ಲೇಬಲ್ಗಳು
ವಿಜಯವಾಣಿ
(55)
ಪತ್ರಿಕೋದ್ಯಮ
(48)
Karnataka
(34)
ಕರ್ನಾಟಕ
(26)
Politics
(24)
ಕನ್ನಡ ಮತ್ತು ಸಂಸ್ಕೃತಿ
(23)
National
(22)
ಸಂದರ್ಶನ
(17)
ವಿವಾದ
(11)
ಜೀವನ
(10)
Commerce
(8)
Justice
(7)
ಆರೆಸ್ಸೆಸ್
(7)
Congress
(6)
ಭಗವದ್ಗೀತೆ
(6)
ಭ್ರಷ್ಟಾಚಾರ
(6)
Book
(5)
External Affairs
(5)
Vijay Karnataka
(5)
ರಾಜಕೀಯ
(5)
Army
(4)
Budget
(4)
Religion
(4)
ಟೌನ್ ಹಾಲ್
(4)
ಶಿಕ್ಷಣ
(4)
Kashmir
(3)
SL Bhyrappa
(3)
Vijayavani
(3)
ಸಾಹಿತ್ಯ
(3)
Freedom
(2)
Modi
(2)
Yedyurappa
(2)
ಇಸ್ರೊ
(2)
ಉದ್ಯೋಗ
(2)
ಪರಿಸರ ಮಾಲಿನ್ಯ
(2)
ಬಾಹ್ಯಾಕಾಶ
(2)
ವಂಚನೆ
(2)
ವಿಜ್ಞಾನ
(2)
Arundhati Roy
(1)
Bhagat singh
(1)
Bharat
(1)
Fashion
(1)
Internet
(1)
Interview
(1)
Mohan Bhagwat
(1)
Muslim
(1)
Opinion
(1)
Poem
(1)
RSS
(1)
Real Estate
(1)
Sikh
(1)
Sports
(1)
ಕನ್ನಡ ಪ್ರಭ
(1)
ಚೀನಾ
(1)
ಹೊಸ ದಿಗಂತ
(1)
ಶನಿವಾರ, ಆಗಸ್ಟ್ 03, 2019
ಮಂಗಳವಾರ, ಜುಲೈ 23, 2019
ಮಂಗಳವಾರ, ಜುಲೈ 16, 2019
ಭಾನುವಾರ, ಜುಲೈ 14, 2019
ಶನಿವಾರ, ಫೆಬ್ರವರಿ 09, 2019
ನರೇಂದ್ರ ಮೋದಿ ಸರ್ಕಾರ 2014-2019- ಕರ್ನಾಟಕ
ಹಾಲು ಬೆಳಕಿನ ಉಜಾಲಾ ಯೋಜನೆ
ವಿದ್ಯುತ್ತನ್ನು ಉಳಿತಾಯ ಮಾಡುವುದು, ಹೆಚ್ಚಿನ ವಿದ್ಯುತ್ತನ್ನು ಉತ್ಪಾದಿಸುವುದಕ್ಕಿಂತಲೂ ಕಷ್ಟದ ಕೆಲಸ ಎಂದು ಪ್ರಧಾನಿ ನರೇಂದ್ರ ಮೋದಿಯವರು ತಿಳಿಸುವ ಮೂಲಕ ವಿದ್ಯುತ್ ಉಳಿತಾಯದ ಮಹತ್ವವನ್ನು 2015ರ ಜ.5ಕ್ಕೆ ಸಾರಿದ್ದರು. ಕಡಿಮೆ ವಿದ್ಯುತ್ ಬಳಸಿ ಹೆಚ್ಚಿನ ಪ್ರಕಾಶಮಾನವಾದ ಬೆಳಕು ನೀಡುವ, ದೀರ್ಘಕಾಲ ಬಾಳಿಕೆ ಬರುವ ಎಲ್‌ಇಡಿ ಬಲ್ಬ್‌ಗಳನ್ನು ಪ್ರಕಾಶ ಪಥ ಎಂದು ಬಣ್ಣಿಸಿದ್ದರು. ಜನಸಾಮಾನ್ಯನ ಬದುಕಿನಲ್ಲಿ ಹಾಲು ಬೆಳಕು ಚೆಲ್ಲುವ ಯೋಜನೆಗೆ ಉಜಾಲಾ ನಾಮಕರಣ ಮಾಡಿದ್ದರು.
ಮಾರುಕಟ್ಟೆಯಲ್ಲಿ 300-400 ರೂ. ಇದ್ದ ಎಲ್‌ಇಡಿ ಬಲ್ಬ್‌ಗಳನ್ನು ಬೃಹತ್ ಪ್ರಮಾಣದಲ್ಲಿ ಕಂಪನಿಯಿಂದ ಸರ್ಕಾರವೇ ಖರೀದಿಸಿದ್ದರಿಂದ ಬೆಲೆ ಕೇವಲ 130 ರೂ.ಗೆ ದೊರಕಿತ್ತು. ಸರ್ಕಾರದ ಪರಿಶ್ರಮ ಹಾಗೂ ಜನರ ತೆರಿಗೆ ಹಣವನ್ನು ವೆಚ್ಚ ಮಾಡುವ ಮುನ್ನ ಎಚ್ಚರಿಕೆ ವಹಿಸುವ ಪ್ರಧಾನಿ ಮೋದಿಯವರು, ಮೊದಲಿಗೆ ನವದೆಹಲಿಯ ಸೌತ್ ಬ್ಲಾಖ್‌ನಲ್ಲಿರುವ ತಮ್ಮ ಕಚೇರಿಗೆ ಎಲ್‌ಇಡಿ ಬಲ್ಬ್‌ಗಳನ್ನು ಅಳವಡಿಸಿ ಅದರ ಸಾಧಕ ಬಾಧಕ ಪರೀಕ್ಷೆ ಮಾಡಿದ್ದರು. ಪ್ರತಿ ತಿಂಗಳಿಗೆ 7 ಸಾವಿರ ಯುನಿಟ್ ವಿದ್ಯುತ್ ಉಳಿತಾಯ ಆಗುತ್ತದೆ ಎಂಬುದು ಖಾತ್ರಿಯಾದ ಬಳಿಕವಷ್ಟೆ ಸಾರ್ವಜನಿಕರಿಗೆ ವಿತರಣೆ ಆರಂಭಿಸಲಾಯಿತು.
2015ರಿಂದ ಇಲ್ಲಿವರೆಗೆ ದೇಶಾದ್ಯಂತ 32, 13, 45, 671(32.13 ಕೋಟಿ) ಎಲ್‌ಇಡಿ ಬಲ್ಬ್ ವಿತರಣೆ ಮಾಡಲಾಗಿದೆ. ಇದರಿಂದ ಪ್ರತಿ ವರ್ಷ 16,693 ಕೋಟಿ ರೂ. ಮೊತ್ತದ 41, 732 ದಶಲಕ್ಷ ಕಿ.ವ್ಯಾ ವಿದ್ಯುತ್ ಉಳಿತಾಯವಾಗುತ್ತಿದೆ. ಸಾಮಾನ್ಯ ಬಲ್ಬ್ ಬಳಕೆಯಿಂದ ಹೊರಸೂಸುವ ವಾರ್ಷಿಕ 3, 38, 03, 081 ಟನ್ ಇಂಗಾಲಾಮ್ಲವನ್ನು(ಸಿಒ2) ಇದರಿಂದ ಕಡಿಮೆ ಮಾಡಲಾಗಿದೆ.
ಕರ್ನಾಟಕದಲ್ಲಿ 2,19,25, 981 ಎಲ್‌ಇಡಿ ಬಲ್ಬ್ ವಿತರಣೆ ಮಾಡಲಾಗಿದೆ. ಇದರಿಂದ ಪ್ರತಿ ವರ್ಷ 1,139 ಕೋಟಿ ರೂ. ಮೊತ್ತದ 28,47, 461 ಮೆ. ವ್ಯಾ. ವಿದ್ಯುತ್ ಉಳಿತಾಯವಾಗುತ್ತಿದೆ. ಸಾಮಾನ್ಯ ಬಲ್ಬ್ ಬಳಕೆಯಿಂದ ಹೊರಸೂಸುವ 23, 06,44 ಟನ್ ವಾರ್ಷಿಕ ಇಂಗಾಲಾಮ್ಲವನ್ನು(ಸಿಒ2) ಕಡಿಮೆ ಮಾಡಲಾಗಿದೆ.
ಬಲ್ಬ್ ಮಾತ್ರವಲ್ಲದೆ, ಎಲ್ಲ ವಿದ್ಯುತ್ ಉಪಕರಣಗಳನ್ನು ಉತ್ತಮ ಗುಣಮಟ್ಟದ್ದೇ ಬಳಸುವುದರಿಂದ ವಿದ್ಯುತ್ ಉಳಿತಾಯ ಸಾಧ್ಯ ಎಂಬುದನ್ನು ಸಾರಲು, ಉಜಾಲಾ ಯೋಜನೆಯಲ್ಲಿ ಟ್ಯೂಬ್‌ಲೈಟ್ ಹಾಗೂ ಫ್ಯಾನ್‌ಗಳನ್ನೂ ವಿತರಣೆ ಮಾಡಲಾಗಿದೆ. ರಾಜ್ಯದಲ್ಲಿ 54,083 ಫ್ಯಾನ್ ಹಾಗೂ 3,92, 484 ಟ್ಯೂಬ್ ಲೈಟ್‌ಗಳನ್ನು ವಿತರಣೆ ಮಾಡಿ ಬಡವರ ಮನೆಗಳಲ್ಲಿ ಪ್ರತಿ ತಿಂಗಳು ಪಾವತಿಸುವ ವಿದ್ಯುತ್ ಬಿಲ್‌ನಲ್ಲಿ ಉಳಿತಾಯದ ಜತೆಗೆ ಪರಿಸರ ಸಂರಕ್ಷಣೆಯನ್ನೂ ಮಾಡಲಾಗುತ್ತಿದೆ.
ಜಿಲ್ಲಾವಾರು ಎಲ್‌ಇಡಿ ಬಲ್ಬ್ ವಿತರಣೆ(23.01.2019ರವರೆಗೆ)
ವಿಜಯಪುರ 26,149
ಬಾಗಲಕೋಟೆ 84,561
ಬೆಳಗಾವಿ 13,09,048
ಧಾರವಾಡ 3,98,305
ಹಾವೇರಿ 1,38,350
ಉತ್ತರ ಕನ್ನಡ 1,36,453
ಶಿವಮೊಗ್ಗ 10,27,836
ಚಿಕ್ಕಮಗಳೂರು 5,01,627
ಉಡುಪಿ 4,04,953
ಹಾಸನ 6,75,884
ದಕ್ಷಿಣ ಕನ್ನಡ 20,19,325
ಕೊಡಗು 4,72,674
ಬೀದರ್ 75,561
ಕಲಬುರ್ಗಿ 3,66,993
ಯಾದಗಿರಿ 81,270
ಗದಗ 66,278
ರಾಯಚೂರು 1,38,067
ಕೊಪ್ಪಳ 72,394
ದಾವಣಗೆರೆ 2,99,869
ಬಳ್ಳಾರಿ 4,89,519
ಚಿತ್ರದುರ್ಗ 48,777
ತುಮಕೂರು 4,48,304
ಚಿಕ್ಕಬಳ್ಳಾಪುರ 3,41,415
ಬೆಂಗಳೂರು ಗ್ರಾ. 8,39,868
ಕೋಲಾರ 2,40,182
ಬೆಂಗಳೂರು ನ. 76,55,461
ಮಂಡ್ಯ 5,05,971
ರಾಮನಗರ 4,25,184
ಮೈಸೂರು 23,21,173
ಚಾಮರಾಜನಗರ 3,14,530
------------------------------ ------------------------------ -
ಉಜ್ವಲ ಯೋಜನೆ
ಮನೆಮಂದಿಗೆಲ್ಲ ಅಡುಗೆ ಮಾಡಿ ಬಡಿಸುವ ಗ್ರಾಮೀಣ ಹಾಗೂ ನಗರದ ಬಡ ಮಹಿಳೆಯರು ಪ್ರತಿ ದಿನ 400 ಸಿಗರೇಟ್‌ನಷ್ಟು ಹೊಗೆ ಸೇವಿಸುತ್ತಿದ್ದರು.!! ಹೌದು. ಯಾವುದೇ ದುಶ್ಚಟಗಳು ಇಲ್ಲದಿದ್ದಾಗ್ಯೂ, ಪ್ರತಿ ನಿತ್ಯ ಕಟ್ಟಿಗೆ ಒಲೆ ಎದುರು ಅಡುಗೆ ಮಾಡುತ್ತಿದ್ದ ತಾಯಂದಿರು ಇಷ್ಟು ಪ್ರಮಾಣದ ಸಿಗರೇಟ್ ಸೇದುವುದರಿಂದ ಬರುವಷ್ಟು ಹೊಗೆಯನ್ನು ಸೇವಿಸಿ ಶ್ವಾಸಕೋಶ ಸೇರಿ ಅನೇಖ ತೊಂದರೆಗಳಿಒಗೆ ಈಡಾಗುತ್ತಿದ್ದರು.
ಮಹಿಳೆಯರ ಈ ಸಂಕಷ್ಟವನ್ನು ಹೋಗಲಾಡಿಸಲು ಪ್ರಧಾಣಿ ನರೇಂದ್ರ ಮೋದಿ ಅವರು ಉಜ್ವಲಾ ಯೋಜನೆಯನ್ನು ಜಾರಿಗೆ ತಂದರು. ಸರ್ಕಾರದಿಂದ ಯೋಜನೆಗೆ ಹಣ ನೀಡುವುದು ಒಂದೆಡೆಯಾದರೆ, ಬಡ ಹಾಗೂ ಗ್ರಾಮೀಣ ಮಹಿಳೆಯರ ಬಗ್ಗೆ ಸಮಾಜದಲ್ಲಿ ಸಂವೇದನೆ ಹೆಚ್ಚಿಸುವತ್ತಲೂ ಪ್ರಧಾನಿಯವರು ದೃಢ ಹೆಜ್ಜೆ ಇಟ್ಟರು.
ಸಾಕಷ್ಟು ಉತ್ತಮ ಆದಾಯವಿರುವ, ಎಲ್‌ಪಿಜಿಗೆ ಸರ್ಕಾರದಿಂದ ನೀಡುವ ಸಬ್ಸಿಡಿ ಹಣದ ಅವಶ್ಯಕತೆ ಇಲ್ಲದೆ ಮಾರುಕಟ್ಟೆ ದರದಲ್ಲೆ ಖರೀದಿಸಬಲ್ಲ ಆರ್ಥಿಕ ಶಕ್ತಿ ಉಳ್ಳವರು ಸಬ್ಸಿಡಿ ಹಣವನ್ನು ತ್ಯಜಿಸುವ ಗಿವ್ ಇಟ್ ಅಪ್ ಯೋಜನೆಗೆ 27. ಮಾರ್ಚ್ 2015ರಲ್ಲಿ ಚಾಳನೆ ನೀಡಲಾಯಿತು. ಸಬ್ಸಿಡಿ ತ್ಯಜಿಸಿದ್ದರಿಂದ ಉಳಿತಾಯವಾಗುವ ಹಣದಲ್ಲಿ ಗ್ರಾಮೀಣ ಮಹಿಳೆಯರಿಗೆ ಉಚಿತ ಸಂಪರ್ಕ ನೀಡುವುದಾಗಿ ಘೋಷಿಸಲಾಯಿತು. ಸಮಾಜದಲ್ಲಿದ್ದ ಸಂವೇದನೆ, ಪ್ರಧಾನಿ ಮೋದಿಯವರ ಮನವಿಗೆ ಸ್ಪಂದಿಸಿತು. 2016ರ ವೇಳೆಗೇ ದೇಶದಲ್ಲಿ 1 ಕೋಟಿ ಎಲ್‌ಪಿಜಿ ಬಳಕೆದಾರರು ಸಬ್ಸಿಡಿ ಬೇಡ ಎಂದು ಘೋಷಿಸಿದರು.
ಅಂದಿನಿಂದ ದೇಶದ 715 ಜಿಲ್ಲೆಗಳಲ್ಲಿ ಐಒಜನೆ ಜಾರಿಯಾಗಿದೆ. ಇಲ್ಲಿವರೆಗೆ 8,14, 88, 334 ಉಚಿತ ಎಲ್‌ಪಿಜಿ ಸಂಪರ್ಕಗಳನ್ನು ನೀಡಲಾಗಿದೆ. ಉಚಿತ ಸಂಪರ್ಕದ ಜತೆಗೆ ಉಚಿತ ಗ್ಯಾಸ್ ಸ್ಟೌ ಹಾಗೂ ಮೊದಲ ಸಿಲಿಂಡರ್ ಉಚಿತವಾಗಿ ನೀಡಲಾಯಿತು. ಅತಿ ಹೆಚ್ಚು ಉಚಿತ ಸಂಪರ್ಕ ಪಡೆದ ರಾಜ್ಯಗಳಲ್ಲಿ ಕರ್ನಾಟಕ ಸ್ಥಾನ ಪಡೆದಿದೆ.
ಪ್ರಮುಖ ರಾಜ್ಯಗಳು(22.01. 2019ರವರೆಗೆ)
ಕರ್ನಾಟಕ 19,68,234
ಮಹಾರಾಷ್ಟ 36,10,706
ತಮಿಳುನಾಡು 28,81,892
ಉತ್ತರಪ್ರದೇಶ 1,06,03,600
ಅಸ್ಸಾಂ 24,38,582
ಬಿಹಾರ 72,07,006
ಛತ್ತೀಸ್‌ಗಢ 26,73,737
ಗುಜರಾತ್ 20,10,870
ಮಧ್ಯಪ್ರದೇಶ 55,15,416
------------------------------ -------
ಕರ್ನಾಟಕದಲ್ಲಿ ಚಾಲ್ತಿಯಲ್ಲಿರುವ ರೈಲ್ವೆ ಯೋಜನೆಗಳು
-ಹೊಸ ಹಳಿ ನಿರ್ಮಾಣ: 16 ಯೋಜನೆಗಳು, 2,146 ಕಿ.ಮೀ ಉದ್ದ, 21, 098 ಕೋಟಿ ರೂ. ಮೊತ್ತ
-ಡಬ್ಲಿಂಗ್ ಕಾಮಗಾರಿ: 15 ಯೋಜನೆಗಳು, 1,923 ಕಿ.ಮೀ ಉದ್ದ, 14, 105 ಕೋಟಿ ರೂ. ಮೊತ್ತ.
ಹೊಸ ಹಳಿ ಯೋಜನೆಗಳು
ಮಾರ್ಗ ಉದ್ದ(ಕಿ.ಮೀ)
ಕಡೂರು- ಚಿಕ್ಕಮಗಳೂರು- ಸಕಲೇಶಪುರ 93
ಹೆಜ್ಜಾಲ-ಚಿಕ್ಕಮಗಳೂರು 142
ಹುಬಬ್ಳ್ಳೀ- ಅಂಕೋಲ 167
ಮುನಿರಾಬಾದ್- ಮೆಹಬೂಬ್‌ನಗರ್ 246
ರಾಯದುರ್ಗ- ತುಮಕೂರು 213
ಕಡಪ- ಬೆಂಗಳೂರು 255.40
ಬಾಗಲಕೋಟೆ- ಕುಡಚಿ 142
ಶಿವಮೊಗ್ಗ-ಹರಿಹರ 79
ವೈಟ್‌ಫೀಲ್ಡ್-ಕೋಲಾರ 53
ಮಾರಿಕುಪ್ಪಮ್-ಕುಪ್ಪಮ್ 24
ತುಮಕೂರು-ದಾವಣಗೆರೆ 200
ಗದಗ- ವಾಡಿ 252
ಚಿಕ್ಕಬಳ್ಳಾಪುರ- ಗೌರಿಬಿದನೂರು 44
ಚಿಕ್ಕಬಳ್ಳಾಪುರ- ಪುಟ್ಟಪರ್ತಿ- ಶ್ರೀ ಸತ್ಯಸಾಯಿ ನಿಲಯಂ 103
ಶ್ರೀನಿವಾಸಪುರ- ಮದನಪಲ್ಲಿ 75
ಗದಗ-ಯಳವಿಗಿ 58
ಮೋದಿ ಸರ್ಕಾರದ ಅವಧಿಯಲ್ಲಿ:
- -26 ರೈಲ್ವೆ ಮೇಲ್ಸೇತುವೆ, 41 ರೈಲ್ವೆ ಕೆಳಸೇತುವೆ ಮಂಜೂರು
- - ಒಟ್ಟು 2754 ಕಿ.ಮೀ. ಉದ್ದದ 21 ಹೊಸ ಮಾರ್ಗ ಸಮೀಕ್ಷೆಗೆ ನಿರ್ಧಾರ
- - ಒಟ್ಟು 2510 ಕಿ.ಮೀ ಉದ್ದದ 13 ಮಾರ್ಗಗಳಲ್ಲಿ ವಿದ್ಯುದೀಕರಣ ಮಂಜೂರು
------------------------------ -----
ಬಡವರ ಕೌಶಲಕ್ಕೆ ಪ್ರಧಾನಿ ಮುದ್ರಾ
ಸಣ್ಣ ಉದ್ಯಮಿಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಮೈಕ್ರೊ ಯುನಿಟ್ಸ್ ಡೆವಲಪ್‌ಮೆಂಟ್ ಆಯಂಡ್ ರಿ ಫೈನಾನ್ಸ್ ಏಜೆನ್ಸಿ(ಮುದ್ರಾ) ಹಾಗೂ ಪ್ರಧಾನ ಮಂತ್ರಿ ಮುದ್ರಾ ಯೋಜನೆಯನ್ನು ಜಾರಿ ಮಾಡಲಾಯಿತು.
ಯೋಜನೆ ಜಾರಿಯಾದ ವರ್ಷಕ್ಕೆ ಅಂದರೆ 2017ರಲ್ಲಿ ದೇಶಾದ್ಯಂತ 2, 46, 437 ಕೋಟಿ ರೂ. ಸಾಲ ನೀಡಲಾಗಿತ್ತು. ಇದರಲ್ಲಿ ಶೇ. 40 ಸಾಲವನ್ನು ಮಹಿಳೆಯರಿಗೆ, ಶೇ. 33 ಪ್ರಮಾಣವನ್ನು ಎಸ್‌ಸಿಎಸ್‌ಟಿ, ಒಬಿಸಿ ಸಮುದಾಯದವರಿಗೆ ನೀಡಲಾಯಿತು. ಯೋಜನೆಯಿಂದ ಒಟ್ಟಾರೆ 4.81 ಕೋಟಿ ಸೂಕ್ಷ್ಮ ಸಾಲಗಾರರು ಇದರಿಂದ ಲಾಭ ಪಡೆದಿದ್ದರು.
ಕರ್ನಾಟಕದಲ್ಲಿ ಮುದ್ರಾ ಪ್ರಭಾವ
ವಿಭಾಗ 2015-16 2016-17 2017-18 2018-19(ಅಂದಾಜು)
ಶಿಶು (50 ಸಾವಿರ ರೂ.ವರೆಗೆ ಸಾಲ) 9071.71 8166.92 10351.83 7064.60
ಕಿಶೋರ(50,001-5 ಲಕ್ಷ ರೂ.ವರೆಗೆ) 4744.94 5402.85 7177.23 4889.05
ತರುಣ(5,00001-10 ಲಕ್ಷ ರೂ.ವರೆಗೆ)2652.78 3720.93 4971.61 3160.36
(ಕೋಟಿ ರೂ.ಗಳಲ್ಲಿ)
ಮಧ್ಯಮ ವರ್ಗ, ಬಡ ವರ್ಗದವರಲ್ಲಿರುವ ಕೌಶಲಗಳಿಗೆ ರೆಕ್ಕೆ ನೀಡುವ ವಿಶಿಷ್ಠ ಯೋಜನೆ ಮುದ್ರಾ. ನಮ್ಮ ಜನರಲ್ಲಿರುವ ಔದ್ಯಮಿಕ ಕೌಶಲವನ್ನು ಉತ್ತೇಜಿಸುವ ಹಾಗೂ ಅವರಲ್ಲಿ ಸ್ವಾವಲಂಬನೆಯನ್ನು ಮೂಡಿಸುವಲ್ಲಿ ಯೋಜನೆ ಸಹಕಾರಿ.
-ನರೇಂದ್ರ ಮೋದಿ, ಪ್ರಧಾನಿ
------------------------------ -------
ಆಯಷ್ಮಾನ್ ಭಾರತ
ವೈದ್ಯಕೀಯ ಕ್ಷೇತ್ರ ವ್ಯಾಪಾರಿಕರಣವಾಗುತ್ತಿರುವ ಸಮಯದಲ್ಲಿ, ಬಡವರು ಆರೋಗ್ಯ ಸೇವೆ ಪಡೆಯಲು ಸರ್ಕಾರದ ಅತ್ಯಂತ ಮಹತ್ವದ ಕಾರ್ಯಕ್ರಮ ಆಯುಷ್ಮಾನ್ ಭಾರತ ಯೋಜನೆಯನ್ನು 2018ರಲ್ಲಿ ಪ್ರಧಾನಿ ಮೋದಿ ಸರ್ಕಾರ ಆರಂಭಿಸಿತು.
ದೇಶದ 10 ಕೋಟಿ ಕುಟುಂಬಗಳ ಸುಮಾರು 50 ಕೋಟಿ ಬಡ ಜನರಿಗೆ, ಕುಟುಂಬವೊಂದಕ್ಕೆ ವಾರ್ಷಿಕ 5 ಲಕ್ಷ ರೂ.ವರೆಗೆ ಆರೋಗ್ಯ ವಿಮೆ ನೀಡುವ ಇಂತಹ ಮತ್ತೊಂದು ಕಾರ್ಯಕ್ರಮ ಜಗತ್ತಿನಲ್ಲೆ ಇಲ್ಲ. 2018ರ ಸೆಪ್ಟೆಂಬರ್‌ನಲ್ಲಿ ಯೋಜನೆ ಜಾರಿಯಾದಾಗಿನಿಂದ ದೇಶಾದ್ಯಂತ 8.9 ಲಕ್ಷ ಜನರು ದುಬಾರಿ ಚಿಕಿತ್ಸೆಗಳನ್ನು ಉಚಿತವಾಗಿ ಪಡೆದಿದ್ದಾರೆ.
ಯೋಜನೆ ಜಾರಿ ಮಾಡಿ 130 ದಿನದಲ್ಲೆ(ಜನವರಿ 29ರವರೆಗೆ) 1 ಕೋಟಿಗೂ ಹೆಚ್ಚೂ(1,00,28,168) ಕುಟುಂಬಗಳಿಗೆ, ಅಂದರೆ ಸುಮಾರು ನಾಲ್ಕು ಕೋಟಿಗೂ ಹೆಚ್ಚು ಜನರಿಗೆ ಇ ಕಾರ್ಡ್ ಮುದ್ರಿಸಿ ಅವರ ಮನೆ ಬಾಗಿಲಿಗೆ ತಲುಪಿಸಲಾಗಿದೆ.
------------------------------ -----------------
ಉದ್ಯಮ ಸ್ನೇಹಿ ವಾತಾವರಣ
ಏಕಕಾಲಕ್ಕೆ ಲಕ್ಷಾಂತರ ಜನರಿಗೆ ಉದ್ಯೋಗ ಕಲ್ಪಿಸುವ ಉದ್ಯಮ ವಲಯಕ್ಕೆ ಪ್ರೋತ್ಸಾಹ ನೀಡುವ ಸಲುವಾಗಿ ದೇಶದಲ್ಲಿ ಉದ್ಯಮ ಸ್ನೇಹಿ ವಾತಾವರಣವನ್ನು ನಿರ್ಮಿಸಲು ಮೋದಿ ಸರ್ಕಾರ 2015ರಲ್ಲಿ ಯೋಜನೆಯೊಂದನ್ನು ರೂಪಿಸಿತು. ವಿಶ್ವ ಬ್ಯಾಂಗ್ ಸಮೂಹದ ಜತೆ ಸೇರಿ ಪ್ರತಿ ರಾಜ್ಯದ ಉದ್ಯಮ ಸ್ನೇಹಿ ವಾತಾವರಣ ರ‌್ಯಾಂಕಿಂಗ್ ಪ್ರಕಟಿಸುವ ಮೂಲಕ ರಾಜ್ಯಗಳ ನಡುವೆ ಆರೋಗ್ಯಕರ ಸ್ಪರ್ಧೆಗೆ ಪಾರದರ್ಶಕ ವ್ಯವಸ್ಥೆ ರೂಪಿಸಲಾಯಿತು. ರಾಜ್ಯಗಳ ನಡುವಣ ರ‌್ಯಾಂಕ್‌ಗಳಲ್ಲಿ ಸ್ವಲ್ಪ ಪ್ರಮಾಣದ ಏರಿಳಿತ ಕಂಡರೂ, ಒಟ್ಟಾರೆ ಉದ್ಯಮ ಸ್ನೇಹಿ ವಾತಾವರಣ ನಿರ್ಮಾಣದಲ್ಲಿ ಅಗಾಧ ಬದಲಾವಣೆ ಕಂಡಿದೆ. 2015ರಲ್ಲಿ ಉದ್ಯಮ ಸ್ನೇಹಿ ಮಾರ್ಗಸೂಚಿಗಳ ಪಾಲನೆಯಲ್ಲಿ ಕೇವಲ ಶೇ.48.50 ಗುರಿ ಸಾಧಿಸಿದ್ದ ಕರ್ನಾಟಕ 2017ರ ವೇಳೆಗೆ ದ್ವಿಗುಣಗೊಂಡು ಶೇ.96.42ಕ್ಕೇರಿರುವುದೇ ಇದಕ್ಕೆ ಉದಾಹರಣೆ.
