ಸೋಮವಾರ, ಡಿಸೆಂಬರ್ 20, 2010

Bill Gates - What I'm Thinking - Real-World Solutions from World's Youth - The Gates Notes


      ಪ್ರಪಂಚದ ದೊಡ್ಡ ಸಮಸ್ಯೆಗಳಿಗೆ ಪರಿಹಾರ ಹುಡುಕುತ್ತಿರುವ ಸಾಮಾಜಿಕ ಸಂಘಟನೆಗಳಿಗೆ ಬುದ್ದಿವಂತ, ಸಮಾಜ ಸುಧಾರಣೆಯ ತುಡಿತವಿರುವ, ಉತ್ಸಾಹಿ ಯುವಕರಿಂದಲೇ ದಾರಿ ತೋರಿಸುವ ಇಮ್ಯಾಜಿನ್ ಕಪ್ 2011ರಲ್ಲಿ ಭಾಗವಹಿಸಲು ವಿದ್ಯಾರ್ಥಿಗಳಿಗೆ ಇದೊಂದು ಮುಕ್ತ ಆಹ್ವಾನ. 

     ಪ್ರಪಂಚದ ಬೇರೆ ಬೇರೆ ಕಡೆ ಹೋದಂತೆಲ್ಲಾ ನನಗೆ ಅಲ್ಲಿನ ಉತ್ಸಾಹಿ ಯುವಕರನ್ನು ಭೇಟಿಯಾಗುವ ಅವಕಾಶ ಸಿಗುತ್ತದೆ. ಪ್ರಪಂಚದ ಅತಿ ದೊಡ್ಡ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಅವರಲ್ಲಿರುವ ತುಡಿತದಿಂದ ನನಗೆ ಸಂತೋಷವಾಗಿದೆ. ಈ ನಿಟ್ಟಿನಲ್ಲಿ ಅವರನ್ನು ಪ್ರೌತ್ಸಾಹಿಸಲು ಹಾಗೂ ಪರಿಹಾರ ಕಂಡುಹಿಡಿಯುವ ಕೆಲಸದಲ್ಲಿ ಇನ್ನೂ ಹೆಚ್ಚು ತೊಡಗಿಸಿಕೊಳ್ಳುವಂತೆ ಮಾಡಲು, ಮೈಕ್ರೋಸಾಫ್ಟ್  ಸಂಸ್ಥೆಯು ಇದೀಗ ತನ್ನ 9ನೇ ವರ್ಷದಲ್ಲಿರುವ ಇಮ್ಯಾಜಿನ್ ಕಪ್ ಪ್ರಾರಂಭಿಸಿತು. ಕಳೆದ ವರ್ಷಗಳ ಸ್ಪರ್ಧೆಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ಪರಿಸರ, ಶಿಕ್ಷಣ, ವಿಕೋಪ ಪರಿಹಾರ ಮಾರ್ಗಗಳು ಹಾಗೂ ಆರೋಗ್ಯದ ಕುರಿತಾದ ದೊಡ್ಡ ಸಮಸ್ಯೆಗಳಿಗೆ ವಿನೂತನ ಪರಿಹಾರ ಮಾರ್ಗಗಳೊಂದಿಗೆ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದಾರೆ.

English Article Link.
     ಆದರೆ ಈ ವರ್ಷದ ಸ್ಪರ್ಧೆಯ ಸ್ವರೂಪ ಸ್ವಲ್ಪ ಬದಲಾಗಿದೆ. ವಿಶ್ವದ ಸಮಸ್ಯೆಗಳನ್ನು ಪರಿಹರಿಸಲು ದಾರಿ ಹುಡುಕುತ್ತಿರುವ ವಿವಿಧ ಸಂಘ ಸಂಸ್ಥೆಗಳ ಪ್ರಾಕ್ಟಿಕಲ್ ಸಮಸ್ಯೆಗಳಿಗೆ ವಿದ್ಯಾರ್ಥಿಗಳು ಪರಿಹಾರ ಸೂಚಿಸಬೇಕಾಗಿದೆ. ಈ ಬಾರಿಯ ಸ್ಪರ್ಧೆಯು, ಯುವಕರ ಹೊಸ ಆಲೋಚನೆಗಳನ್ನು ಮಾರುವ (ಹಣಕ್ಕಲ್ಲ)  ಮಾರುಕಟ್ಟೆಯಂತಾಗಿರುತ್ತದೆ, ಅವು ಸಂಬಂಧಪಟ್ಟ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಂಘಟನೆಗಳಿಂದ ಅತಿ ಶೀಘ್ರದಲ್ಲಿ ಕಾರ್ಯರೂಪಕ್ಕಿಳಿಯುತ್ತವೆ.
     ಕೇವಲ ಬಹುಮಾನಕ್ಕಾಗಿ ನಡೆಯುವ ಸ್ಪರ್ಧೆ ಇದಲ್ಲ. ಪ್ರಪಂಚದ ಸಮಸ್ಯೆಗಳಿಗೆ ನಿಜವಾದ ಪರಿಹಾರ ಸೂಚಿಸುತ್ತದೆ. ಉದಾಹರಣೆಗೆ, ಕಳೆದ ವರ್ಷದ ಸ್ಪರ್ಧೆಯಲ್ಲಿ ನ್ಯಾಷನಲ್ ಟೀಮ್ ವಿನ್ನರ್ ಬಹುಮಾನ ಗೆದ್ದ ಝೆಕ್ ಗಣರಾಜ್ಯದ ತಂಡವೊಂದು ನಿರ್ಮಿಸಿದ ತಂತ್ರಜ್ಞಾನ, GINA (Geographical Information Assistant) ಅಮೆರಿಕದಲ್ಲಿ ಉಂಟಾದ ಹೈಟಿ ಭೂಕಂಪದ ನಂತರದ ಪರಿಹಾರ ಕಾರ್ಯಗಳನ್ನು ಸುಗಮವಾಗಿ ನಡೆಸಲು ಉಪಯೋಗವಾಗಿದೆ. ಘಟನೆ ನಡೆದ ಸ್ಥಳದ ಸ್ಪಷ್ಟ ಭೌಗೋಳಿಕ ಚಿತ್ರಣ ನೀಡುವ ಈ ತಂತ್ರಜ್ಞಾನದಿಂದಾಗಿ ಅಲ್ಲಿನ ಪರಿಹಾರ ಕಾರ್ಯಗಳಲ್ಲಿ ತೊಡಗಿದ್ದವರಿಗೆ ಬಹಳ ಅನುಕೂಲವಾಯಿತು. ಹೈಟಿಯಲ್ಲಿ ಈಗ ನಡೆಯುತ್ತಿರುವ ಅಭಿವೃದ್ದಿ ಕಾರ್ಯಗಳನ್ನು ವೀಕ್ಷಿಸಬಲ್ಲ ವೆಬ್ಸೈಟೊಂದನ್ನು GINA ತಂಡ ಇತ್ತೀಚೆಗಷ್ಟೇ ಬಿಡುಗಡೆ ಮಾಡಿದೆ.

     ಈ ರೀತಿಯಾಗಿ, ಸಮಸ್ಯೆಗಳಿಗೆ ನಿಜವಾದ ಪರಿಹಾರಗಳನ್ನು ಒದಗಿಸುವ ಉದ್ದೇಶ ಇಮ್ಯಾಜಿನ್ ಕಪ್ ನದ್ದು. ಇಂತಹ ಪರಿಹಾರ ಮಾರ್ಗಗಳನ್ನು ಪಡೆಯಲು ಸಂಯುಕ್ತ ರಾಷ್ಟ್ತ್ರಗಳ (United Nations) ಹಲವು ಸಂಘ ಸಂಸ್ಥೆಗಳು ಇದೀಗ ಮುಂದೆ ಬಂದಿವೆ. ಅಭಿವೃದ್ದಿ, ಯುವಜನತೆ, ಆಹಾರ ಮತ್ತು ಕೃಷಿ, ಆರೋಗ್ಯ ಮತ್ತು ಪರಿಸರದಂತಹ ವಿಷಯಗಳ ಮೇಲೆ ಈ ಸಂಘಟನೆಗಳು ಕೆಲಸಮಾಡುತ್ತಿವೆ . ಪ್ರಮುಖವಾಗಿ, U.S. Agency for International Development (USAID) ಮತ್ತು ಸ್ಥಳೀಯ ನ್ಯೂಯಾರ್ಕ್ ನಗರದ ಸಾಮಾಜಿಕ ಸಂಸ್ಥೆ        Robin Hood Foundation ಈಗ ನೊಂದಾಯಿಸಿಕೊಂಡಿದ್ದು, ಈ ಪಟ್ಟಿ ಇನ್ನೂ       ಬೆಳೆಯುವ ವಿಶ್ವಾಸ ನಮ್ಮದು.

     ಈಗಿರುವ ಸಾಮಾಜಿಕ ನೆಟ್ವರ್ಕ್ ತಾಣಗಳು(social networks), ಸಂಯುಕ್ತರಾಷ್ಟ್ತ್ರ ಸಂಘದ ಮಹಾತ್ವಾಕಾಂಕ್ಷಿ ಯೋಜನೆಗಳಾದ ಬಡತನ ಹಾಗೂ ಹಸಿವು ನಿರ್ಮೂಲನೆ, ಶಿಕ್ಷಣ ಹಾಗೂ ಎಚ್.ಐ.ವಿ/ಏಯ್ದ್ಸ್  ವಿರುದ್ಧ ಹೋರಾಡಲು ವಿಶ್ವದ ಎಲ್ಲ ಯುವಕರನ್ನು ಒಟ್ಟುಗೂಡಿಸುವಷ್ಟು ಶಕ್ತವಾಗಿಲ್ಲ. ಭಾಷೆ, ತಂತ್ರಜ್ಞಾನ ಸಂಸ್ಕ್ಕತಿಗಳ ಭಿನ್ನತೆಗಳು ಇದಕ್ಕೆ ತೊಡಕಾಗಿವೆ ಎಂದು ಹೇಳುವ UN Programme on Youth ಎಂಬ ಸಂಸ್ಥೆಯು,  ಭಾಷೆ, ತಂತ್ರಜ್ಞಾನ ಸಂಸ್ಕ್ಕತಿಗಳ ಭಿನ್ನತೆಯ ಹೊರತಾಗಿಯೂ ಮೊಬೈಲ್, ವಿಡಿಯೋ ಹಾಗೂ ಇನ್ನಿತರ ತಂತ್ರಜ್ಞಾನದ ಸಹಾಯದಿಂದ ಪ್ರಪಂಚದ ಯುವಕರಿಂದಲೇ ಪರಿಹಾರ ಸಿಗಲಿ, ಅದೂ ಸಹ ಇಮ್ಯಾಜಿನ್ ಕಪ್ನಲ್ಲೇ ಸಿಗಬಹುದು ಎಂಬ ವಿಶ್ವಾಸದಲ್ಲಿದೆ.

     ಇದೇ ಸಮಯದಲ್ಲಿ USAID ಸಂಸ್ಥೆಯು ಬಡರಾಷ್ಟ್ತ್ರಗಳಲ್ಲಿನ ಶಿಕ್ಷಣದ ಸಮಸ್ಯೆಗಳಿಗೆ ಪರಿಹಾರಕ್ಕೌಸ್ಕರ ಎದಿರು ನೋಡುತ್ತಿದೆ. ಶಾಲೆಯ ಮೊದಲ ಮೂರು ವರ್ಷಗಳಲ್ಲಿ ಮಕ್ಕಳು ಓದುವುದು, ಬರೆಯುವುದು, ಕೂಡು-ಕಳೆಯುವ ಲೆಕ್ಕಗಳನ್ನು ಕಲಿಯುವಂತೆ ಮಾಡುವುದೇ ಸಂಸ್ಥೆಯ ಗುರಿಯಾಗಿದೆ. ಅಧ್ಯಯನಗಳು ಹೇಳುವಂತೆ, ಯಾವ ಮಕ್ಕಳು ಈ ಗುರಿಯನ್ನು ತಲುಪುವುದಿಲ್ಲವೋ, ಅವರು ಜೀವನ ಪರ್ಯಂತ ಬಡವರಾಗಿಯೇ ಮುಂದುವರಿಯುವ ಸಾಧ್ಯತೆಗಳು ಹೆಚ್ಚು. USAID ಯು ಇಮ್ಯಾಜಿನ್ ಕಪ್ ಗೆ ಬರುವ ಯುವಕರಿಂದ, ಪುಟ್ಟ ಹಾಗೂ ಬಡ ಮಕ್ಕಳನ್ನು ಶಿಕ್ಷಿತರನ್ನಾಗಿಸಲು ಸಹಾಯಕವಾಗುವ ಹೊಸ ಸಂಶೋಧನೆಗಳನ್ನು ನೀರೀಕ್ಷಿಸುತ್ತಿದೆ.

     ಪ್ರಪಂಚದ ಯುವಕರಲ್ಲಿ ನನ್ನ ಕರೆಯೇನೆಂದರೆ, ಈಗಲೇ ಇಮ್ಯಾಜಿನ್ ಕಪ್ ಗೆ ಹೆಸರು ನೋದಾಯಿಸಿಕೊಳ್ಳಿ, ವಿವಿಧ ಸಂಸ್ಥೆಗಳ ಅವಶ್ಯಕತೆಗನುಸಾರವಾಗಿ ನಿಮ್ಮ ಆಲೋಚನೆಗಳನ್ನು ಹರಿಯಬಿಡಿ, ಹೊಸ-ಹೊಸ ಮಾರ್ಗೋಪಾಯಗಳನ್ನು ಸೂಚಿಸಿ.

     ಹಾಗೂ, ಸರ್ಕಾರಿ ಸಂಸ್ಥೆಗಳು, ಸರ್ಕಾರೇತರ ಸಂಸ್ಥೆಗಳು ಹಾಗೂ ವಿವಿಧ ಸಾಮಾಜಿಕ ಸಂಸ್ಥೆಗಳು ಇಮ್ಯಾಜಿನ್ ಕಪ್ ನಲ್ಲಿ ತಮ್ಮ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಂಡು, ಸಮಾಜದ ಸಮಸ್ಯೆಗಳಿಗೆ ಯುವಕರಿಂದ ಅತ್ಯುತ್ತಮವಾದ ಮಾರ್ಗಗಳನ್ನು ಕಂಡುಕೊಳ್ಳಬೇಕೆಂದು ನಾನು ಆಶಿಸುತ್ತೇನೆ.

     ಎಲ್ಲರೂ ಇದರಲ್ಲಿ ಭಾಗಿಗಳಾಗೋಣ, ಸ್ಪರ್ಧೆಯ ಸೋಲು-ಗೆಲುವುಗಳ ಕಡೆ ಗಮನ ಕೊಡದೇ, ಇಡೀ ಪ್ರಪಂಚವನ್ನೇ ಗೆಲ್ಲಿಸುವ ಸಂಕಲ್ಪ ಮಾಡೋಣ.

ಕಾಮೆಂಟ್‌ಗಳಿಲ್ಲ: