ಲೇಬಲ್ಗಳು
ವಿಜಯವಾಣಿ
(55)
ಪತ್ರಿಕೋದ್ಯಮ
(48)
Karnataka
(34)
ಕರ್ನಾಟಕ
(26)
Politics
(24)
ಕನ್ನಡ ಮತ್ತು ಸಂಸ್ಕೃತಿ
(23)
National
(22)
ಸಂದರ್ಶನ
(17)
ವಿವಾದ
(11)
ಜೀವನ
(10)
Commerce
(8)
Justice
(7)
ಆರೆಸ್ಸೆಸ್
(7)
Congress
(6)
ಭಗವದ್ಗೀತೆ
(6)
ಭ್ರಷ್ಟಾಚಾರ
(6)
Book
(5)
External Affairs
(5)
Vijay Karnataka
(5)
ರಾಜಕೀಯ
(5)
Army
(4)
Budget
(4)
Religion
(4)
ಟೌನ್ ಹಾಲ್
(4)
ಶಿಕ್ಷಣ
(4)
Kashmir
(3)
SL Bhyrappa
(3)
Vijayavani
(3)
ಸಾಹಿತ್ಯ
(3)
Freedom
(2)
Modi
(2)
Yedyurappa
(2)
ಇಸ್ರೊ
(2)
ಉದ್ಯೋಗ
(2)
ಪರಿಸರ ಮಾಲಿನ್ಯ
(2)
ಬಾಹ್ಯಾಕಾಶ
(2)
ವಂಚನೆ
(2)
ವಿಜ್ಞಾನ
(2)
Arundhati Roy
(1)
Bhagat singh
(1)
Bharat
(1)
Fashion
(1)
Internet
(1)
Interview
(1)
Mohan Bhagwat
(1)
Muslim
(1)
Opinion
(1)
Poem
(1)
RSS
(1)
Real Estate
(1)
Sikh
(1)
Sports
(1)
ಕನ್ನಡ ಪ್ರಭ
(1)
ಚೀನಾ
(1)
ಹೊಸ ದಿಗಂತ
(1)
ಶನಿವಾರ, ನವೆಂಬರ್ 27, 2010
ಬುಧವಾರ, ನವೆಂಬರ್ 17, 2010
ರವಿ ಬೆಳಗೆರೆಗೆ ಅರವತ್ತರ ಅರಳು ಮರುಳು
ಒಬ್ಬ ಲೇಖಕ ದಿನಕಳೆದಂತೆ ಬೆಳೆಯುತ್ತಿರಬೇಕು, ಆ ಬೆಳವಣಿಗೆ ಬುದ್ದಿಯಲ್ಲಾಗದೇ ಹೆಸರಿನಲ್ಲಿ, ದುಡ್ಡಿನಲ್ಲಿ ಆದರೆ ಅವನು ರವಿ ಬೆಳಗೆರೆಯಾಗುತ್ತಾನೆ. ಇದಕ್ಕೆ ತಾಜಾ ಉದಾಹರಣೆ, ನವೆಂಬರ್ 14ರ ಮಕ್ಕಳದಿನಾಚರಣೆಯಂದು ಬಿಡುಗಡೆಗೊಂಡ ವಯಸ್ಕರ ಪುಸ್ತಕ 'ಕಾಮರಾಜಮಾರ್ಗ'. ಇದು ಬೆಳಗೆರೆ ಅವರ ಅರವತ್ತನೇ ಕಾಣಿಕೆ. ಮೊದಲೇ ಹೇಳಿಬಿಡುತ್ತೇನೆ, ಈ ಪುಸ್ತಕವನ್ನು ನಾನು ಓದಿಲ್ಲಾ, ಓದುವುದೂ ಇಲ್ಲ. ಇದು ಅವರ ಅರವತ್ತನೇ ಪುಸ್ತಕ. ಆದರೆ, ಅದರ ಅರ್ಪಣಾ ಪುಟ ಹಾಗೂ ಒಳಪುಟಗಳ ಮೇಲೆ ಮೊನ್ನೆ ಬೆಂಗಳೂರಿನ ಪುಸ್ತಕ ಮೇಳಕ್ಕೆ ಹೋದಾಗ ಕಣ್ಣಾಡಿಸಿದೆ. ಅರ್ಪಣೆಯನ್ನು ಆರೆಸ್ಸೆಸ್ ನ ಹಿರಿಯರಾದ ಹೊ.ವೆ.ಶೇಷಾದ್ರಿ(ಈಗ ಬದುಕಿಲ್ಲ), ಮೈ.ಚ.ಜಯದೇವ, ಪ್ರೊ.ಕೃ.ನರಹರಿ ಹಾಗೂ ನ.ಕೃಷ್ಣಪ್ಪನವರಿಗೆ ಅರ್ಪಿಸಲಾಗಿದೆ. ಈ ಅರ್ಪಣೆಯಲ್ಲಿ ನಾಲ್ವರ ಕುರಿತೂ ಅತ್ಯಂತ ಭಕ್ತಿ ಭಾವವನ್ನು ಬೆಳಗೆರೆ ಪ್ರದರ್ಶಿಸಿದ್ದಾರೆ. ಆದರೆ, ಇಲ್ಲಿ ಬರುವ ಒಂದು ಪ್ರಶ್ನೆಯೆಂದರೆ, ಅಷ್ಟೊಂದು ಗೌರವ ಅವರುಗಳ ಮೇಲಿದ್ದರೆ 'ಎ'ಸರ್ಟಿಫಿಕೇಟ್ ಪುಸ್ತಕಕ್ಕೇಕೆ ಅವರ ಹೆಸರು? ಇದೇ ನಾಲ್ಕು ಜನರ ಸ್ಥಾನಕ್ಕೆ ತಮ್ಮ ಆತ್ಮೀಯರೋ ಅಥವಾ ಕುಟುಂಬದ ಯಾರಾದರೂ ಸದಸ್ಯರ ಹೆಸರನ್ನು ಹಾಕಲು ಬೆಳಗೆರೆಗೆ ಆಗುತ್ತದೆಯೇ? ತಾವೇ ತಮ್ಮ ಖಾಸ್ಬಾತ್ ನಲ್ಲಿ ಹೇಳಿಕೊಂಡಂತೆ, ಆಗಿನ ಕಾಲದ ಸೆಕ್ಸ್ ಪುಸ್ತಕ ರತಿ ವಿಜ್ಞಾನಕ್ಕೆ ಹೊಟ್ಟೆಯ ಪಾಡಿಗಾಗಿ ಬರೆಯುತ್ತಿದ್ದರು. ಆದರೆ ಈಗ ಬರೆಯುತ್ತಿರುವುದು 'ಪಾಡಿಗಲ್ಲ', 'ತೆವಲಿಗಾಗಿ' ಎನ್ನಿಸುತ್ತದೆ. ನನ್ನನ್ನು ಸಾವಿರಾರು ಜನ ರೋಲ್ ಮಾಡೆಲ್ ಮಾಡಿಕೊಂಡಿದ್ದಾರೆ, ನನ್ನ ಮಾರ್ಗದಲ್ಲೇ ನಡೆಯುತ್ತಾರೆ ಇನ್ನುವ ಬೆಳಗೆರೆಯವರು ತಮ್ಮ ಹಿಂಬಾಲಕರಿಗೆ ತೋರಿಸುವ 'ಮಾರ್ಗ' ಇದೇನಾ?.
ಬುಧವಾರ, ನವೆಂಬರ್ 10, 2010
'ಶಕ್ತಿ'ಯೇ ದೌರ್ಬಲ್ಯವಾಗುವ ಜಾರುದಾರಿಯಲ್ಲಿ ಯಡ್ಯೂರಪ್ಪ
ಹೌದು, ಯಡ್ಯೂರಪ್ಪ ಅವರ ನಿಜವಾಜ ಶಕ್ತಿ ಇರುವುದು ಯಾವುದರಲ್ಲಿ? ಅಭಿವೃದ್ದಿಯಲ್ಲೇ?, ತಮ್ಮದೇ ಆದ ರೀತಿಯಲ್ಲಿ ವಿವಾದಗಳನ್ನು ಬಗೆಹರಿಸುವ ಪರಿಯಲ್ಲೇ?, ರಾಜಕೀಯ ಜನಪ್ರಿಯ ಕಾರ್ಯಕ್ರಮಗಳೇ?, ಸಂಘ ಪರಿವಾರದ ಬೆಂಬಲವೇ?, ಪಕ್ಷದ ಕಾರ್ಯಕರ್ತರೇ? ಅಥವಾ ಇವೆಲ್ಲವುಗಳನೊಳಗೊಂಡ ಗುಚ್ಛವೇ? ಎಂದು ಕಳೆದವಾರ ದೆಹಲಿಯಿಂದ ಬೆಂಗಳೂರಿಗೆ ಬಂದಿದ್ದ ಹಿರಿಯ ಪತ್ರಕರ್ತರೊಬ್ಬರು ಕೇಳಿದರು.
ಉದಾಹರಣೆಗೆ ಕರುಣಾನಿಧಿಯವರನ್ನು ತೆಗೆದುಕೊಂಡರೆ ದ್ರಾವಿಡ ಚಳುವಳಿ, ಸಮಗ್ರ ಅಭಿವೃದ್ದಿ, ನಗರ-ಗ್ರಾಮೀಣ ಪ್ರದೇಶಗಳ ಸಮತೋಲಿತ ಬೆಳವಣಿಗೆ ಹಾಗೂ ಕಾವೇರಿ ವಿವಾದ, ಶ್ರೀಲಂಕಾ ತಮಿಳರು, ತಮಿಳು ಭಾಷೆಯಂತಹ ಭಾವನಾತ್ಮಕ ವಿಷಯಗಳು ಅವರ ಶಕ್ತಿ.
ಹಾಗೆಯೇ ರಾಜ್ಯದ ಅಭಿವೃದ್ದಿಯ ಕುರಿತು ಪ್ರಶ್ನಾತೀತವಾದ ಬದ್ಧತೆ, ಶುದ್ಧಹಸ್ತ, ನೇರ ಆಡಳಿತ ಹಾಗೂ ತಮ್ಮ ರಾಜಕೀಯ ವಿರೋಧಿಗಳಿಂದಾಗುವ ಸತತ ಧಾಳಿಗಳೇ ನರೇಂದ್ರ ಮೋದಿಯವರ ಶಕ್ತಿ ಕೇಂದ್ರಗಳು. ಅಲ್ಲಿಂದಲೇ ಅವರಿಗೆ ಶಕ್ತಿ ಲಭಿಸುವುದು.
ಹಾಗೆ ಯಡ್ಯೂರಪ್ಪನವರ 'ಶಕ್ತಿ' ಯಾವುದು? ಹೆಚ್ಚೆಂದರೆ ದಿನಕ್ಕೆ ನಾಲ್ಕು ಗಂಟೆ ನಿದ್ದೆ ಮಾಡುವ, ಸಮಾಜದ ಕಟ್ಟಕಡೆಯ ವ್ಯಕ್ತಿಯ ನೋವಿಗೂ ಸ್ಪಂದಿಸುವ, ಸತತ ಪ್ರವಾಸ, ಕೆಲಸಗಂಟುಕತನಗಳಂತಹ ಧನಾತ್ಮಕ ಅಂಶಗಳೇ ಅವರ ಶಕ್ತಿ ಅನ್ನಬಹುದೇ? ಸಮಾಜದ ಬಗೆಗಿನ ಕಾಳಜಿಯನ್ನು ಅವರ ಭಾಷಣಗಳಲ್ಲಂತೂ ಢಾಳಾಗಿ ಕಾಣಬಹುದು.
ಆದರೆ, ಪ್ರಸಕ್ತ ರಾಜಕೀಯ ಸನ್ನಿವೇಷದಲ್ಲಿ, ಅವರ ಸಮುದಾಯವೇ(ಲಿಂಗಾಯತ) ಅವರ ನೈಜ ಶಕ್ತಿ. ಅವರು ಲಿಂಗಾಯತರಾಗದೇ ಇದ್ದಿದ್ದರೆ, ಪದೇಪದೇ ಒಳಗಿನಿಂದ ಹಾಗೂ ಹೊರಗಿನಿಂದ ಒಂದರ ಮೇಲೊಂದರಂತೆ ಬಂದ ಬಿಕ್ಕಟ್ಟುಗಳ ನಡುವೆಯೂ ಮುಖ್ಯಮಂತ್ರ್ರಿಯಾಗಿ ಮುಂದುವರಿಯಲು ಸಾಧ್ಯವಾಗುತ್ತಿರಲಿಲ್ಲ.
ಹಾಗೆ ನೋಡಿದರೆ, ಜಾತಿ ರಾಜಕೀಯ ಕರ್ನಾಟಕ್ಕೆ ಹೊಸದೇನೂ ಅಲ್ಲ. ದೇವರಾಜ ಅರಸು ಉಳಿದದ್ದು ಹಿಂದುಳಿದ ವರ್ಗಗಳ ಬೆಂಬಲದಿಂದ, ಬ್ರಾಹ್ಮಣರಾದರೂ ಲಿಂಗಾಯತ ಸಮುದಾಯದ ಬೆಂಬಲದಿಂದ ಅಧಿಕಾರ ಅನುಭವಿಸಿದ ಚತುರ ರಾಜಕಾರಣಿ ರಾಮಕೃಷ್ಣ ಹೆಗಡೆ, ಹಾಗೆಯೇ, ವೀರೇಂದ್ರ ಪಾಟೀಲ್, ದೇವೇಗೌಡ, ಎಸ್.ಆರ್.ಬೊಮ್ಮಾಯಿ, ಜೆ.ಎಚ್.ಪಟೇಲ್ ಮತ್ತು ಕುಮಾರಸ್ವಾಮಿ ಎಲ್ಲರೂ ಬದುಕಿದ್ದೂ-ಬದುಕುತ್ತಿರುವುದೂ ಒಂದಲ್ಲಾ ಒಂದು ಜಾತಿಯ ಬಲದಿಂದಲೇ.
ಈಗ ಕಾಂಗ್ರೆಸ್ ಗೆ ತನ್ನದೇ ಆದ ಜಾತಿಯ ತಳಹದಿ ಇಲ್ಲ. ಹಿಂದುಳಿದ ಹಾಗೂ ದಲಿತ ವರ್ಗಗಳನ್ನು ಓಲೈಸಲು ಅದು ಎಷ್ಟು ಪ್ರಯತ್ನಿಸಿದರೂ ಅವೆರಡೂ ಸಹ ಕಾಂಗ್ರೆಸ್ ನಿಂದ ದೂರ ಸರಿದಿವೆ. ಅಲ್ಪಸಂಖ್ಯಾತರ ದೃಷ್ಟಿ ಯಾವಾಗಲೂ ಬಿ.ಜೆ.ಪಿಯನ್ನು ಸೋಲಿಸಬಲ್ಲಂತಹ ಪ್ರಬಲ ವಿರೋಧಿ ಬಣದ ಹುಡುಕಾಟದಲ್ಲಿ ಇದೆ. ದೇಶದೆಲ್ಲೆಡೆಯ ಇಂದಿನ ಸ್ಥಿತಿಯೇನೆಂದರೆ, ತೃತೀಯ ರಂಗದ ಶಕ್ತಿಗಳು ಉಳಿಯಬೇಕೆಂದರೆ ಅವಕ್ಕೆ ಯಾವುದಾದರೊಂದು ಜಾತಿಯ ಬೆಂಬಲ ಇರಲೇಬೇಕು. ಆ ನಿಟ್ಟಿನಲ್ಲಿ ವಕ್ಕಲಿಗ ಸಮುದಾಯವನ್ನು ಹಿಡಿದಿಟ್ಟುಕೊಳ್ಳುವಲ್ಲಿ ಜೆ.ಡಿ.ಎಸ್, ಕರ್ನಾಟಕದ ಮಟ್ಟಿಗೆ ಯಶಸ್ವಿಯಾಗಿದೆ.
ಹೀಗಾಗಿ ಬಿ.ಜೆ.ಪಿ ಯು ಲಿಂಗಾಯತ ಮತಗಳನ್ನು ಸೆಳೆಯುವುದನ್ನು ಬಿಟ್ಟಿದ್ದರೆ ಅಧಿಕಾರಕ್ಕೆ ಬರುವ ಮಾತೇ ಇರುತ್ತಿರಲಿಲ್ಲ. ಹಾಗೆಯೇ ಲಿಂಗಾಯತರಿಗೂ ಯಡ್ಯೂರಪ್ಪನವರನ್ನು ಬಿಟ್ಟರೆ ತಮ್ಮ ಸಮುದಾಯದ ಬೇರೆ ಯಾವ ನಾಯಕರೂ ಕಾಣುತ್ತಿಲ್ಲ. ಬೇರೆ ಯಾವ ಪಕ್ಷದಲ್ಲೂ, ಅಷ್ಟೇ ಏಕೆ? ಸ್ವತಃ ಬಿ.ಜೆ.ಪಿಯಲ್ಲೂ ಯಡ್ಯೂರಪ್ಪನವರನ್ನು ಬಿಟ್ಟರೆ, ಅವರ ಸರಿಸಮಾನವಾಗಿ ನಿಲ್ಲಬಲ್ಲ ಇನ್ನೊಬ್ಬ ಲಿಂಗಾಯತ ನಾಯಕ ಯಾರೂ ಕಾಣುತ್ತಿಲ್ಲ. ಪ್ರಸ್ತುತ ರಾಜಕೀಯ ಸನ್ನಿವೇಷದಲ್ಲಿ ಯಡ್ಯೂರಪ್ಪ, ಬಿ.ಜೆ.ಪಿ ಹಾಗೂ ಲಿಂಗಾಯತ ಎಂಬುದು ಹೇಳಿ ಮಾಡಿಸಿದ ಜೋಡಿಯಂತಿವೆ. ಆದರೆ, ಈ ಮೂರೂ ಅಂಶಗಳೂ ಒಂದರ ಮೇಲೊಂದು ಅವಲಂಬಿತವಾಗಿರುವುದರ ಅಪಾಯವೇನೆಂದರೆ, ಮೂರರಲ್ಲಿ ಯಾವುದೇ ಎರಡರ ಮಧ್ಯದ ಕೊಂಡಿ ಕಳಚಿಕೊಂಡರೂ ರಾಜಕೀಯ ವ್ಯವಸ್ಥೆ ಅಲ್ಲೋಲಕಲ್ಲೋಲವಾಗುತ್ತದೆ ಹಾಗೂ ಕರ್ನಾಟಕದಲ್ಲಿನ ಇನ್ನೊಂದು ಕಾಂಗ್ರೆಸ್ಆಗಿ ಬಿ.ಜೆ.ಪಿ ಮಾರ್ಪಡುತ್ತದೆ.
ಅಲ್ಪಸಂಖ್ಯಾತರು, ದಲಿತರ ಹೊರತಾಗಿ ಪ್ರಮುಖವಾಗಿ ಲಿಂಗಾಯತ ಹಾಗೂ ವಕ್ಕಲಿಗ ಮತಗಳನ್ನು ಸೆಳೆದುಕೊಂಡು ಜನಪ್ರಿಯ ಪಕ್ಷವಾಗಿದ್ದ ಕಾಂಗ್ರೆಸ್ ಗೆ ದೇವರಾಜ್ಅರಸು ಬಂದ ಮೇಲೆ ಹಿಂದುಳಿದ ವರ್ಗಗಳ ಬೆಂಬಲವೂ ದೊರಕಿ ಅತ್ಯಂತ ಗಟ್ಟಿಮುಟ್ಟಾಗಿತ್ತು. ಆದರೆ, 1983ರ ನಂತರದ ರಾಜಕೀಯದಲ್ಲಿ, ರಾಮಕೃಷ್ಣ ಹೆಗಡೆ ಹಾಗೂ ದೇವೇಗೌಡರು ರಾಜಕೀಯ ಮುಖ್ಯವಾಹಿನಿಗೆ ಬಂದಮೇಲೆ ಕಾಂಗ್ರೆಸ್ ತನ್ನ ಶಕ್ತಿಯನ್ನೆಲ್ಲಾ ಕಳೆದುಕೊಂಡು ಕಳೆಗುಂದಿತು.
ಸಂಘಟನಾ ಬಲದಲ್ಲಿ ನಡೆಯುತ್ತಿದ್ದ ಬಿ.ಜೆ.ಪಿಗೆ ಹೋರಾಟದ ಮೂಲಕ ಜನಪ್ರಿಯತೆಯನ್ನು ತಂದು ಪಕ್ಷಕ್ಕೆ ಹೊಸ ರೂಪವನ್ನು ಕೊಟ್ಟಿದ್ದು ಯಡ್ಯೂರಪ್ಪ. ಈಗಿನ ಹಗ್ಗಜಗ್ಗಾಟದ ರಾಜಕೀಯಕ್ಕಾಗಿ, ಪಕ್ಷದ ಮೂಲ ಸಿದ್ದಾಂತದಲ್ಲೇ ರಾಜಿ ಮಾಡಿಕೊಂಡಿದ್ದೂ ಸಹ ಅದೇ ಯಡ್ಯೂರಪ್ಪ. ಅವರು ಈಗ ಒಬ್ಬ ಪಕ್ಕಾ ಜಾತೀವಾದಿ ಮನುಷ್ಯನಂತೆ ಕಾಣುತ್ತಾರೆ. ಈ ಎಲ್ಲಾ ಮೇಲಾಟಗಳೂ ಅವರಿಗೆ ತಕ್ಷಣದ ಮೇಲುಗೈ ತಂದುಕೊಡಬಹುದು. ಆದರೆ, ಸಂಘಟನೆಯನ್ನು ಮರೆತು ಕೇವಲ ತಮ್ಮ ಸಮುದಾಯದಿಂದಲೇ ತಾಕತ್ತು ಪಡೆಯುತ್ತಾ ಹೋದರೆ ದೂರಗಾಮಿ ಓಟದಲ್ಲಿ ಕಾಂಗ್ರೇಸ್ ನಂತೆಯೇ ಬಿ.ಜೆ.ಪಿಯೂ ರೋಗಗ್ರಸ್ತಗೊಳ್ಳುತ್ತದೆ, ಇದರಲ್ಲಿ ಯಾವ ಅಚ್ಚರಿಯೂ ಇಲ್ಲ.
ಮೂಲ ಲೇಖನ: ಅರುಣ್, ಇಂಡಿಯನ್ ಎಕ್ಸ್ ಪ್ರೆಸ್ (5-11-10)
ಅನುವಾದ:- ರಮೇಶ ದೊಡ್ಡಪುರ(9-11-10)
ಬುಧವಾರ, ನವೆಂಬರ್ 03, 2010
ಹಸಿದವರಾರು, ಬೆತ್ತಲಾದವರಾರು ಎಂದು ಇಡೀ ದೇಶಕ್ಕೇ ಗೊತ್ತಿದೆ
ಭೂಕೇ ನಂಗೇ ಹಿಂದುಸ್ಥಾನ್ ಸೆ ಕಶ್ಮೀರ್ ಕೋ ಆಜಾದೀ ಚಾಹಿಯೇ(ಹಸಿದ, ಬೆತ್ತಲಾದ ಭಾರತದಿಂದ ಕಾಶ್ಮೀರಕ್ಕೆ ಸ್ವತಂತ್ರ್ಯ ಬೇಕು) ಎಂದು ದೆಹಲಿಯಲ್ಲಿರುವ ಕೋಪರ್ನಿಕಸ್ ಮಾರ್ಗದಲ್ಲಿರುವ ಎಲ್.ಟಿ.ಜಿ ಆಡಿಟೋರಿಯಮ್ ನಲ್ಲಿ ಅಕ್ತೊಬರ್ ಇಪ್ಪತ್ತೊಂದನೇ ತಾರೀಖು ಅರುಂಧತಿ ರಾಯ್ ಘಂಟಾಘೋಷವಾಗಿ ನುಡಿದರೂ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಿಲ್ಲ ನಮ್ಮ ಕೇಂದ್ರ ಸರ್ಕಾರ. ಕ್ರಮ ಕೈಗೊಳ್ಳಲಿಲ್ಲ ಎನ್ನುವುದಕ್ಕಿಂತ ಕ್ರಮ ಕೈಗೊಳ್ಳುವುದಿಲ್ಲ ಎಂಬುದು ಗೊತ್ತಿದ್ದೇ ಹಾಗೆ ಮಾತನಾಡಲಾಯಿತು ಎನ್ನಬಹುದು. ಕಾರಣ, ಇದೇ ವರ್ಷದ ಸೆಪ್ಟೆಂಬರ್ ಹತ್ತೊಂಭತ್ತರಂದು ಉತ್ತರ ಅಮೇರಿಕಾದ ಜನಪ್ರಿಯ ಟಿ.ವಿ ವಾಹಿನಿ 'ಡೆಮಾಕ್ರಸಿ ನೌ' ನ ವರದಿಗಾರ್ತಿ ಅಮಿ ಗುಡ್ಮನ್ ಅವರಿಗೆ ಅರುಂಧತಿ ಸಂದರ್ಶನ ನೀಡಿದರು. ಕಾಶ್ಮೀರದ ಸಮಸ್ಯೆ, ಆಜಾದೀ ಯ ಬಗೆಗೇ ನಡೆಯುತ್ತಿದ್ದ ಸಂದರ್ಶನದಲ್ಲಿ ಅರುಂಧತಿ ಹೇಳಿದ ಒಂದು ಮಾತು,'ದೆಹಲಿಯ ಕಾಮನ್ವೆಲ್ತ್ ಗೇಮ್ಸ್ ಗಾಗಿ ಅಲ್ಲಿರುವ ಬಡವರನ್ನೆಲ್ಲಾ ಪಾರ್ಕ್ ಗಳಿಗೆ ತಳ್ಳಿ, ಅವರು ಕಾಣದಂತೆ ಬಿಲ್ ಬೋರ್ಡ್ ಗಳನ್ನು ಹಾಕಲಾಗಿದ್ದಂತೆ, ಅಮೇರಿಕಾ ಅಧ್ಯಕ್ಷ ಒಬಾಮಾ ಭಾರತಕ್ಕೆ ಬರುವ ವೇಳೆಗೆ ಕಾಶ್ಮೀರ ವಿಷಯವನ್ನೂ ಮುಚ್ಚಿ ಹಾಕುವ ಪ್ರಯತ್ನವನ್ನು ಭಾರತ ಸರ್ಕಾರ ಮಾಡುತ್ತಿದೆ' ಎಂದರು. ಇದರರ್ಥ, ಕಾಶ್ಮೀರದಲ್ಲಿ ಬಿದ್ದಿರುವ ಕಲ್ಲೇಟಿನಿಂದ ಇತ್ತೀಚೆಗಷ್ಟೇ ಚೇತರಿಸಿಕೊಳ್ಳುತ್ತಿರುವ ಭಾರತ ಸರ್ಕಾರ, ಒಬಾಮಾ ಬರುವ ವೇಳೆಗೆ ಯಾವುದೇ ಹೊಸ ಇಕ್ಕಟ್ಟಿನಲ್ಲಿ ಸಿಕ್ಕಿಹಾಕಿಕೊಳ್ಳಲು ಇಷ್ಟ ಪಡುವುದಿಲ್ಲ ಎಂಬ ಸ್ಪಷ್ಟ ಅರಿವು ಅರುಂಧತಿ ಅವರಿಗಿದೆ. ಹಾಗಾಗಿಯೇ ಅಷ್ಟೊಂದು ಧೈರ್ಯವಾಗಿ ದೆಹಲಿಯಲ್ಲೇ ಸಭೆನಡೆಸಿ, ದೇಶ ಒಡೆಯುವ ಮಾತಾಡಿದ್ದು.

ಈ ಸಭೆಯ ಕುರಿತು ಯೊಚಿಸಬೇಕಾದ ಇನ್ನೊಂದು ವಿಷಯವೆಂದರೆ, ಇದು ಕೇವಲ ಕಾಶ್ಮೀರಕ್ಕಷ್ಟೇ ಸೀಮಿತವಾಗಿಲ್ಲ ಎನ್ನುವುದು. ಸಭೆಯಲ್ಲಿ ಅರುಂಧತಿ ರಾಯ್ ಹಾಗೂ ಕಾಶ್ಮೀರದ ಪ್ರತ್ಯೇಕತಾವಾದಿ ಸೈಯದ್ ಅಲಿಶಾ ಗಿಲಾನಿ ಹೊರತುಪಡಿಸಿ, ನಾಗಾಲ್ಯಾಂಡ್ಅನ್ನು ಭಾರತದಿಂದ ಪ್ರತ್ಯೇಕಿಸಲು ಹಗಲಿರುಳೂ ಶ್ರಮಿಸುತ್ತಿರುವ ನಾಗಾ ಪೀಪಲ್ಸ್ ಮೂವ್ಮೆಂಟ್ ಫಾರ್ ಹ್ಯೂಮನ್ ರೈಟ್ಸ್(NPMHR) ನ ಪ್ರಧಾನ ಕಾರ್ಯದರ್ಶಿ Dr.N Venuh, ಮಣಿಪುರದಲ್ಲಿ ಪ್ರತ್ಯೇಕತೆಯ ಕೂಗು ಮೊಳಗಿಸುತ್ತಿರುವ ಕಮಿಟಿ ಫಾರ್ ಪೀಸ್ ಅಂಡ್ ಡೆಮಾಕ್ರಸಿ (CPDM) ಯ Malem Ningthouja, ಲಡಾಯೀ ಹಾರೇ ಹೈ ಮಗರ್ ಆಜಾದೀ ಕಾ ಜಂಗ್ ನಹೀ ಚೋಡೇ ಹೈ ಹಮ್( ಕದನ ಸೋತಿದ್ದರೂ ಸ್ವಾತಂತ್ರ್ಯದ ಯುದ್ಧ ಬಿಟ್ಟಿಲ್ಲ) ಎಂದು ಹೇಳಿದ- ಸತ್ತು ಹೋಗಿದೆ ಎಂದು ಹೇಳಲಾಗುತ್ತಿರುವ ಪಂಜಾಬ್ ಪ್ರತ್ಯೇಕತಾವಾದಿ 'ದಲ್ ಖಾಲ್ಸಾ'ದ ಕನ್ವರ್ಪಾಲ್ ಸಿಂಗ್ ಮತ್ತು ಹರಚರಣ್ಜೀತ್ ಸಿಂಗ್, ಆಂಧ್ರ ಪ್ರದೇಶದಲ್ಲಿ ರಾಡಿಕಲ್ ಸ್ಟೂಡೆಂಟ್ಸ್ ಯೂನಿಯನ್ ಎಂಬ ಗುಂಪು ಮಾಡಿಕೊಂಡು, ಸರ್ಕಾರ 1991ರಲ್ಲಿ ಅದರ ಮೇಲೆ ನಿಷೇಧ ಹೇರಿದ ನಂತರ ಇದೀಗ ರೆವಲ್ಯೂಷನರಿ ಡೆಮಾಕ್ರಟಿಕ್ ಪಾರ್ಟಿ(ಆರ್.ಡಿ.ಪಿ) ಎಂಬ ಮಾವೋಗಳೊಂದಿಗೆ ಸಹಮತ ಹೊಂದಿರುವ ಸಂಘಟನೆಯ ಜಿ.ಎನ್. ಸಾಯಿಬಾಬಾ, ಪ್ರತ್ಯೇಕ ತಮಿಳುನಾಡಿಗೆ ಆಗ್ರಹಿಸುತ್ತಿರುವ ತಮಿಳ್ ನ್ಯಾಷನಲ್ ಲಿಬರೇಷನ್ ಮೂವ್ಮೆಂಟ್ ನ ಕಾರ್ಯದರ್ಶಿ Thaigu , ಮಾವೋವಾದಿಗಳ ನಾಗರಿಕ ಮುಖವಾಗಿರುವ ಆಂಧ್ರದ ವರವರರಾವ್ ಹಾಗೂ ಬಂಗಾಳದ ಸುಜಾತೋ ಭದ್ರ- ಶುದ್ಧಭ್ರತ ಸೇನ್ ಗುಪ್ತ, ಜಮ್ಮುವಿನ ಶಿವನಂದನ್- ಶೇಖ್ ಶೌಕತ್ ಹುಸೇನ್ ಅವರುಗಳು.
2008ರಲ್ಲಿ ಇದೇ ಎಲ್.ಟಿ.ಜಿ ಆಡಿಟೋರಿಯಮ್ ನಲ್ಲಿ ಪ್ರಾರಂಭವಾದ ಕಮಿಟೀ ಫಾರ್ ದಿ ರೀಲೀಸ್ ಆಫ್ ಪೊಲಿಟಿಕಲ್ ಪ್ರಿಸನರ್ಸ್(CRPP) ಎಂಬ ಹೆಸರಿನಡಿ ನಡೆದ ಈ ಸಭೆಯು ಮಣಿಪುರ, ನಾಗಾಲ್ಯಾಂಡ್, ಬಂಗಾಳ, ಪಂಜಾಬ್, ಆಂಧ್ರ, ತಮಿಳುನಾಡು ರಾಜ್ಯಗಳಿಂದ ಅಂದರೆ, ಪೂರ್ವ-ಪಶ್ಚಿಮ-ಉತ್ತರ-ದಕ್ಷಿಣ ಎಲ್ಲ ಭಾರತದಿಂದಲೂ ಪ್ರತಿನಿಧಿಗಳು ಆಗಮಿಸಿದ್ದ, ಒಂದರ್ಥದಲ್ಲಿ 'ಭಾರತದ ರಾಷ್ಟ್ತ್ರೀಯತೆಯನ್ನೇ ಪ್ರಶ್ನಿಸಲು ಮಾಡಲಾದ ರಾಷ್ಟ್ತ್ರೀಯ ಸಮ್ಮೇಳನ!' ಇದಾಗಿತ್ತು. ಇಂದು ಇವರೆಲ್ಲಾ ಒಟ್ಟಾಗಿ ಕೇವಲ ಕಾಶ್ಮೀರದ ಪ್ರತ್ಯೇಕತೆಯ ಕುರಿತು ಮಾತ್ರ ಮಾತನಾಡುತ್ತಿದ್ದಾರೆ. ಈ ಕೆಲಸ ಆದರೆ ದೇಶದ ವಿವಿಧೆಡೆಗಳಲ್ಲಿಯೂ ಇದೇ ದಾರಿ ಅನುಸರಿಸಿ ದೇಶವನ್ನು ಛಿದ್ರ-ಛಿದ್ರ ಮಾಡುವ ಹುನ್ನಾರ ಇವರಿಗಿದೆ.
ಈ ಸಭೆಯ ತೀರ್ಮಾನಗಳಲ್ಲಿ ಮೊದಲನೆಯದೆಂದರೆ, 'ಭಾರತ ಸರ್ಕಾರವು ಕಾಶ್ಮೀರವನ್ನು ಅಂತಾರಾಷ್ಟ್ತ್ರೀಯ ಸಮಸ್ಯೆ ಎಂದು ಅಧಿಕೃತವಾಗಿ ಒಪ್ಪಿಕೊಳ್ಳಬೇಕು' ಎಂಬುದು. ಆ ಮೂಲಕ ಅಮೆರಿಕಾದ ಮಧ್ಯಸ್ಥಿಕೆ ಏರ್ಪಡಿಸಿ 'ಕೋತಿ ನ್ಯಾಯ' ಮಾಡಿಸುವ ಹುನ್ನಾರ ಇದು. ಕಳೆದ ವಾರವಷ್ಟೇ, ಕಾಶ್ಮೀರ ವಿಷಯದಲ್ಲಿ ತಾನು ಮಧ್ಯಸ್ಥಿಕೆ ವಹಿಸಬೇಕೆಂಬ ಪಾಕಿಸ್ತಾನದ ವಿನಂತಿಯನ್ನು ಅಮೇರಿಕಾ ನಯವಾಗಿ ತಳ್ಳಿಹಾಕಿದೆ. ಆದರೆ ಮನದಾಳದಲ್ಲಿ ಮಧ್ಯಸ್ಥಿಕೆಯ ಆಸೆ ಹೊಂದಿರುವ ಅದು, 'ಒತ್ತಡ'! ಹೆಚ್ಚಾದಾಗ ಕಾಶ್ಮೀರ ವಿಷಯದಲ್ಲಿ ತನ್ನ ಮೂಗುತೂರಿಸುವುದು ನಿಶ್ಚಿತ. ನಂತರ ತನ್ನ ಸೇನೆಯನ್ನು ಅಲ್ಲಿ ನುಗ್ಗಿಸಿ ತಂತ್ರಜ್ಞಾನದ ಸಹಾಯದಿಂದ ಭಾರತ-ಚೀನಾಗಳ ಮೇಲೆ ಒಂದು ಕಣ್ಣಿಡುವುದು ಅದರ ದೂ(ದು)ರಾಲೋಚನೆ. ಒಂದು ಕಡೆ ಪಾಕಿಸ್ತಾನದಿಂದ ಇನ್ನೊಂದು ಕಡೆ ದೇಶದ ಒಳಗಿನಿಂದ ಎರಡೂ ಕಡೆ ಯುದ್ಧವಾಗುವಂತೆ ಮಾಡಿ ಭಾರತವನ್ನು ಸೋಲಿಸುವುದು ಅಮೆರಿಕಾದಿಂದ ಹಿಡಿದು ಅರುಂಧತಿ ರಾಯ್ ವರೆಗಿನ ಎಲ್ಲರ ಕನಸು.
ಕಳ್ಳಕಾಕರನ್ನು, ಸುಲಿಗೆಕೋರರನ್ನು, ಅತ್ಯಾಚಾರಿಗಳನ್ನು ಆರಾಮವಾಗಿ ಓಡಾಡಿಕೊಂಡಿರಲು ಬಿಟ್ಟು, ನ್ಯಾಯ ಕೇಳುವ ಲೇಖಕರ ಬಾಯಿಮುಚ್ಚಿಸುತ್ತಿರುವ ದೇಶವನ್ನು(ಭಾರತವನ್ನು) ಕಂಡರೆ ಮರುಕ ಬರುತ್ತದೆ ಎಂದಿರುವ ಅರುಂಧತಿ ರಾಯ್ ತಿಳಿಯಬೇಕಾದ್ದೆಂದರೆ, ಭಾರತದಲ್ಲಾಗಿರುವುದಕ್ಕೇ ಅವರು ಇಷ್ಟೊಂದು ಮಾತನಾಡಲು ಆಗುತ್ತಿರುವುದು ಎಂಬ ವಿಷಯವನ್ನು. ಹಾಗೂ ಬಾಂಗ್ಲಾದ ತಸ್ಲೀಮಾ ನಸ್ರೀನ್, ಮ್ಯಾನ್ಮಾರ್ ನ ಆಂಗ್ ಸಾನ್ ಸುಕಿ ಯಂತಹ ಲೇಖಕಿಯರ ಪರಿಸ್ಥಿತಿ ಏನಾಗಿದೆ ಎಂಬುದನ್ನೊಮ್ಮೆ ನೆನಪಿಸಿಕೊಳ್ಳಬೇಕು. ಭಾರತಕ್ಕೆ ಯಾವ ಸಮಯದಲ್ಲಿ ಯಾವಪೆಟ್ಟು ನೀಡಬೇಕು ಎಂಬುದನ್ನು ಅಂತಾರಾಷ್ಟ್ತ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಅರುಂಧತಿ ರಾಯ್ ಗೆ ಚೆನ್ನಾಗಿ ತಿಳಿದಿದೆ. ಒಂದು ಅಣುಬಾಂಬ್ ನಿಂದ ಮಾಡಬಹುದಾದಷ್ಟು ವಿಚ್ಛಿದ್ರಕಾರಿ ಬೆಳವಣಿಗೆಯನ್ನು ಒಂದು ಸೆಮಿನಾರ್ ನಿಂದ ಮಾಡಬಹುದು ಎಂದು ಅವರು ತಿಳಿಸಿದ್ದಾರೆ. ಆದರೆ, ಹಸಿದು-ಬೆತ್ತಲಾಗಿರುವುದು ಭಾರತವಲ್ಲ, ಭಾರತೀಯರ ರಕ್ತಕ್ಕಾಗಿ ಹಸಿದು ತಮ್ಮ ಎಲ್ಲಾ ಷಡ್ಯಂತ್ರ ಬಯಲಾದ ಮೇಲೆ ಭಾರತದ ಮುಂದೆ ಬೆತ್ತಲಾಗಿರುವುದು ತಾವೇ ಎಂಬುದನ್ನು ರಾಯ್, ಗಿಲಾನಿ ಮುಂತಾದವರು ತಿಳಿಯಬೇಕು.
ಲಾಸ್ಟ್ ಡ್ರಾಪ್: ದೇಶದ ಹೆಸರು ಕೆಡುತ್ತದೆ ಎಂದು ಅರುಂಧತಿ, ಗಿಲಾನಿ ವಿರುದ್ಧ ಮೊಕದ್ದಮೆ ಹೂಡದ ಕೇಂದ್ರ ಸರ್ಕಾರ, ಪ್ರಚೋದನಾತ್ಮಕ ಹೇಳಿಕೆ ನೀಡಿದ್ದಾರೆನ್ನುವ ಕಾರಣವೊಡ್ಡಿ ದಾಖಲಿಸಿರುವ ಮೋದಿ-ಪ್ರವೀಣ್ ತೊಗಾಡಿಯಾ-ಪ್ರಮೋದ್ ಮುತಾಲಿಕ್ ಮೇಲಿರುವ ಮೊಕದ್ದಮೆಗಳನ್ನು ಮಾತ್ರ ಹಿಂದಕ್ಕೆ ಪಡೆಯುವುದಿಲ್ಲ. Double Standard ಅಂದರೆ ಇದೇನಾ?
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)