ಕರ್ನಾಟಕದಲ್ಲಿ ಉದ್ಯಮ ಸ್ನೇಹಿ ವಾತಾವರಣ(ಈಸ್ ಆಫ್ ಡೂಯಿಂಗ್ ಬಿಸಿನೆಸ್)
ಇಸವಿ ಅಂಕ(ಶೇ.) ರ‌್ಯಾಂಕ್
2015 48.50 9
2016 88.39 9
2017 96.42 8
------------------------------ ----------
ಕೇಂದ್ರ ಸರ್ಕಾರದಿಂಧ ಅನುದಾನ
ಕೇಂದ್ರ ಸರ್ಕಾರದಿಂಧ ಲಭಿಸಬೇಕಿದ್ದ ಅನುದಾನದಲ್ಲಿ 13ನೇ ಹಣಕಾಸು ಆಯೋಗ(ಯುಪಿಎ ಅವಧಿ) ಹೋಲಿಕೆಯಲ್ಲಿ 14ನೇ ಹಣಕಾಸು ಆಯೋಗ(ಎನ್‌ಡಿಎ ಅವಧಿ) ಅನ್ಯಾಯ ಮಾಡಿದೆ ಎಂದು ಕರ್ನಾಟಕದಲ್ಲಿ ಗುಲ್ಲೆಬ್ಬಿಸಲಾಗುತ್ತದೆ. ಆದರೆ ಸತ್ಯಾಂಶ ಬೇರೆಯೇ ಇದೆ.
ಕೇಂದ್ರದಿಂದ ಕರ್ನಾಟಕಕ್ಕೆ ಹಣದ ಹರಿವು(ಹಣಕಾಸು ಆಯೋಗವಾರು)
ಕ್ರಮ.ಸಂ. ವಿಭಾಗ 13ನೇ ಆಯೋಗ 14ನೇ ಆಯೋಗ ಹೆಚ್ಚಳ(ರೂ.) ಹೆಚ್ಚಳ(ಶೇ.)
1 ಕೇಂದ್ರದ ತೆರಿಗೆಯಲ್ಲಿ ರಆಜ್ಯದ ಪಾಲು 61691.02 186925.00 125233.98 203.00
2 ರಾಜ್ಯ ವಿಪತ್ತು ಪರಿಹಾರ ನಿಧಿ(ಎಸ್‌ಡಿಆರ್‌ಎಫ್)667.07 1145.25 478.18 71.68
3 ಸ್ಥಳೀಯ ಸಂಸ್ಥೆಗಳಿಗೆ ಅನುದಾನ 6534.44 15145.54 8611.10 131.78
ಕೇಂದ್ರದಿಂದ ಕರ್ನಾಟಕಕ್ಕೆ ಹಣದ ಹರಿವು(ವರ್ಷವಾರು)
ವಿಭಾಗ 2015-16 2016-17
- ಕೇಂದ್ರದ ತೆರಿಗೆ ಪಾಲು 23983.34 28759.94
- ಹಣಕಾಸು ಆಯೋಗ ಅನುದಾನ 1741.44 2773.16
- ಇತರೆ ಅನುದಾನ 12187.31 14797.69 (ಕೇಂದ್ರ ಪ್ರಾಯೋಜಿತ ಯೋಜನೆ ಸೇರಿ)
ಕೇಂದ್ರ ಸರ್ಕಾದಿಂದ ಸಹಾಯಾನುದಾನ
ಇಸವಿ ಮೊತ್ತ(ಕೋಟಿ ರೂ.)
2015-16 13928.75
2016-17 15703.19
2017-18 16082.91
------------------------------ ---------
ಕರ್ನಾಟಕದಲ್ಲಿ ಹೊಸ ರಾಷ್ಟ್ರೀಯ ಹೆದ್ದಾರಿ ಹಾಗೂ ನಿರ್ವಹಣೆ
ಇಸವಿ ರಸ್ತೆಯ ಉದ್ದ(ಕಿ.ಮೀ) ವೆಚ್ಚ(ಕೋಟಿ ರೂ)
2015-16 311 173.66
2016-17 678 217.15
2017-18 771 167.82
ಚತುಷ್ಪಥ ಮತ್ತು ಷಟ್ಪಥ
ಇಸವಿ ಉದ್ದ(ಕಿ.ಮೀ)
2015-16 114.59
2016-17 507.93
2017-18 355.25
ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ಗ್ರಾಮೀಣ ರಸ್ತೆ ನಿರ್ಮಾಣ
ಇಸವಿ ಗುರಿ(ಕಿ.ಮೀ) ಸಾಧನೆ(ಕಿ.ಮಿ)
2014-15 650 470
2015-16 715 999
2016-17 800 897
2017-18 66 58
2018-19 12 6.6
------------------------------ ----
ಅಮೃತ್ ಯೋಜನೆ
ಸಣ್ಣ ನಗರಗಳಲ್ಲಿನ ಮೂಲಸೌಕರ್ಯ ಅಭಿವೃದ್ಧಿಯ ಅವಶ್ಯಕತೆಯನ್ನು ಮನಗಂಡ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಅಟಲ್ ಮಿಷನ್ ಫಾರ್ ರಿಜುವಿನೇಷನ್ ಆ್ಯಂಡ್ ಅರ್ಬನ್ ಟ್ರಾನ್ಸ್‌ಫಾರ್ಮೇಷನ್(ಅಮೃತ್) ಯೋಜನೆಯನ್ನು ಜಾರಿ ಮಾಡಿದರು. ಈ ಯೋಜನೆಗೆ ಕರ್ನಾಕದ 27 ನಗರಗಳನ್ನು ಆಯ್ಕೆ ಮಾಡಲಾಯಿತು. ಯೋಜನೆ ಜಾರಿಗೆ ಕರ್ನಾಟಕಕ್ಕೆ 2015ರ ಡಿ.28ಕ್ಕೆ 118.46 ಕೋಟಿ ರೂ., 2016ರ ಆ.23ಕ್ಕೆ 154.32 ಕೋಟಿ ರೂ., 20174 ಏ.28ಕ್ಕೆ 190.98 ಕೋಟಿ ರೂ., 20184 ಮಾ.28ಕ್ಕೆ 88.08 ಕೋಟಿ ರೂ., 2017ರ ಡಿ.22ಕ್ಕೆ 61.49 ಕೋಟಿ ರೂ., 2018ರ ಮೇ 28ಕ್ಕೆ 544.01 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.
ಅಮೃತ್ ಯೋಜನೆಗೆ ಆಯ್ಕೆಯಾದ ರಾಜ್ಯದ ನಗರಗಳು
- ಬಾದಾಮಿ
- ಬಾಗಲಕೋಟೆ
- ಬಿಬಿಎಂಪಿ
- ಬೆಳಗಾವಿ
- ಬಳ್ಳಾರಿ
- ಭದ್ರಾವತಿ
- ಬೀದರ್
- ವಿಜಯಪುರ
- ಚಿಕ್ಕಮಗಳೂರು
- ಚಿತ್ರದುರ್ಗ
- ದಾವಣಗೆರೆ
- ಗದಗ-ಬೆಟಗೇರಿ
- ಗಂಗಾವತಿ
- ಕಲಬುರ್ಗಿ
- ಹಾಸನ
- ಹೊಸಪೇಟೆ
- ಹುಬ್ಬಳ್ಳಿ-ಧಾರವಾಡ
- ಕೋಲಾರ
- ಮಂಡ್ಯ
- ಮಂಗಳೂರು
- ಮೈಸೂರು
- ರಾಯಚೂರು
- ರಾಣೆಬೆನ್ನೂರು
- ರಾಬರ್ಟ್‌ಸನ್‌ಪೇಟೆ
- ಶಿವಮೊಗ್ಗ
- ತುಮಕೂರು
- ಉಡುಪಿ
------------------------------ -------------------
ಹೃದಯ್ ಯೋಜನೆ
ಐತಿಹಾಸಿಕ ಹಿನ್ನೆಲೆಯುಳ್ಳ ನಗರಗಳಲ್ಲಿ ಮೂಲಸೌಕರ್ಯ ವೃದ್ಧಿಸಿ ಅಲ್ಲಿನ ಪ್ರವಾಸೋದ್ಯಮಕ್ಕೆ ಇಂಬು ನೀಡುವ ನಿಟ್ಟಿನಲ್ಲಿ ಹೃದಯ್ ಯೋಜನೆಯನ್ನು ಘೋಷಿಸಲಾಯಿತು. ಯೋಜನೆಯಲ್ಲಿ ಕರ್ನಾಟಕದ ಬಾದಾಮಿ ಆಯ್ಕೆಯಾಗಿದೆ. ಬಾದಾಮಿಯಲ್ಲಿ ಇಲ್ಲಿವರೆಗೆ ಒಟ್ಟು ನಾಲ್ಕು ಯೋಜನೆಗಳಿಗೆ ಒಪ್ಪಿಗೆ ನೀಡಲಾಗಿದೆ.
ಬಾದಾಮಿ(2019ರ ಜನವರಿವರೆಗೆ ಪ್ರಗತಿ)
ಕ್ರ. ಸಂ. ಯೋಜನೆ ಯೋಜನೆ ಮೊತ್ತ ಬಿಡುಗಡೆಯಾದ ಮೊತ್ತ ಪ್ರಗತಿ(ಶೇ.)
1 ರಸ್ತೆ ಸಾರಿಗೆ ಮೂಲ ಸೌಕರ್ಯ, ಪಾರ್ಕಿಂಗ್, ಸೂಚನಾ ಫಲಕ. 14.25 2.75 60
2 ಜೀರೋ ವೇಸ್ಟ್ ಮ್ಯಾನೇಜ್‌ಮೆಂಟ್ 1.59 0.46 100
3 ಹಳೆ ಬಾದಾಮಿಯಲ್ಲಿ ಒಳಚರಂಡಿ 0.42.40 0.37.87 97
4 ಐತಿಹಾಸಿಕ ಕಟ್ಟಡ ಅಭಿವೃದ್ಧಿ 2.17 0.41 0
ಒಟ್ಟು 18.44 4.01 57.23
------------------------------ ----
ಸ್ಮಾರ್ಟ್ ಸಿಟಿ
ನಗರಗಳಲ್ಲ ಮೂಲಸೌಕರ್ಯ ಅಭಿವೃದ್ಧಿಪಡಿಸಿ ಅಲ್ಲಿನ ನಾಗರಿಕರಿಗೆ ಉತ್ತಮ ಜೀವನ ನಿರ್ವಹಣೆ ವಾತಾವರಣ ನಿರ್ಮಿಸುವುದು ಸ್ಮಾರ್ಟ್‌ಸಿಟಿ ಯೋಜನೆಯ ಉದ್ದೇಶ. ಪ್ರಧಾನಿ ನರೇಂದ್ರ ಮೋದಿಯವರ ಅಚ್ಚುಮೆಚ್ಚಿನ ಯೋಜನೆಗಳಲ್ಲೊಂದಾದ ಸ್ಮಾರ್ಟ್ ಸಿಟಿ ಯೋಜನೆಗೆ ಕರ್ನಾಟಕದಿಂದ ಆರು ನಗರಗಳನ್ನು ಆಯ್ಕೆ ಮಾಡಲಾಯಿತು. ಆಯಾ ನಗರಗಳಲ್ಲಿ ಕೇಂದ್ರ ಸರ್ಕಾರದ ಸಹಯೋಗದಲ್ಲಿ ರೂಪಿಸಿರುವ ವಿಶೇಷ ವಾಹಕಗಳ(ಎಸ್‌ಪಿವಿ) ಮೂಲಕ ಜಿಲ್ಲಾಧಿಕಾರಿಗಳ ಯೋಜನೆಗೆ ಅನುಗುಣವಾಗಿ ಹಣ ಬಿಡುಗಡೆ ಮಾಡಲಾಗುತ್ತಿದೆ. ವಿವಿಧ ರಾಜ್ಯಗಳು, ನಗರಗಳ ಅಭಿವೃದ್ಧಿ ಹಾಗೂ ಸಂಸ್ಕೃತಿ ವಿಭಿನ್ನವಾದ ಕಾರಣ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಆಯಾ ನಗರಗಳ ಅವಶ್ಯಕತೆಗೆ ಅನುಗುಣವಾಗಿ ಯೋಜನೆ ರೂಪಿಸಲಾಗಿದೆ ಹಾಗೂ ಮಂಜೂರು ಮಾಡಲಾಗುತ್ತಿದೆ.
ಬೆಳಗಾವಿ:
ಭೂ ಅಂತರ್ಗತ ಕೇಬಲ್‌ಗೆ 168 ಕೋಟಿ ರೂ., ಸಾಗಣಿಕೆ ಹಾದಿ ಅಭಿವೃದ್ಧಿಗೆ 128 ಕೋಟಿ ರೂ., ಕೇಂದ್ರ ಹಾಗೂ ನಗರ ಬಸ್ ನಿಲ್ದಾಣ ಅಭಿವೃದ್ಧಿಗೆ 110 ಕೋಟಿ ರೂ., ಮೇಲ್ಸೇತುವೆ 129 ಕೋಟಿ ರೂ., ರೈಲ್ವೆ ಮೇಲ್ಸೇತುವೆಗೆ 101 ಕೋಟಿ ರೂ., ಎಸ್‌ಟಿಪಿ ಹಾಗೂ ಇನ್ನಿತರೆ ತ್ಯಾಜ್ಯ ನೀರು ನಿರ್ವಹಣೆ ವ್ಯವಸ್ಥೆಗೆ 156 ಕೋಟಿ ರೂ., ತಾರಸಿ ಸೌರ ಘಟಕ 195 ಕೋಟಿ ರೂ., ಪವನ ವಿದ್ಯುತ್ ಉತ್ಪಾದನೆಗೆ 186 ಕೋಟಿ ರೂ., ಭೂ ಅಂತರ್ಗತ ಹೈ ಟೆನ್ಷನ್ ಲೈನ್ 316.27 ಕೋಟಿ ರೂ., ದಿನಪೂರ್ತಿ ನೀರು ಸರಬರಾಜು 427 ಕೋಟಿ ರೂ., ಬಸ್ ನಿಲ್ದಾಣಗಳು 130 ಕೋಟಿ ರೂ., ನಗರ ಅನಿಲ ಸರಬರಾಜು 150 ಕೋಟಿ ರೂ., ನದಿ ತೀರ ಅಭಿವೃದ್ಧಿ: ಆರ್ಥಿಕ ದುರ್ಬಲ ವರ್ಗಕ್ಕೆ ಕೈಗೆಟುಕುವ ದರದಲ್ಲಿ ಗೃಹ ನಿರ್ಮಾಣಕ್ಕೆ 84 ಕೋಟಿ ರೂ., ಬುಡಾ ಲೇಔಟ್‌ನಲ್ಲಿ ಕೈಗೆಟುಕುವ ದರದಲ್ಲಿ ಮನೆ ನಿರ್ಮಿಸಲು 43.52 ಕೋಟಿ ರೂ., ಹೆರಿಟೇಜ್ ಪಾರ್ಕ್ ನಿರ್ಮಾಣಕ್ಕೆ 26 ಕೋಟಿ ರೂ., ರೆಕ್ರಿಯೇಷನಲ್ ಸ್ಪೇಸಸ್ ನಿರ್ಮಾಣಕ್ಕೆ 15 ಕೋಟಿ ರೂ., ನಗರೋದ್ಯಾನ 5 ಕೋಟಿ ರೂ., ರಸ್ತೆ ಬದಿ ಮರ 2 ಕೋಟಿ ರೂ., ಕಲಾ ಗ್ಯಾಲರಿ ಮತ್ತು ಪ್ರದರ್ಶನ ಸ್ಥಳ ಹಾಗೂ ಮಕ್ಕಳ ವಿಜ್ಞಾನ ಪಾರ್ಕ್ 14 ಕೋಟಿ ರೂ., ಸರೋವರ ಅಭಿವೃದ್ಧಿಗೆ 10 ಕೋಟಿ ರೂ., ಇ ಆಡಳಿತಕ್ಕೆ 12 ಕೋಟಿ ರೂ., ನಳಿಕೆ ಮೂಲಕ ನಗರ ಅನುಲ ಸರಬರಾಜು ವ್ಯವಸ್ಥೆಗೆ 172.78 ಕೋಟಿ ರೂ.(ಪಿಪಿಪಿ ಮೂಲಕ), ನೀಡಲಾಗಿದೆ.
ಮಂಗಳೂರು:
ರಸ್ತೆ ಅಗಲೀಕರಣಕ್ಕೆ 150 ಕೋಟಿ ರೂ., ಪಾದಚಾರಿ ರಸ್ತೆ ಸಹಿತ ರಸ್ತೆ ಮೇಲ್ದರ್ಜೆ 150 ಕೋಟಿ ರೂ., ಸರ್ಕಾರಿ ಕಟ್ಟಡಗಳ ಮೇಲೆ ತಾರಸಿ ಸೌರ ಘಟಕ 203.32 ಕೋಟಿ ರೂ., ತ್ಯಾಜ್ಯ ನೀರು ಸಂಸ್ಕರಣೆಗೆ 128.86 ಕೋಟಿ ರೂ., ಐಪಿಡಿಎಸ್ ಪ್ರಸ್ತಾವನೆ 114.32 ಕೋಟಿ ರೂ., ಆರ್ಥಿಕ ದುರ್ಬಲ ವರ್ಗಕ್ಕೆ ಕೈಗೆಟುಕುವ ದರದಲ್ಲಿ ಗೃಹ ನಿರ್ಮಾಣಕ್ಕೆ 7.8 ಕೋಟಿ ರಊ., ವಾಟರ್ ಫ್ರಂಟ್ ಮರೀನಾ ಡೆವಲಪ್‌ಮೆಂಟ್ 78 ಕೋಟಿ ರೂ., ಜಲ ಮನರಂಜನಾ ಪಾರ್ಕ್ 10.84 ಕೋಟಿ ರೂ., ಹಸಿರು ಪ್ರದೇಶ ಅಭಿವೃದ್ಧಿ 7.02 ಕೋಟಿ ರೂ., ಸಾರ್ವಜನಿಕ ಸಾರಿಗೆ ಮಾಹಿತಿಗೆ ಆಯಪ್ ಆಧರಿತ ವ್ಯವಸ್ಥೆಗೆ 10 ಕೋಟಿ ರೂ. ನೀಡಲಾಗಿದೆ.
ದಾವಣಗೆರೆ:
ಮಂಡಿಪೇಟೆ ಪ್ರದೇಶ ಅಭಿವೃದ್ಧಿಗೆ 372.9 ಕೋಟಿ ರೂ., ಮಂಡಿಪೇಟೆ ಪ್ರದೇಶ ಆರ್ಥಿಕ ಅಭಿವೃದ್ಧಿಗೆ 102.91 ಕೋಟಿ ರೂ.,ಒಳಚರಂಡಿ ವ್ಯವಸ್ಥೆಗೆ 161 ಕೋಟಿ ರೂ., ನಗರ ಸಾರಿಗೆ ಮಾಹಿತಿ ವ್ಯವಸ್ಥೆಗೆ 459.36 ಕೋಟಿ ರೂ., ಪ್ರದೇಶಕ್ಕೆ ಅನುಗುಣವಾಗಿ ಕಸದ ಬುಟ್ಟಿ ರಹಿತ ಕಸ ನಿರ್ವಹಣೆ ವ್ಯವಸ್ಥೆಯನ್ನು ಆಯಪ್ ಆಧರಿತ ನಿರ್ವಹಣೆಗೆ 37 ಕೋಟಿ ರೂ. ನೀಡಲಾಗಿದೆ.
ತುಮಕೂರು:
ಸಮಗ್ರ ಬಸ್ ಟರ್ಮಿನಲ್ ಮರು ಅಭಿವೃದ್ಧಿ 174 ಕೋಟಿ ರೂ., ದಿನಪೂರ್ತಿ ನೀರು ಸರಬರಾಜು 259 ಕೋಟಿ ರೂ., ಒಳಚರಂಡಿ ವ್ಯವಸ್ಥೆಗೆ 223 ಕೋಟಿ ರೂ., ಭೂ ಅಂತರ್ಗತ ಕೇಬಲ್ 196 ಕೋಟಿ ರೂ., ಮೆಡಿಕಲ್ ಕಾಲೇಜ್ ಜತೆಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ 300 ಕೋಟಿ ರೂ., ಬೀದಿಬದಿ ದೀಪ ನಿರ್ವಹಣೆ ವ್ಯವಸ್ಥೆಗೆ 201 ಕೋಟಿ ರೂ., ಸರೋವರ ಪ್ರದೇಶ ಅಭಿವೃದ್ಧಿ 89 ಕೋಟಿ ರೂ., ಮಾರುಕಟ್ಟೆ ಪ್ರದೇಶಗಳ ಸ್ಥಾಪನೆಗೆ 2 ಕೋಟಿ ರೂ. ನೀಡಲಾಗಿದೆ.
ಶಿವಮೊಗ್ಗ:
ಭೂ ಅಂತರ್ಗತ ಕೇಬಲ್ 264 ಕೋಟಿ ರೂ., ಹಸರಿರು ಹೊದಿಕೆ ಹೆಚ್ಚಳ 168.84 ಕೋಟಿ ರೂ., ಸುಸ್ಥಿರ ಯೋಜನೆಗಳು 248. 52 ಕೋಟಿ ರೂ., ನದಿ ತೀರ ಅಭಿವೃದ್ಧಿಗೆ 421 ಕೋಟಿ ರೂ. ಒದಗಿಸಲಾಗಿದೆ.
ಹುಬ್ಬಳ್ಳಿ ಧಾರವಾಡ:
ನಗರದ ಕೇಂದ್ರ ಭಾಗ ಜೀರ್ಣೋದ್ಧಾರಕ್ಕೆ 114.78 ಕೋಟಿ ರೂ., ವೈಫೈ ಸೇವೆಯ ಜತೆಗೆ ಸಾರಿಗೆ ವ್ಯವಸ್ಥೆಗೆ 316.59 ಕೋಟಿ ರೂ., ವಿದ್ಯುತ್ ಸ್ಮಾರ್ಟ್ ಮೀಟರ್ ಜತೆಗೆ ಭೂ ಅಂತರ್ಗತ ವಿದ್ಯುತ್ ಮತ್ತು ಸಂಪರ್ಕ ತಂತಿಗೆ 190 ಕೋಟಿ ರೂ., ತಾರಸಿ ಸೌರ ವಿದ್ಯುತ್ ಘಟಕ 128.76 ಕೋಟಿ ರೂ., ನಗರ ಸ್ಥಳೀಯ ಸಂಸ್ಥೆಗಳಿಂದ ಕೈಗೊಳ್ಳುವ ತಂತ್ರಜ್ಞಾನಾಧಾರಿತ ಯೋಜನೆಗೆ 130 ಕೋಟಿ ರೂ., ಕೈಗೆಟುಕುವ ದರದಲ್ಲಿ ಮನೆಗೆ 103.32 ಕೋಟಿ ರೂ., ಸಾರ್ವಜನಿಕ ಸ್ಥಳಗಳ ಮೇಲ್ದರ್ಜೆಗೆ 89.65 ಕೋಟಿ ರೂ. ಹಾಗೂ ಗ್ರೀನ್ ಕಾರಿಡಾರ್‌ಗೆ 10 ಕೋಟಿ ರೂ. ನೀಡಲಾಗಿದೆ.
------------------------------ ------
ಜನೌಷಧಿ ಕೇಂದ್ರ
ವೈದ್ಯಕೀಯ ವೆಚ್ಚ ದಿನೇದಿನೆ ದುಬಾರಿಯಾಗುತ್ತಿರುವ ಹಿನ್ನ್ಲೆಯಲ್ಲಿ ಸಆಮಾನ್ಯ ಜನರು ಆರೋಗ್ಯಯುತ ಜೀವನ ಸಾಗಿಸುವುದು ದುಸ್ಥರವಾಗಿರುವಾಗ ಜನೌಷಧಿ ಯೋಜನೆ ಸಂಜೀವಿನಿಯಾಗಿ ಪರಿಣಮಿಸಿದೆ. ಅತ್ಯಂತ ಕಡಿಮೆ ಹಾಗೂ ರಿಯಾಯಿತಿ ದರದಲ್ಲಿ ಜನೌಷಧಿ ಕೇಂದ್ರಗಳಿಂದ ಗುಣಮಟ್ಟದ ಔಷಧಿ ಖರೀದಿಸುತ್ತಿರುವ ಕೋಟ್ಯಂತರ ಭಾರತೀಯರು ಇಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಕೊಂಡಾಡುತ್ತಿದ್ದಾರೆ. ಯೋಜನೆಯಲ್ಲಿ 700 ಔಷಧಿಗಳು ಹಾಗೂ 154 ಶಸ್ತ್ರಚಿಕಿತ್ಸೆ ಉಪಕರಣಗಳನ್ನು ಮಾರಾಟ ಮಾಡಲಾಗುತ್ತಿದೆ.
ದೇಶಾದ್ಯಂತ ಸದ್ಯ ಒಟ್ಟು 4,844 ಜನೌಷಧಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಕರ್ನಾಟಕದಲ್ಲಿ 420 ಕೇಂದ್ರಗಳು ಈಗಾಗಲೆ ಸ್ಥಾಪನೆಯಾಗಿದ್ದು, ಸದ್ಯದಲ್ಲೆ 22 ಹೊಸ ಕೇಂದ್ರಗಳು ಕಾರ್ಯ ಆರಂಭಿಸಲಿವೆ.
ಮೆಗಾ ಫುಡ್ ಪಾರ್ಕ್
ಆಹಾರ ಸಂಸ್ಕರಣೆಯಿಂದ ರೈತರಿಗೆ ಹೆಚ್ಚಿನ ಆದಾಯ ದೊರಕುತ್ತದೆ ಎಂದರಿತ ಪ್ರಧಾನಿ ನರೇಂದ್ರ ಮೋದಿ ಸರ್ಕಾರ, ದೇಶಾದ್ಯಂತ ಮೆಗಾ ಫುಡ್ ಪಾರ್ಕ್‌ಗಳ ಸ್ಥಾಪನೆಗೆ ಒತ್ತು ನೀಡಿತು. ಇಲ್ಲಿಯವರೆಗೆ ದೇಶದಲ್ಲಿ 40 ಮೆಗಾ ಫುಡ್ ಪಾಕ್‌ಗಳಿಗೆ ಅನುಮತಿ ನೀಡಲಾಗಿದ್ದು, ಕರ್ನಾಕದಲ್ಲಿ ತುಮಕೂರಿನಲ್ಲಿ 144.33 ಕೋಟಿ ರಊ., ಹಾಗೂ ಮಂಡ್ಯದಲ್ಲಿ 113.83 ಕೋಟಿ ರೂ. ವೆಚ್ಚದಲ್ಲಿ ಸ್ಥಾಪನೆಯಾಗುತ್ತಿವೆ.
14 ಕೋಲ್ಡ್ ಚೈನ್ ಯೋಜನೆಗಳಿಗೆ ಹಣಕಾಸು ನೆರವು ನೀಡಲು ಒಪ್ಪಿಗೆ ನೀಡಲಾಗಿದೆ.
------------------------------ -
ಸ್ವಚ್ಛ ಭಾರತ ಮಿಷನ್(ಗ್ರಾಮೀಣ)
ಗ್ರಾಮೀಣ ಪ್ರದೇಶದಲ್ಲಿ ಸಾಂಕ್ರಾಮಿಕ ರೋಗಗಳು ಹರಡಲು ಪ್ರಮುಖವಾಗಿ ಬಯಲು ಬಹಿರ್ದೆಸೆ ಕಾರಣ ಎಂದು ಅನೇಕ ವರ್ಷಗಳ ಹಿಂದೆಯೇ ಕಂಡುಕೊಳ್ಳಲಾಗಿತ್ತು. ಆದರೆ ಬಯಲು ಬಹಿರ್ದೆಸೆಗೆ ತೆರಳುವ ಹವ್ಯಾಸವನ್ನು ಬದಲಿಸಿ ಸ್ವಚ್ಛ ಶೌಚಾಲಯ ನಿರ್ಮಿಸುವ ಯಶಸ್ವಿ ಅಭಿಯಾನವನ್ನು ಪ್ರಧಾನಿ ನರೇಂದ್ರ ಮೋದಿ ಆರಂಭಿಸಿದರು. ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರ ಗೌರವಕ್ಕೆ ಧಕ್ಕೆ ತರುತ್ತಿದ್ದ, ಅನೇಕ ಬಾರಿ ಬಯಲು ಬಹಿರ್ದೆಸೆಗೆ ತೆರಳಿದಾಗ ಅತ್ಯಾಚಾರಕ್ಕೊಳಗಾಗುತ್ತಿದ್ದ ಮಹಿಳೆಯರಿಗೆ ಯೋಜನೆ ಗೌರವ ತಂದುಕೊಟ್ಟಿದೆ. ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ನಡೆಯುತ್ತಿರುವ ಯೋಜನೆ ಇಡೀ ವಿಶ್ವದಲ್ಲಿ ಅತಿ ದೊಡ್ಡ ಹವ್ಯಾಸ ಬದವಾಣೆ ಯೋಜನೆ ಎಂತಲೂ ಶ್ಲಾಘನೆ ಪಡೆದಿದೆ.
ಪ್ರಧಾನಿ ಮೋದಿಯವರ ಸರ್ಕಾರ ಅಸ್ತಿತ್ವಕ್ಕೆ ಬಂದ 2014-15ರಲ್ಲಿ ದೇಶಾದ್ಯಂತ 48.95 ಲಕ್ಷ ವೈಯಕ್ತಿಕ ಶೌಚಾಲಯಗಳಿದ್ದವು. ಇದೀಗ 9.2 ಕೋಟಿಗೆ ಹೆಚ್ಚಳವಾಗಿದೆ. ಅದೇ ರೀತಿ ಕರ್ನಾಟಕದಲ್ಲಿ 2014-15ರಲ್ಲಿ 7.7 ಲಕ್ಷ ವೈಯಕ್ತಿಕ ಶೌಚಾಲಯಗಳಿದ್ದವು. ಇದೀಗ 43. 97 ಲಕ್ಷ ಶೌಚಾಲಯ ನಿರ್ಮಾಣದೊಂದಿಗೆ ಇಡೀ ರಾಜ್ಯ ಬಯಲು ಬಹಿರ್ದೆಸೆ ಮುಕ್ತ ಎಂದು ಸದ್ಯದಲ್ಲೆ ಘೋಷಿಸಲ್ಪಡುವ ಹಂತಕ್ಕೆ ತಲುಪಿದೆ.
-------------------
ಹೊಸ ಬಜೆಟ್ ಘೋಷಣೆಗಳು
2019-20ರ ಮಧ್ಯಂತರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಅನೇಕ ಕೊಡುಗೆಗಳನ್ನು ಸರ್ಕಾರ ನೀಡಿದೆ.
7 ರೈಲು ಮಾರ್ಗಗಳು
1. ಚಿಕ್ಕಬಳ್ಳಾಪುರ-ಗೌರಿಬಿದನೂರು
2. ಗದಗ-ಯಲವಗಿ
3. ಗದಗ-ವಾಡಿ
4. ಶಿವಮೊಗ್ಗ-ರಾಣೆಬೆನ್ನೂರು
5. ರಾಯದುರ್ಗ-ತುಮಕೂರು
6. ದಾವಣಗೆರೆ-ಚಿತ್ರದುರ್ಗ-ತುಮಕೂರು
7. ಬಾಗಲಕೋಟೆ-ಕುಡಚಿ
- ಮೆಟ್ಟುಪಾಳ್ಯಂವರೆಗೂ ವಿಸ್ತರಣೆಗೊಳ್ಳಲಿರುವ 148 ಕಿ.ಮೀ ಉದ್ದದ ಮೈಸೂರು-ಚಾಮರಾಜನಗರ ರೈಲ್ವೆ ಹಳಿ ಗೇಜ್ ಪರಿವರ್ತನೆಗೆ ಒಪ್ಪಿಗೆ ನೀಡಲಾಗಿದೆ.
- ಯಶವಂತಪುರ-ಚನ್ನಸಂದ್ರ(121.78 ಕಿ.ಮೀ), ಬೈಯಪ್ಪನಹಳ್ಳಿ-ಹೊಸೂರು(145 ಕಿ.ಮೀ), ಬೆಂಗಳೂರು ವೈಟ್‌ಫೀಲ್ಡ್-ಬೆಂಗಳೂರು ಸಿಟಿ-ಕೆ.ಆರ್.ಪುರ(23 ಕಿ.ಮೀ), ಹೊಸಪೇಟೆ-ಹುಬ್ಬಳ್ಳಿ-ರೋಮಡಾ- ತಿನ್ನೆಘಾಟ್-ವಾಸ್ಕೋಡಗಾಮ ಮಾರ್ಗದ ಡಬ್ಲಿಂಗ್ ಕಾಮಗಾರಿಗೆ ಸಮ್ಮತಿ.
- ಹಾವೇರಿಯ ಸವಣೂರು, ಧಾರವಾಡದ ನವಲೂರು, ದಾವಣಗೆರೆಯ ತೋಳಿಹುಣಸೆ ರೈಲು ನಿಲ್ದಾಣ ಅಭಿವೃದ್ಧಿ.
- ಬೆಂಗಳೂರಿನಲ್ಲಿ ರೈಲ್ವೆ ಅಭಿವೃದ್ಧಿ ಕೈಗೊಳ್ಳಲು 40 ಕೋಟಿ ರೂ. ಅನುದಾನ
- ನಮ್ಮ ಮೆಟ್ರೊಗೆ 1012 ಕೋಟಿ ರೂ.
- ನಿಮ್ಹಾನ್ಸ್‌ಗೆ 450 ಕೋಟಿ ರೂ.
- ಬೆಂಗಳೂರಿನ ಯುನಾನಿ ವೈದ್ಯ ಸಂಸ್ಥೆಗೆ 40 ಕೋಟಿ ರಊ.
- ಮೈಸೂರಿನ ವಾಕ್ ಶ್ರವಣ ಸಂಸ್ಥೆಗೆ 55 ಕೋಟಿ ರೂ.
- ರಾಜ್ಯದ ಹೆದ್ದಾರಿಗಳ ಅಭಿವೃದ್ಧಿಗೆ 300 ಕೋಟಿ ರೂ.
- ನಗರಗಳ ಕುಡಿಯುವ ನೀರಿನ ಯೋಜನೆಗಳಿಗೆ 217 ಕೋಟಿ ರೂ
--------------------------------------------
ಬರ ಪರಿಹಾರ
೨೦೧೮ರ ಮುಂಗಾರು ಹಂಗಾಮಿನ ಬರ ಪರಿಹಾರಕ್ಕೆ ಕೇಂದ್ರದಿಂದ ಅನುದಾನದ ಖಾತರಿ ದೊರಕುತ್ತಿದ್ದಂತೆ ಈ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರ ತಾರತಮ್ಯ ಧೋರಣೆ ತಳೆದಿದೆ ಎಂಬ ಚರ್ಚೆ ಪುನಃ ಮುನ್ನೆಲೆಗೆ ಬಂದಿತ್ತು. ಆದರೆ, ಬರ ಪರಿಹಾರ ನೀಡುವುದರಲ್ಲಿ ಯುಪಿಎಗಿಂತ ಎನ್‌ಡಿಎ ಬೆಸ್ಟ್ ಎನ್ನುವುದನ್ನಿ ಅಂಕಿಅಂಶಗಳೇ ಸಾರಿ ಹೇಳುತ್ತಿವೆ.
ಮುಂಗಾರಿನಲ್ಲಿ ರಾಜ್ಯದ 100 ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಿ ಮಾರ್ಗಸೂಚಿ ಅನುಸಾರ 2,434 ಕೋಟಿ ರೂ. ನೀಡುವಂತೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದೀಗ 949.49 ಕೋಟಿ ರೂ. ಬಿಡುಗಡೆಗೆ ಕೇಂದ್ರದ ಉನ್ನತಾಧಿಕಾರ ಸಮಿತಿ ಒಪ್ಪಿಗೆ ನೀಡಿದೆ. ಮಹಾರಾಷ್ಟ್ರಕ್ಕೆ ನೀಡಲಾಗುವ ಪರಿಹಾರ ಮೊತ್ತಕ್ಕೆ ಹೋಲಿಸಿದರೆ ರಾಜ್ಯಕ್ಕೆ ಕೊಡುತ್ತಿರುವುದು ಅತ್ಯಲ್ಪವೆಂಬ ಆಕ್ಷೇಪ ವ್ಯಕ್ತವಾಗಿದೆ. ಕೇಂದ್ರ ಸರಕಾರ ಅನ್ಯಾಯ ಮಾಡಿರುವುದಾಗಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರೇ ಆರೋಪಿಸಿದ್ದಾರೆ.
ತೀವ್ರತರ ಬರ ಹಾಗೂ ನೆರೆ ಹಾವಳಿಯಾದಾಗ ಕೇಂದ್ರ ವಿಪತ್ತು ಪರಿಹಾರ ನಿಧಿಯಿಂದ (ಎನ್‌ಡಿಆರ್‌ಎಫ್) ನೆರವು ಕಲ್ಪಿಸಲಾಗುತ್ತದೆ. ಇದಕ್ಕೆ ಮುನ್ನ ಕೇಂದ್ರದ ಅಧ್ಯಯನ ತಂಡವೂ ಸ್ಥಳಕ್ಕೆ ಭೇಟಿ ನೀಡಿ ಪರಾಮರ್ಶೆ ಕೈಗೊಳ್ಳುತ್ತದೆ. ನಂತರ ಕೇಂದ್ರದ ಅಂತರ್ ಸಚಿವಾಲಯದ ಉನ್ನತಾಧಿಕಾರ ಸಮಿತಿಯ ಸಭೆಯಲ್ಲಿ ಪರಹಾರದ ಮೊತ್ತದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ. ಯುಪಿಎ ಅಧಿಕಾರದಲ್ಲಿದ್ದ 10 ವರ್ಷದ ಅವಧಿಯಲ್ಲಿ ಎನ್‌ಡಿಆರ್‌ಎಫ್‌ನಿಂದ ಬಂದ ಅನುದಾನಕ್ಕೆ ಹೋಲಿಸಿದರೆ ಕೇವಲ 5 ವರ್ಷದಲ್ಲಿ ಎನ್‌ಡಿಎ ಸರಕಾರ ಅತಿ ಹೆಚ್ಚಿನ ಮೊತ್ತ ನೀಡಿದೆ.
ಎನ್‌ಡಿಎನಿಂದ ದುಪ್ಪಟ್ಟು ನೆರವು!
