., ನಳಿಕೆ ಮೂಲಕ ನಗರ ಅನುಲ ಸರಬರಾಜು ವ್ಯವಸ್ಥೆಗೆ 172.78 ಕೋಟಿ ರೂ.(ಪಿಪಿಪಿ ಮೂಲಕ),  ನೀಡಲಾಗಿದೆ.

ಮಂಗಳೂರು: 

ರಸ್ತೆ ಅಗಲೀಕರಣಕ್ಕೆ 150 ಕೋಟಿ ರೂ., ಪಾದಚಾರಿ ರಸ್ತೆ ಸಹಿತ ರಸ್ತೆ ಮೇಲ್ದರ್ಜೆ 150 ಕೋಟಿ ರೂ., ಸರ್ಕಾರಿ ಕಟ್ಟಡಗಳ ಮೇಲೆ ತಾರಸಿ ಸೌರ ಘಟಕ 203.32 ಕೋಟಿ ರೂ., ತ್ಯಾಜ್ಯ ನೀರು ಸಂಸ್ಕರಣೆಗೆ 128.86 ಕೋಟಿ ರೂ., ಐಪಿಡಿಎಸ್ ಪ್ರಸ್ತಾವನೆ 114.32 ಕೋಟಿ ರೂ., ಆರ್ಥಿಕ ದುರ್ಬಲ ವರ್ಗಕ್ಕೆ ಕೈಗೆಟುಕುವ ದರದಲ್ಲಿ ಗೃಹ ನಿರ್ಮಾಣಕ್ಕೆ 7.8 ಕೋಟಿ ರಊ., ವಾಟರ್ ಫ್ರಂಟ್ ಮರೀನಾ ಡೆವಲಪ್‌ಮೆಂಟ್ 78 ಕೋಟಿ ರೂ., ಜಲ ಮನರಂಜನಾ ಪಾರ್ಕ್ 10.84 ಕೋಟಿ ರೂ., ಹಸಿರು ಪ್ರದೇಶ ಅಭಿವೃದ್ಧಿ 7.02 ಕೋಟಿ ರೂ., ಸಾರ್ವಜನಿಕ ಸಾರಿಗೆ ಮಾಹಿತಿಗೆ ಆಯಪ್ ಆಧರಿತ ವ್ಯವಸ್ಥೆಗೆ 10 ಕೋಟಿ ರೂ. ನೀಡಲಾಗಿದೆ.

ದಾವಣಗೆರೆ: 

ಮಂಡಿಪೇಟೆ ಪ್ರದೇಶ ಅಭಿವೃದ್ಧಿಗೆ 372.9 ಕೋಟಿ ರೂ., ಮಂಡಿಪೇಟೆ ಪ್ರದೇಶ ಆರ್ಥಿಕ ಅಭಿವೃದ್ಧಿಗೆ 102.91 ಕೋಟಿ ರೂ.,ಒಳಚರಂಡಿ ವ್ಯವಸ್ಥೆಗೆ 161 ಕೋಟಿ ರೂ., ನಗರ ಸಾರಿಗೆ ಮಾಹಿತಿ ವ್ಯವಸ್ಥೆಗೆ 459.36 ಕೋಟಿ ರೂ.,    ಪ್ರದೇಶಕ್ಕೆ ಅನುಗುಣವಾಗಿ ಕಸದ ಬುಟ್ಟಿ ರಹಿತ ಕಸ ನಿರ್ವಹಣೆ ವ್ಯವಸ್ಥೆಯನ್ನು ಆಯಪ್ ಆಧರಿತ ನಿರ್ವಹಣೆಗೆ 37 ಕೋಟಿ ರೂ. ನೀಡಲಾಗಿದೆ.

ತುಮಕೂರು: 

ಸಮಗ್ರ ಬಸ್ ಟರ್ಮಿನಲ್ ಮರು ಅಭಿವೃದ್ಧಿ 174 ಕೋಟಿ ರೂ., ದಿನಪೂರ್ತಿ ನೀರು ಸರಬರಾಜು 259 ಕೋಟಿ ರೂ., ಒಳಚರಂಡಿ ವ್ಯವಸ್ಥೆಗೆ 223 ಕೋಟಿ ರೂ., ಭೂ ಅಂತರ್ಗತ ಕೇಬಲ್ 196 ಕೋಟಿ ರೂ., ಮೆಡಿಕಲ್ ಕಾಲೇಜ್ ಜತೆಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ 300 ಕೋಟಿ ರೂ., ಬೀದಿಬದಿ ದೀಪ ನಿರ್ವಹಣೆ ವ್ಯವಸ್ಥೆಗೆ 201 ಕೋಟಿ ರೂ., ಸರೋವರ ಪ್ರದೇಶ ಅಭಿವೃದ್ಧಿ 89 ಕೋಟಿ ರೂ., ಮಾರುಕಟ್ಟೆ ಪ್ರದೇಶಗಳ ಸ್ಥಾಪನೆಗೆ 2 ಕೋಟಿ ರೂ. ನೀಡಲಾಗಿದೆ.

ಶಿವಮೊಗ್ಗ: 

ಭೂ ಅಂತರ್ಗತ ಕೇಬಲ್ 264 ಕೋಟಿ ರೂ., ಹಸರಿರು ಹೊದಿಕೆ ಹೆಚ್ಚಳ 168.84 ಕೋಟಿ ರೂ., ಸುಸ್ಥಿರ ಯೋಜನೆಗಳು 248. 52 ಕೋಟಿ ರೂ.,  ನದಿ ತೀರ ಅಭಿವೃದ್ಧಿಗೆ 421 ಕೋಟಿ ರೂ. ಒದಗಿಸಲಾಗಿದೆ.

ಹುಬ್ಬಳ್ಳಿ ಧಾರವಾಡ: 

ನಗರದ ಕೇಂದ್ರ ಭಾಗ ಜೀರ್ಣೋದ್ಧಾರಕ್ಕೆ 114.78 ಕೋಟಿ ರೂ., ವೈಫೈ ಸೇವೆಯ ಜತೆಗೆ ಸಾರಿಗೆ ವ್ಯವಸ್ಥೆಗೆ 316.59 ಕೋಟಿ ರೂ., ವಿದ್ಯುತ್ ಸ್ಮಾರ್ಟ್ ಮೀಟರ್ ಜತೆಗೆ ಭೂ ಅಂತರ್ಗತ ವಿದ್ಯುತ್ ಮತ್ತು ಸಂಪರ್ಕ ತಂತಿಗೆ 190 ಕೋಟಿ ರೂ., ತಾರಸಿ ಸೌರ ವಿದ್ಯುತ್ ಘಟಕ 128.76 ಕೋಟಿ ರೂ., ನಗರ ಸ್ಥಳೀಯ ಸಂಸ್ಥೆಗಳಿಂದ ಕೈಗೊಳ್ಳುವ ತಂತ್ರಜ್ಞಾನಾಧಾರಿತ ಯೋಜನೆಗೆ 130 ಕೋಟಿ ರೂ., ಕೈಗೆಟುಕುವ ದರದಲ್ಲಿ ಮನೆಗೆ 103.32 ಕೋಟಿ ರೂ.,  ಸಾರ್ವಜನಿಕ ಸ್ಥಳಗಳ ಮೇಲ್ದರ್ಜೆಗೆ 89.65 ಕೋಟಿ ರೂ. ಹಾಗೂ ಗ್ರೀನ್ ಕಾರಿಡಾರ್‌ಗೆ 10 ಕೋಟಿ ರೂ. ನೀಡಲಾಗಿದೆ.

------------------------------------

ಜನೌಷಧಿ ಕೇಂದ್ರ

ವೈದ್ಯಕೀಯ ವೆಚ್ಚ ದಿನೇದಿನೆ ದುಬಾರಿಯಾಗುತ್ತಿರುವ ಹಿನ್ನ್ಲೆಯಲ್ಲಿ ಸಆಮಾನ್ಯ ಜನರು ಆರೋಗ್ಯಯುತ ಜೀವನ ಸಾಗಿಸುವುದು ದುಸ್ಥರವಾಗಿರುವಾಗ ಜನೌಷಧಿ ಯೋಜನೆ ಸಂಜೀವಿನಿಯಾಗಿ ಪರಿಣಮಿಸಿದೆ. ಅತ್ಯಂತ ಕಡಿಮೆ ಹಾಗೂ ರಿಯಾಯಿತಿ ದರದಲ್ಲಿ ಜನೌಷಧಿ ಕೇಂದ್ರಗಳಿಂದ ಗುಣಮಟ್ಟದ ಔಷಧಿ ಖರೀದಿಸುತ್ತಿರುವ ಕೋಟ್ಯಂತರ ಭಾರತೀಯರು ಇಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಕೊಂಡಾಡುತ್ತಿದ್ದಾರೆ. ಯೋಜನೆಯಲ್ಲಿ 700 ಔಷಧಿಗಳು ಹಾಗೂ 154 ಶಸ್ತ್ರಚಿಕಿತ್ಸೆ ಉಪಕರಣಗಳನ್ನು ಮಾರಾಟ ಮಾಡಲಾಗುತ್ತಿದೆ. 
ದೇಶಾದ್ಯಂತ ಸದ್ಯ ಒಟ್ಟು 4,844 ಜನೌಷಧಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಕರ್ನಾಟಕದಲ್ಲಿ 420 ಕೇಂದ್ರಗಳು ಈಗಾಗಲೆ ಸ್ಥಾಪನೆಯಾಗಿದ್ದು, ಸದ್ಯದಲ್ಲೆ 22 ಹೊಸ ಕೇಂದ್ರಗಳು ಕಾರ್ಯ ಆರಂಭಿಸಲಿವೆ.

ಮೆಗಾ ಫುಡ್ ಪಾರ್ಕ್

ಆಹಾರ ಸಂಸ್ಕರಣೆಯಿಂದ ರೈತರಿಗೆ ಹೆಚ್ಚಿನ ಆದಾಯ ದೊರಕುತ್ತದೆ ಎಂದರಿತ ಪ್ರಧಾನಿ ನರೇಂದ್ರ ಮೋದಿ ಸರ್ಕಾರ, ದೇಶಾದ್ಯಂತ ಮೆಗಾ ಫುಡ್ ಪಾರ್ಕ್‌ಗಳ ಸ್ಥಾಪನೆಗೆ ಒತ್ತು ನೀಡಿತು. ಇಲ್ಲಿಯವರೆಗೆ ದೇಶದಲ್ಲಿ 40 ಮೆಗಾ ಫುಡ್ ಪಾಕ್‌ಗಳಿಗೆ ಅನುಮತಿ ನೀಡಲಾಗಿದ್ದು, ಕರ್ನಾಕದಲ್ಲಿ ತುಮಕೂರಿನಲ್ಲಿ 144.33 ಕೋಟಿ ರಊ., ಹಾಗೂ ಮಂಡ್ಯದಲ್ಲಿ 113.83 ಕೋಟಿ ರೂ. ವೆಚ್ಚದಲ್ಲಿ ಸ್ಥಾಪನೆಯಾಗುತ್ತಿವೆ.
14 ಕೋಲ್ಡ್ ಚೈನ್ ಯೋಜನೆಗಳಿಗೆ ಹಣಕಾಸು ನೆರವು ನೀಡಲು ಒಪ್ಪಿಗೆ ನೀಡಲಾಗಿದೆ. 

-------------------------------

ಸ್ವಚ್ಛ ಭಾರತ ಮಿಷನ್(ಗ್ರಾಮೀಣ)

ಗ್ರಾಮೀಣ ಪ್ರದೇಶದಲ್ಲಿ ಸಾಂಕ್ರಾಮಿಕ ರೋಗಗಳು ಹರಡಲು ಪ್ರಮುಖವಾಗಿ ಬಯಲು ಬಹಿರ್ದೆಸೆ ಕಾರಣ ಎಂದು ಅನೇಕ ವರ್ಷಗಳ ಹಿಂದೆಯೇ ಕಂಡುಕೊಳ್ಳಲಾಗಿತ್ತು. ಆದರೆ ಬಯಲು ಬಹಿರ್ದೆಸೆಗೆ ತೆರಳುವ ಹವ್ಯಾಸವನ್ನು ಬದಲಿಸಿ ಸ್ವಚ್ಛ ಶೌಚಾಲಯ ನಿರ್ಮಿಸುವ ಯಶಸ್ವಿ ಅಭಿಯಾನವನ್ನು ಪ್ರಧಾನಿ ನರೇಂದ್ರ ಮೋದಿ ಆರಂಭಿಸಿದರು. ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರ ಗೌರವಕ್ಕೆ ಧಕ್ಕೆ ತರುತ್ತಿದ್ದ, ಅನೇಕ ಬಾರಿ ಬಯಲು ಬಹಿರ್ದೆಸೆಗೆ ತೆರಳಿದಾಗ ಅತ್ಯಾಚಾರಕ್ಕೊಳಗಾಗುತ್ತಿದ್ದ ಮಹಿಳೆಯರಿಗೆ ಯೋಜನೆ ಗೌರವ ತಂದುಕೊಟ್ಟಿದೆ. ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ನಡೆಯುತ್ತಿರುವ ಯೋಜನೆ ಇಡೀ ವಿಶ್ವದಲ್ಲಿ ಅತಿ ದೊಡ್ಡ ಹವ್ಯಾಸ ಬದವಾಣೆ ಯೋಜನೆ ಎಂತಲೂ ಶ್ಲಾಘನೆ ಪಡೆದಿದೆ.
ಪ್ರಧಾನಿ ಮೋದಿಯವರ ಸರ್ಕಾರ ಅಸ್ತಿತ್ವಕ್ಕೆ ಬಂದ 2014-15ರಲ್ಲಿ ದೇಶಾದ್ಯಂತ 48.95 ಲಕ್ಷ ವೈಯಕ್ತಿಕ ಶೌಚಾಲಯಗಳಿದ್ದವು. ಇದೀಗ 9.2 ಕೋಟಿಗೆ ಹೆಚ್ಚಳವಾಗಿದೆ. ಅದೇ ರೀತಿ ಕರ್ನಾಟಕದಲ್ಲಿ 2014-15ರಲ್ಲಿ 7.7 ಲಕ್ಷ ವೈಯಕ್ತಿಕ ಶೌಚಾಲಯಗಳಿದ್ದವು. ಇದೀಗ 43. 97 ಲಕ್ಷ ಶೌಚಾಲಯ ನಿರ್ಮಾಣದೊಂದಿಗೆ ಇಡೀ ರಾಜ್ಯ ಬಯಲು ಬಹಿರ್ದೆಸೆ ಮುಕ್ತ ಎಂದು ಸದ್ಯದಲ್ಲೆ ಘೋಷಿಸಲ್ಪಡುವ ಹಂತಕ್ಕೆ ತಲುಪಿದೆ.



-------------------

ಹೊಸ ಬಜೆಟ್ ಘೋಷಣೆಗಳು

2019-20ರ ಮಧ್ಯಂತರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಅನೇಕ ಕೊಡುಗೆಗಳನ್ನು ಸರ್ಕಾರ ನೀಡಿದೆ.

7 ರೈಲು ಮಾರ್ಗಗಳು

1. ಚಿಕ್ಕಬಳ್ಳಾಪುರ-ಗೌರಿಬಿದನೂರು
2. ಗದಗ-ಯಲವಗಿ
3. ಗದಗ-ವಾಡಿ
4. ಶಿವಮೊಗ್ಗ-ರಾಣೆಬೆನ್ನೂರು
5. ರಾಯದುರ್ಗ-ತುಮಕೂರು
6. ದಾವಣಗೆರೆ-ಚಿತ್ರದುರ್ಗ-ತುಮಕೂರು
7. ಬಾಗಲಕೋಟೆ-ಕುಡಚಿ
  • ಮೆಟ್ಟುಪಾಳ್ಯಂವರೆಗೂ ವಿಸ್ತರಣೆಗೊಳ್ಳಲಿರುವ 148 ಕಿ.ಮೀ ಉದ್ದದ ಮೈಸೂರು-ಚಾಮರಾಜನಗರ ರೈಲ್ವೆ ಹಳಿ ಗೇಜ್ ಪರಿವರ್ತನೆಗೆ ಒಪ್ಪಿಗೆ ನೀಡಲಾಗಿದೆ.
  • ಯಶವಂತಪುರ-ಚನ್ನಸಂದ್ರ(121.78 ಕಿ.ಮೀ), ಬೈಯಪ್ಪನಹಳ್ಳಿ-ಹೊಸೂರು(145 ಕಿ.ಮೀ), ಬೆಂಗಳೂರು ವೈಟ್‌ಫೀಲ್ಡ್-ಬೆಂಗಳೂರು ಸಿಟಿ-ಕೆ.ಆರ್.ಪುರ(23 ಕಿ.ಮೀ), ಹೊಸಪೇಟೆ-ಹುಬ್ಬಳ್ಳಿ-ರೋಮಡಾ- ತಿನ್ನೆಘಾಟ್-ವಾಸ್ಕೋಡಗಾಮ ಮಾರ್ಗದ ಡಬ್ಲಿಂಗ್ ಕಾಮಗಾರಿಗೆ ಸಮ್ಮತಿ.
  • ಹಾವೇರಿಯ ಸವಣೂರು, ಧಾರವಾಡದ ನವಲೂರು, ದಾವಣಗೆರೆಯ ತೋಳಿಹುಣಸೆ ರೈಲು ನಿಲ್ದಾಣ ಅಭಿವೃದ್ಧಿ.
  • ಬೆಂಗಳೂರಿನಲ್ಲಿ ರೈಲ್ವೆ ಅಭಿವೃದ್ಧಿ ಕೈಗೊಳ್ಳಲು 40 ಕೋಟಿ ರೂ. ಅನುದಾನ
  • ನಮ್ಮ ಮೆಟ್ರೊಗೆ 1012 ಕೋಟಿ ರೂ.
  • ನಿಮ್ಹಾನ್ಸ್‌ಗೆ 450 ಕೋಟಿ ರೂ.
  • ಬೆಂಗಳೂರಿನ ಯುನಾನಿ ವೈದ್ಯ ಸಂಸ್ಥೆಗೆ 40 ಕೋಟಿ ರಊ.
  • ಮೈಸೂರಿನ ವಾಕ್ ಶ್ರವಣ ಸಂಸ್ಥೆಗೆ 55 ಕೋಟಿ ರೂ.
  • ರಾಜ್ಯದ ಹೆದ್ದಾರಿಗಳ ಅಭಿವೃದ್ಧಿಗೆ 300 ಕೋಟಿ ರೂ.
  • ನಗರಗಳ ಕುಡಿಯುವ ನೀರಿನ ಯೋಜನೆಗಳಿಗೆ 217 ಕೋಟಿ ರೂ
--------------------------------------------

ಬರ ಪರಿಹಾರ

೨೦೧೮ರ ಮುಂಗಾರು ಹಂಗಾಮಿನ ಬರ ಪರಿಹಾರಕ್ಕೆ ಕೇಂದ್ರದಿಂದ ಅನುದಾನದ ಖಾತರಿ ದೊರಕುತ್ತಿದ್ದಂತೆ ಈ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರ ತಾರತಮ್ಯ ಧೋರಣೆ ತಳೆದಿದೆ ಎಂಬ ಚರ್ಚೆ ಪುನಃ ಮುನ್ನೆಲೆಗೆ ಬಂದಿತ್ತು. ಆದರೆ, ಬರ ಪರಿಹಾರ ನೀಡುವುದರಲ್ಲಿ ಯುಪಿಎಗಿಂತ ಎನ್‌ಡಿಎ ಬೆಸ್ಟ್‌ ಎನ್ನುವುದನ್ನಿ ಅಂಕಿಅಂಶಗಳೇ ಸಾರಿ ಹೇಳುತ್ತಿವೆ.
ಮುಂಗಾರಿನಲ್ಲಿ ರಾಜ್ಯದ 100 ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಿ ಮಾರ್ಗಸೂಚಿ ಅನುಸಾರ 2,434 ಕೋಟಿ ರೂ. ನೀಡುವಂತೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದೀಗ 949.49 ಕೋಟಿ ರೂ. ಬಿಡುಗಡೆಗೆ ಕೇಂದ್ರದ ಉನ್ನತಾಧಿಕಾರ ಸಮಿತಿ ಒಪ್ಪಿಗೆ ನೀಡಿದೆ. ಮಹಾರಾಷ್ಟ್ರಕ್ಕೆ ನೀಡಲಾಗುವ ಪರಿಹಾರ ಮೊತ್ತಕ್ಕೆ ಹೋಲಿಸಿದರೆ ರಾಜ್ಯಕ್ಕೆ ಕೊಡುತ್ತಿರುವುದು ಅತ್ಯಲ್ಪವೆಂಬ ಆಕ್ಷೇಪ ವ್ಯಕ್ತವಾಗಿದೆ. ಕೇಂದ್ರ ಸರಕಾರ ಅನ್ಯಾಯ ಮಾಡಿರುವುದಾಗಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರೇ ಆರೋಪಿಸಿದ್ದಾರೆ.
ತೀವ್ರತರ ಬರ ಹಾಗೂ ನೆರೆ ಹಾವಳಿಯಾದಾಗ ಕೇಂದ್ರ ವಿಪತ್ತು ಪರಿಹಾರ ನಿಧಿಯಿಂದ (ಎನ್‌ಡಿಆರ್‌ಎಫ್‌) ನೆರವು ಕಲ್ಪಿಸಲಾಗುತ್ತದೆ. ಇದಕ್ಕೆ ಮುನ್ನ ಕೇಂದ್ರದ ಅಧ್ಯಯನ ತಂಡವೂ ಸ್ಥಳಕ್ಕೆ ಭೇಟಿ ನೀಡಿ ಪರಾಮರ್ಶೆ ಕೈಗೊಳ್ಳುತ್ತದೆ. ನಂತರ ಕೇಂದ್ರದ ಅಂತರ್‌ ಸಚಿವಾಲಯದ ಉನ್ನತಾಧಿಕಾರ ಸಮಿತಿಯ ಸಭೆಯಲ್ಲಿ ಪರಹಾರದ ಮೊತ್ತದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ. ಯುಪಿಎ ಅಧಿಕಾರದಲ್ಲಿದ್ದ 10 ವರ್ಷದ ಅವಧಿಯಲ್ಲಿ ಎನ್‌ಡಿಆರ್‌ಎಫ್‌ನಿಂದ ಬಂದ ಅನುದಾನಕ್ಕೆ ಹೋಲಿಸಿದರೆ ಕೇವಲ 5 ವರ್ಷದಲ್ಲಿ ಎನ್‌ಡಿಎ ಸರಕಾರ ಅತಿ ಹೆಚ್ಚಿನ ಮೊತ್ತ ನೀಡಿದೆ.
ಎನ್‌ಡಿಎನಿಂದ ದುಪ್ಪಟ್ಟು ನೆರವು!
ಕೇಂದ್ರ ಸರಕಾರದ ಅಧಿಕೃತ ಮಾಹಿತಿಯಂತೆ ಯುಪಿಎ ಕಾಲದಲ್ಲಿ 2004ರಿಂದ 2014ರವರೆಗೆ ಎನ್‌ಡಿಆರ್‌ಎಫ್‌ನಿಂದ ಒಟ್ಟಾರೆ 3,579.86 ಕೋಟಿ ರೂ. ನೀಡಲಾಗಿದೆ. ಎನ್‌ಡಿಎ ಸರಕಾರ ರಚನೆ ಬಳಿಕ ಕಳೆದ 5 ವರ್ಷದಲ್ಲಿ 6,618.15 ಕೋಟಿ ರೂ. ಒದಗಿಸಲಾಗಿದೆ. ಅಂದರೆ ಎನ್‌ಡಿಆರ್‌ಎಫ್‌ ನೆರವಿನಲ್ಲಿ ಬಹುತೇಕ ಎರಡು ಪಟ್ಟು ಹೆಚ್ಚಳವಾದಂತಾಗಿದೆ.
ರಾಜ್ಯದಲ್ಲಿನ ಬರ ಪರಿಸ್ಥಿತಿಯ ವಿಷಯಕ್ಕೆ ಬಂದರೆ ಯುಪಿಎ ಅವಧಿಯಲ್ಲೂ ವ್ಯಾಪಕ ಬರವಿತ್ತು. ಎನ್‌ಡಿಎ ಬಂದ ಮೇಲೂ ರಾಜ್ಯದಲ್ಲಿನ ಬರದ ಸಂಕಷ್ಟ ಕಡಿಮೆಯಾಗಿಲ್ಲ. ಈ ದೃಷ್ಟಿಯಿಂದ ನೋಡಿದರೂ ಬರ ಪರಿಹಾರ ನೀಡುವಲ್ಲಿ ಮೋದಿ ಸರಕಾರ ಮುಕ್ತ ಮನಸ್ಸು ತೋರಿದೆ.

