ಬುಧವಾರ, ನವೆಂಬರ್ 17, 2010

ರವಿ ಬೆಳಗೆರೆಗೆ ಅರವತ್ತರ ಅರಳು ಮರುಳು

        ಒಬ್ಬ ಲೇಖಕ ದಿನಕಳೆದಂತೆ ಬೆಳೆಯುತ್ತಿರಬೇಕು, ಆ ಬೆಳವಣಿಗೆ ಬುದ್ದಿಯಲ್ಲಾಗದೇ ಹೆಸರಿನಲ್ಲಿ, ದುಡ್ಡಿನಲ್ಲಿ ಆದರೆ ಅವನು ರವಿ ಬೆಳಗೆರೆಯಾಗುತ್ತಾನೆ. ಇದಕ್ಕೆ ತಾಜಾ ಉದಾಹರಣೆ, ನವೆಂಬರ್ 14ರ ಮಕ್ಕಳದಿನಾಚರಣೆಯಂದು ಬಿಡುಗಡೆಗೊಂಡ ವಯಸ್ಕರ ಪುಸ್ತಕ 'ಕಾಮರಾಜಮಾರ್ಗ'. ಇದು ಬೆಳಗೆರೆ ಅವರ ಅರವತ್ತನೇ ಕಾಣಿಕೆ. ಮೊದಲೇ ಹೇಳಿಬಿಡುತ್ತೇನೆ, ಈ ಪುಸ್ತಕವನ್ನು ನಾನು ಓದಿಲ್ಲಾ, ಓದುವುದೂ ಇಲ್ಲ. ಇದು ಅವರ ಅರವತ್ತನೇ ಪುಸ್ತಕ. ಆದರೆ, ಅದರ ಅರ್ಪಣಾ ಪುಟ ಹಾಗೂ ಒಳಪುಟಗಳ ಮೇಲೆ ಮೊನ್ನೆ ಬೆಂಗಳೂರಿನ ಪುಸ್ತಕ ಮೇಳಕ್ಕೆ ಹೋದಾಗ ಕಣ್ಣಾಡಿಸಿದೆ. ಅರ್ಪಣೆಯನ್ನು ಆರೆಸ್ಸೆಸ್ ನ ಹಿರಿಯರಾದ ಹೊ.ವೆ.ಶೇಷಾದ್ರಿ(ಈಗ ಬದುಕಿಲ್ಲ), ಮೈ.ಚ.ಜಯದೇವ, ಪ್ರೊ.ಕೃ.ನರಹರಿ ಹಾಗೂ ನ.ಕೃಷ್ಣಪ್ಪನವರಿಗೆ ಅರ್ಪಿಸಲಾಗಿದೆ. ಈ ಅರ್ಪಣೆಯಲ್ಲಿ ನಾಲ್ವರ ಕುರಿತೂ ಅತ್ಯಂತ ಭಕ್ತಿ ಭಾವವನ್ನು ಬೆಳಗೆರೆ ಪ್ರದರ್ಶಿಸಿದ್ದಾರೆ. ಆದರೆ, ಇಲ್ಲಿ ಬರುವ ಒಂದು ಪ್ರಶ್ನೆಯೆಂದರೆ, ಅಷ್ಟೊಂದು ಗೌರವ ಅವರುಗಳ ಮೇಲಿದ್ದರೆ 'ಎ'ಸರ್ಟಿಫಿಕೇಟ್ ಪುಸ್ತಕಕ್ಕೇಕೆ ಅವರ ಹೆಸರು? ಇದೇ ನಾಲ್ಕು ಜನರ ಸ್ಥಾನಕ್ಕೆ ತಮ್ಮ ಆತ್ಮೀಯರೋ ಅಥವಾ ಕುಟುಂಬದ ಯಾರಾದರೂ ಸದಸ್ಯರ ಹೆಸರನ್ನು ಹಾಕಲು ಬೆಳಗೆರೆಗೆ ಆಗುತ್ತದೆಯೇ? ತಾವೇ ತಮ್ಮ ಖಾಸ್ಬಾತ್ ನಲ್ಲಿ ಹೇಳಿಕೊಂಡಂತೆ, ಆಗಿನ ಕಾಲದ ಸೆಕ್ಸ್ ಪುಸ್ತಕ ರತಿ ವಿಜ್ಞಾನಕ್ಕೆ ಹೊಟ್ಟೆಯ ಪಾಡಿಗಾಗಿ ಬರೆಯುತ್ತಿದ್ದರು. ಆದರೆ ಈಗ ಬರೆಯುತ್ತಿರುವುದು 'ಪಾಡಿಗಲ್ಲ', 'ತೆವಲಿಗಾಗಿ' ಎನ್ನಿಸುತ್ತದೆ. ನನ್ನನ್ನು ಸಾವಿರಾರು ಜನ ರೋಲ್ ಮಾಡೆಲ್ ಮಾಡಿಕೊಂಡಿದ್ದಾರೆ, ನನ್ನ ಮಾರ್ಗದಲ್ಲೇ ನಡೆಯುತ್ತಾರೆ ಇನ್ನುವ ಬೆಳಗೆರೆಯವರು ತಮ್ಮ ಹಿಂಬಾಲಕರಿಗೆ ತೋರಿಸುವ 'ಮಾರ್ಗ' ಇದೇನಾ?.

ಕಾಮೆಂಟ್‌ಗಳಿಲ್ಲ: