ಉಡುಪಿ, ಡಿ. 22 : "ಕಾಶ್ಮೀರ ಯಾವತ್ತೂ ಭಾರತದ ಅಂಗವಾಗಿರಲೇ ಇಲ್ಲ" ಎಂದು ಹೇಳಿಕೆ ನೀಡಿ ಇಡೀ ದೇಶದ ವೈರುಧ್ಯ ಕಟ್ಟಿಕೊಂಡಿರುವ ಲೇಖಕಿ ಅರುಂಧತಿ ರಾಯ್ ಅವರಿಗೆ ಕರ್ನಾಟಕದ ಜ್ಞಾನಪೀಠ ಪ್ರಶಸ್ತಿ ವಿಜೇತ ಲೇಖಕ ಡಾ.ಯು.ಆರ್. ಅನಂತಮೂರ್ತಿ ಅವರಿಂದ ಬೆಂಬಲ ದೊರೆತಿದೆ.
79 ವಸಂತಗಳನ್ನು ಪೂರೈಸಿ 80ನೇ ವರ್ಷಕ್ಕೆ ಕಾಲಿಟ್ಟಿರುವ ಅನಂತಮೂರ್ತಿ ಅವರನ್ನು ಸನ್ಮಾನಿಸಿ, 'ಅನಂತಮೂರ್ತಿ ಮಾತುಕತೆ : ಹತ್ತು ಸಮಸ್ತರ ಜೊತೆ' ಕೃತಿಯನ್ನು ಮಂಗಳವಾರ ಬಿಡುಗಡೆ ಮಾಡಿದ ಸಂದರ್ಭದಲ್ಲಿ ಅವರು ಅರುಂಧತಿ ರಾಯ್ ಗೆ ಬೆಂಬಲ ಸೂಚಿಸಿ ಮಾತನಾಡಿದ್ದಾರೆ.
ಅರುಂಧತಿ ಅವರು ಮಾನವೀಯತೆಯ ಆಧಾರದ ಮೇಲೆ ಕಾಶ್ಮೀರದ ಜನರ ಹಕ್ಕಿನ ಕುರಿತು ಮಾತನಾಡಿದರೆ ಅವರನ್ನು ಭಾರತ ವಿರೋಧಿ ಎಂದು ಪಟ್ಟಕಟ್ಟುವುದು ಎಷ್ಟು ಸಮಂಜಸ ಎಂದು ಅನಂತಮೂರ್ತಿ ವಿಷಾದ ವ್ಯಕ್ತಪಡಿಸಿದರು. ಕಾಶ್ಮೀರಿ ಜನರಿಗಾಗಿ ದನಿ ಎತ್ತಿದ್ದಕ್ಕಾಗಿ ಅವರನ್ನು ದೇಶದ್ರೋಹಿ ಎಂದು ಕರೆಯುವುದು ನಾನು ಒಪ್ಪಲಾರೆ ಎಂದು ಅವರು ನುಡಿದರು.
ಅರುಂಧತಿ ಅವರ ವಿಷಯದಲ್ಲಿ ಎತ್ತಲಾಗಿರುವ ರಾಷ್ಟ್ರೀಯತೆಯ ಕಲ್ಪನೆ ನಿಜಕ್ಕೂ ಅಪಾಯಕಾರಿ. ಮೂಲಭೂತವಾದಿಗಳ ರಾಷ್ಟ್ರೀಯತೆಗೂ ದೇಶಪ್ರೇಮಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ನಮಗೆ ಈ ಸಂದರ್ಭದಲ್ಲಿ ಬೇಕಿರುವುದು ರಾಷ್ಟ್ರೀಯತೆಗಿಂತ ಹೆಚ್ಚಾಗಿ ಗಾಂಧೀಜಿ ಮತ್ತು ಟಾಗೋರ್ ಪ್ರತಿಪಾದಿಸಿರುವ ನಾಗರಿಕತೆ. ರಾಷ್ಟ್ರೀಯತೆ ಎನ್ನುವುದು ಹಿಂದೂತ್ವದ ಮೇಲೆ ಆಧಾರಿತವಾಗಿದೆ. ನಮಗೆ ಬೇಕಿರುವುದು ನಾಗರಿಕತೆ ಮತ್ತು ಮಾನವೀಯತೆ ಎಂದು ಅವರು ವಿಶ್ಲೇಷಿಸಿದರು.

Udupi, Dec 21:Renowned writer and Jnanpeeth awardee U R Ananthamurthy today disapproved the outbursts against writer Arundhati Roy and levelling charges of sedition when she was only raising a voice for Kashmiri people.
Speaking at a Kannada book release Ananthamurthy Mathukathe and Parampare, he asked how could people brand the writer as anti-Indian, when she has upheld Kashmiri people's rights purely on humanitarian grounds.
He said "the concept of nationalism, after what one saw in the Ms Roy episode, was dangerous as it is imbibed with fanatic fundamentalist ideologies and totally differs from patriotism." Prof. Ananthamurthy said “I love religious India and not communal India" adding that the spirit of nationalism gave birth to two world wars and made humans blind.

The Original News and Photos were published in ThatsKannada and Manglorean