ಎನ್‌ಡಿಆರ್‌ಎಫ್‌ ಅನುದಾನ ವಿವರ

ಯುಪಿಎ

2004-2009             907.28 ಕೋಟಿ ರೂ.
2009-2014             2672.58 ಕೋಟಿ ರೂ.

ಒಟ್ಟು 3,579.86 ಕೋಟಿ ರೂ.

ಎನ್‌ಡಿಎ

2014-2015            271.38 ಕೋಟಿ ರೂ.
2015-2016           1,645.53 ಕೋಟಿ ರೂ.
2016-2017            2,292.50 ಕೋಟಿ ರೂ.
2017-2018            913.04 ಕೋಟಿ ರೂ.
2018-2019            546.21 ಕೋಟಿ ರೂ. ಮತ್ತು 949.49 ಕೋಟಿ ರೂ.

ಒಟ್ಟು 6,618.15 ಕೋಟಿ ರೂ.

*******************************

ಬೆಂಗಳೂರು-ಮೈಸೂರು ಚತುಷ್ಪಥ ರಾಷ್ಟ್ರೀಯ ಹೆದ್ದಾರಿ

ಬಹುನಿರೀಕ್ಷೆಯ ಬೆಂಗಳೂರು-ಮೈಸೂರು ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯನ್ನು ಷಟ್ಪಥ ರಸ್ತೆಯಾಗಿ ಅಭಿವೃದ್ಧಿಪಡಿಸುವ ಕಾಮಗಾರಿಗೆ ೨೦೧೮ರ ಮಾ.೨೮ ಕ್ಕೆ ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಶಂಕುಸ್ಥಾಪನೆ ನೆರವೇರಿಸಿದರು.
ಒಟ್ಟು 7 ಸಾವಿರ ಕೋಟಿ ರೂ. ವೆಚ್ಚದ ಈ ಯೋಜನೆ ಎರಡು ಹಂತಗಳಲ್ಲಿ ನಡೆಯಲಿದೆ. ಒಂದನೇ ಹಂತದಲ್ಲಿ ಬೆಂಗಳೂರು-ನಿಡಘಟ್ಟ ಮಾರ್ಗದಲ್ಲಿ 56 ಕಿ.ಮೀ. ಉದ್ದ ಹಾಗೂ ಎರಡನೇ ಹಂತದಲ್ಲಿ ನಿಡಘಟ್ಟ-ಮೈಸೂರು ಮಾರ್ಗದಲ್ಲಿ 61 ಕಿ.ಮೀ. ಉದ್ದದ ರಸ್ತೆಯನ್ನು ಆರು ಪಥವಾಗಿ ನಿರ್ಮಿಸಲಾಗುತ್ತದೆ. ಇದರ ಜತೆಗೆ ಬಿಡದಿ, ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ, ಶ್ರೀರಂಗಪಟ್ಟಣದಲ್ಲಿ 6 ಬೈಪಾಸ್‌ ರಸ್ತೆ ನಿರ್ಮಾಣವಾಗಲಿದೆ. ಆರು ಪಥದ ರಸ್ತೆಯ ಎರಡೂ ಬದಿ ಸವೀರ್‍ಸ್‌ ರಸ್ತೆ ನಿರ್ಮಾಣವಾಗಲಿದೆ. 
ಪ್ರಸ್ತುತ ಬೆಂಗಳೂರು-ಮೈಸೂರು ಪ್ರಯಾಣಕ್ಕೆ ಮೂರು ಗಂಟೆ ಬೇಕಿದೆ. ರಸ್ತೆ ಆರು ಪಥವಾದ ನಂತರ 1.25 ಗಂಟೆ ಸಾಕಾಗುತ್ತದೆ. ಕಾಮಗಾರಿ ಪೂರ್ಣಗೊಳ್ಳಲು ಎರಡೂವರೆ ವರ್ಷ ಗಡುವು ನೀಡಲಾಗಿದೆ. 

ಇದೇ ಸಂದರ್ಭ ಕೇರಳ ಗಡಿಯಿಂದ ಕೊಳ್ಳೇಗಾಲದವರೆಗೆ 586 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ 130 ಕಿ.ಮೀ. ಉದ್ದದ ರಸ್ತೆಯನ್ನು ಉದ್ಘಾಟಿಸಲಾಯಿತು. ರಾಷ್ಟ್ರೀಯ ಹೆದ್ದಾರಿ 209 ರಲ್ಲಿ ಬಿಆರ್‌ಟಿ ಮೀಸಲು ಗಡಿಯಿಂದ ಬೆಂಗಳೂರುವರೆಗೆ 171 ಕಿ.ಮೀ. ಉದ್ದದ ದ್ವಿಪಥ ಹಾಗೂ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೇರವೇರಿತು.
ಬೆಂಗಳೂರಿನಲ್ಲಿ 10 ಸಾವಿರ ಕೋಟಿ ರೂ. ವೆಚ್ಚದಲ್ಲಿ ರಿಂಗ್‌ ರಸ್ತೆ ಹಾಗೂ ಮೈಸೂರಿನಲ್ಲಿ ರಿಂಗ್‌ ರಸ್ತೆ ನಿರ್ಮಿಸಲಾಗುತ್ತಿದೆ. ಈ ಯೋಜನೆಗಳಿಗೆ ಸದ್ಯದಲ್ಲೇ ಚಾಲನೆ ನೀಡಲಾಗುವುದು.


--- ರಮೇಶ ದೊಡ್ಡಪುರ- rameshapm@gmail.com