ಕೇಂದ್ರ ಸರಕಾರದ ಅಧಿಕೃತ ಮಾಹಿತಿಯಂತೆ ಯುಪಿಎ ಕಾಲದಲ್ಲಿ 2004ರಿಂದ 2014ರವರೆಗೆ ಎನ್‌ಡಿಆರ್‌ಎಫ್‌ನಿಂದ ಒಟ್ಟಾರೆ 3,579.86 ಕೋಟಿ ರೂ. ನೀಡಲಾಗಿದೆ. ಎನ್‌ಡಿಎ ಸರಕಾರ ರಚನೆ ಬಳಿಕ ಕಳೆದ 5 ವರ್ಷದಲ್ಲಿ 6,618.15 ಕೋಟಿ ರೂ. ಒದಗಿಸಲಾಗಿದೆ. ಅಂದರೆ ಎನ್‌ಡಿಆರ್‌ಎಫ್ ನೆರವಿನಲ್ಲಿ ಬಹುತೇಕ ಎರಡು ಪಟ್ಟು ಹೆಚ್ಚಳವಾದಂತಾಗಿದೆ.
ರಾಜ್ಯದಲ್ಲಿನ ಬರ ಪರಿಸ್ಥಿತಿಯ ವಿಷಯಕ್ಕೆ ಬಂದರೆ ಯುಪಿಎ ಅವಧಿಯಲ್ಲೂ ವ್ಯಾಪಕ ಬರವಿತ್ತು. ಎನ್‌ಡಿಎ ಬಂದ ಮೇಲೂ ರಾಜ್ಯದಲ್ಲಿನ ಬರದ ಸಂಕಷ್ಟ ಕಡಿಮೆಯಾಗಿಲ್ಲ. ಈ ದೃಷ್ಟಿಯಿಂದ ನೋಡಿದರೂ ಬರ ಪರಿಹಾರ ನೀಡುವಲ್ಲಿ ಮೋದಿ ಸರಕಾರ ಮುಕ್ತ ಮನಸ್ಸು ತೋರಿದೆ.
ಎನ್‌ಡಿಆರ್‌ಎಫ್ ಅನುದಾನ ವಿವರ
ಯುಪಿಎ
2004-2009 907.28 ಕೋಟಿ ರೂ.
2009-2014 2672.58 ಕೋಟಿ ರೂ.
ಒಟ್ಟು 3,579.86 ಕೋಟಿ ರೂ.
ಎನ್‌ಡಿಎ
2014-2015 271.38 ಕೋಟಿ ರೂ.
2015-2016 1,645.53 ಕೋಟಿ ರೂ.
2016-2017 2,292.50 ಕೋಟಿ ರೂ.
2017-2018 913.04 ಕೋಟಿ ರೂ.
2018-2019 546.21 ಕೋಟಿ ರೂ. ಮತ್ತು 949.49 ಕೋಟಿ ರೂ.
ಒಟ್ಟು 6,618.15 ಕೋಟಿ ರೂ.
******************************ಬೆಂಗಳೂರು-ಮೈಸೂರು ಚತುಷ್ಪಥ ರಾಷ್ಟ್ರೀಯ ಹೆದ್ದಾರಿ
ಬಹುನಿರೀಕ್ಷೆಯ ಬೆಂಗಳೂರು-ಮೈಸೂರು ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯನ್ನು ಷಟ್ಪಥ ರಸ್ತೆಯಾಗಿ ಅಭಿವೃದ್ಧಿಪಡಿಸುವ ಕಾಮಗಾರಿಗೆ ೨೦೧೮ರ ಮಾ.೨೮ ಕ್ಕೆ ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಶಂಕುಸ್ಥಾಪನೆ ನೆರವೇರಿಸಿದರು.
ಒಟ್ಟು 7 ಸಾವಿರ ಕೋಟಿ ರೂ. ವೆಚ್ಚದ ಈ ಯೋಜನೆ ಎರಡು ಹಂತಗಳಲ್ಲಿ ನಡೆಯಲಿದೆ. ಒಂದನೇ ಹಂತದಲ್ಲಿ ಬೆಂಗಳೂರು-ನಿಡಘಟ್ಟ ಮಾರ್ಗದಲ್ಲಿ 56 ಕಿ.ಮೀ. ಉದ್ದ ಹಾಗೂ ಎರಡನೇ ಹಂತದಲ್ಲಿ ನಿಡಘಟ್ಟ-ಮೈಸೂರು ಮಾರ್ಗದಲ್ಲಿ 61 ಕಿ.ಮೀ. ಉದ್ದದ ರಸ್ತೆಯನ್ನು ಆರು ಪಥವಾಗಿ ನಿರ್ಮಿಸಲಾಗುತ್ತದೆ. ಇದರ ಜತೆಗೆ ಬಿಡದಿ, ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ, ಶ್ರೀರಂಗಪಟ್ಟಣದಲ್ಲಿ 6 ಬೈಪಾಸ್ ರಸ್ತೆ ನಿರ್ಮಾಣವಾಗಲಿದೆ. ಆರು ಪಥದ ರಸ್ತೆಯ ಎರಡೂ ಬದಿ ಸವೀರ್‍ಸ್ ರಸ್ತೆ ನಿರ್ಮಾಣವಾಗಲಿದೆ.
ಪ್ರಸ್ತುತ ಬೆಂಗಳೂರು-ಮೈಸೂರು ಪ್ರಯಾಣಕ್ಕೆ ಮೂರು ಗಂಟೆ ಬೇಕಿದೆ. ರಸ್ತೆ ಆರು ಪಥವಾದ ನಂತರ 1.25 ಗಂಟೆ ಸಾಕಾಗುತ್ತದೆ. ಕಾಮಗಾರಿ ಪೂರ್ಣಗೊಳ್ಳಲು ಎರಡೂವರೆ ವರ್ಷ ಗಡುವು ನೀಡಲಾಗಿದೆ.
ಇದೇ ಸಂದರ್ಭ ಕೇರಳ ಗಡಿಯಿಂದ ಕೊಳ್ಳೇಗಾಲದವರೆಗೆ 586 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ 130 ಕಿ.ಮೀ. ಉದ್ದದ ರಸ್ತೆಯನ್ನು ಉದ್ಘಾಟಿಸಲಾಯಿತು. ರಾಷ್ಟ್ರೀಯ ಹೆದ್ದಾರಿ 209 ರಲ್ಲಿ ಬಿಆರ್‌ಟಿ ಮೀಸಲು ಗಡಿಯಿಂದ ಬೆಂಗಳೂರುವರೆಗೆ 171 ಕಿ.ಮೀ. ಉದ್ದದ ದ್ವಿಪಥ ಹಾಗೂ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೇರವೇರಿತು.
ಒಟ್ಟು 7 ಸಾವಿರ ಕೋಟಿ ರೂ. ವೆಚ್ಚದ ಈ ಯೋಜನೆ ಎರಡು ಹಂತಗಳಲ್ಲಿ ನಡೆಯಲಿದೆ. ಒಂದನೇ ಹಂತದಲ್ಲಿ ಬೆಂಗಳೂರು-ನಿಡಘಟ್ಟ ಮಾರ್ಗದಲ್ಲಿ 56 ಕಿ.ಮೀ. ಉದ್ದ ಹಾಗೂ ಎರಡನೇ ಹಂತದಲ್ಲಿ ನಿಡಘಟ್ಟ-ಮೈಸೂರು ಮಾರ್ಗದಲ್ಲಿ 61 ಕಿ.ಮೀ. ಉದ್ದದ ರಸ್ತೆಯನ್ನು ಆರು ಪಥವಾಗಿ ನಿರ್ಮಿಸಲಾಗುತ್ತದೆ. ಇದರ ಜತೆಗೆ ಬಿಡದಿ, ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ, ಶ್ರೀರಂಗಪಟ್ಟಣದಲ್ಲಿ 6 ಬೈಪಾಸ್ ರಸ್ತೆ ನಿರ್ಮಾಣವಾಗಲಿದೆ. ಆರು ಪಥದ ರಸ್ತೆಯ ಎರಡೂ ಬದಿ ಸವೀರ್‍ಸ್ ರಸ್ತೆ ನಿರ್ಮಾಣವಾಗಲಿದೆ.
ಪ್ರಸ್ತುತ ಬೆಂಗಳೂರು-ಮೈಸೂರು ಪ್ರಯಾಣಕ್ಕೆ ಮೂರು ಗಂಟೆ ಬೇಕಿದೆ. ರಸ್ತೆ ಆರು ಪಥವಾದ ನಂತರ 1.25 ಗಂಟೆ ಸಾಕಾಗುತ್ತದೆ. ಕಾಮಗಾರಿ ಪೂರ್ಣಗೊಳ್ಳಲು ಎರಡೂವರೆ ವರ್ಷ ಗಡುವು ನೀಡಲಾಗಿದೆ.
ಇದೇ ಸಂದರ್ಭ ಕೇರಳ ಗಡಿಯಿಂದ ಕೊಳ್ಳೇಗಾಲದವರೆಗೆ 586 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ 130 ಕಿ.ಮೀ. ಉದ್ದದ ರಸ್ತೆಯನ್ನು ಉದ್ಘಾಟಿಸಲಾಯಿತು. ರಾಷ್ಟ್ರೀಯ ಹೆದ್ದಾರಿ 209 ರಲ್ಲಿ ಬಿಆರ್‌ಟಿ ಮೀಸಲು ಗಡಿಯಿಂದ ಬೆಂಗಳೂರುವರೆಗೆ 171 ಕಿ.ಮೀ. ಉದ್ದದ ದ್ವಿಪಥ ಹಾಗೂ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೇರವೇರಿತು.
ಬೆಂಗಳೂರಿನಲ್ಲಿ 10 ಸಾವಿರ ಕೋಟಿ ರೂ. ವೆಚ್ಚದಲ್ಲಿ ರಿಂಗ್ ರಸ್ತೆ ಹಾಗೂ ಮೈಸೂರಿನಲ್ಲಿ ರಿಂಗ್ ರಸ್ತೆ ನಿರ್ಮಿಸಲಾಗುತ್ತಿದೆ. ಈ ಯೋಜನೆಗಳಿಗೆ ಸದ್ಯದಲ್ಲೇ ಚಾಲನೆ ನೀಡಲಾಗುವುದು.
--- ರಮೇಶ ದೊಡ್ಡಪುರ- rameshapm@gmail.com
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)