ಗುರುವಾರ, ಜನವರಿ 27, 2011

Bill Gates -New Health Partnership in Afghanistan and Pakistan



              ಯುನೈಟೆಡ್ ಅರಬ್ ಎಮಿರೇಟ್ಸ್ ಹಾಗೂ ಬಿಲ್ ಗೇಟ್ಸ್ ಫೌಂಡೇಷನ್ನಿನ ಸಹಭಾಗಿತ್ವದಲ್ಲಿ ನಡೆದ ವಿಷಯವೊಂದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನನಗೆ ಸಂತೋಷವಾಗುತ್ತಿದೆ. ಅಬುದಾಭಿಯ ಉಪನಾಯಕ, ದೊರೆ ಶ್ರೀ ಶ್ರೀ ಶೇಖ್ ಮೊಹಮ್ಮದ್ ಬಿನ್ ಜಯಾದ್ ಅಲ್ ನಹ್ಯಾನ್ ಅವರು ಹಾಗೂ ನಾನು ಅಫ್ಘಾನಿಸ್ತಾನ ಹಾಗೂ ಪಾಕಿಸ್ತಾನದಲ್ಲಿ ವಿವಿಧ ಖಾಯಿಲೆಗಳಿಂದ ನರಳುತ್ತಿರುವ ಮಕ್ಕಳಿಗಾಗಿ ಜೀವನಾವಶ್ಯಕ ಲಸಿಕೆಗಳನ್ನು ಕೊಂಡು- ವಿತರಿಸುವ, ಆ ಮಕ್ಕಳ ಆರೋಗ್ಯ ವೃದ್ದಿಸುವ, ಮೂಲಕ ಜೀವನಪೂರ್ತಿ ರೋಗರಹಿತರನ್ನಾಗಿ ಮಾಡುವ ಕಾರ್ಯವನ್ನು ಆರಂಬಿಸಲಿದ್ದೇವೆ.

            ಮಕ್ಕಳನ್ನು ಮಾರಣಾಂತಿಕ ಹಾಗೂ ತಡೆಗಟ್ಟಬಹುದಾದ ಖಾಯಿಲೆಗಳಿಂದ ರಕ್ಷಿಸುವ ವಿಚಾರ ಬಂದಾಗ ಹನ್ನೆರಡು ಸಾವಿರ ಕಿಲೋಮೀಟರ್ ಗಿಂತ ಹೆಚ್ಚಿನ ಹಾಗೂ ಸುಮಾರು ಹನ್ನೆರಡು ಗಂಟೆಗಳ ಅವಧಿಯ ದೂರ ನಗಣ್ಯವಾಗಿ, ನಮ್ಮಿಬ್ಬರ ವಿಚಾರಗಳೂ ಒಂದುಗೂಡಿದ್ದವು. ಕಡಿಮೆ ಖರ್ಚಿನ ಆದರೆ ಅಮೋಘ ಫಲಿತಾಂಶವುಳ್ಳ, ಮಕ್ಕಳಿಗೆ ಹಾಕುವ ವ್ಯಾಕ್ಸಿನ್ ನ ಕುರಿತು, ವಿವಾದಗ್ರಸ್ಥ ಪ್ರದೇಶದಲ್ಲಿ ವಾಸಿಸುವ ಅತಿನೊಂದ ಮಕ್ಕಳ ಬಗ್ಗೆ ಕಾಳಜಿ ವಹಿಸಬೇಕಾದ ಪ್ರಾಮುಖ್ಯತೆ ಹಾಗೂ ಉತ್ತಮ ಭವಿಷ್ಯಕ್ಕಾಗಿ ಆ ಮಕ್ಕಳ, ಸಂಸಾರದ, ಸಮುದಾಯದ ಸಹಾಯ ಮಾಡುವ ಅರಿವು ನಮ್ಮಿಬ್ಬರಿಗೂ ಆಗಿದೆ.

Click Here
            ಅದಕ್ಕಾಗಿಯೇ ಶ್ರೀ ಶ್ರೀ ಶೇಖ್ ಮೊಹಮ್ಮದ್ ಆವರು ಹಾಗೂ ಫೌಂಡೇಷನ್ ಜೊತೆಗೂಡಿ, 100 ಮಿಲಿಯನ್ ಡಾಲರ್ ಹಣವನ್ನು ವಿಶ್ವಸಮುದಾಯದ ಆರೋಗ್ಯಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಜಿ.ಎ.ವಿ.ಐ ಅಲಯನ್ಸ್, ವಿಶ್ವ ಆರೋಗ್ಯ ಸಂಸ್ಥೆ, ಯೂನಿಸೆಫ್ ಗಳ ಮೂಲಕ-ಜೀವರಕ್ಷಕ ಪಂಚವೇಲೆನ್ಸೀಯ ವ್ಯಾಕ್ಸಿನ್, ನ್ಯೂಮೊಕಾಕಲ್ ವ್ಯಾಕ್ಸಿನ್ ಹಾಗೂ ಪೋಲಿಯೋ ವ್ಯಾಕ್ಸಿನ್ ಗಳನ್ನು ಕೊಂಡು- ವಿತರಿಸಲು ನಿಡುತ್ತಿದ್ದೇವೆ.

            ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ರಾಜಕೀಯ ಅಸ್ಥಿರತೆಗಳು ಹಾಗೂ ನೈಸರ್ಗಿಕ ವಿಕೋಪಗಳಿಂದಾಗಿ 5ವರ್ಷದ ಒಳಗಿನ ಮಕ್ಕಳು ವ್ಯಾಕ್ಸಿನ್ ನಿಂದ ಮಾತ್ರ ತಡೆಗಟ್ಟಬಹುದಾದ ಖಾಯಿಲೆಗಳಿಂದ ನರಳುತ್ತಿದ್ದಾರೆ. ನವಜಾತ ಹಾಗೂ 5ವರ್ಷದೊಳಗಿನ ಮಕ್ಕಳ ಸಾವಿನ ಸಂಖ್ಯೆಯು ಈ ದೇಶಗಳಲ್ಲಿ ಅತಿ ಹೆಚ್ಚಿದ್ದು, ಕೇವಲ ನ್ಯೂಮೋನಿಯಾ ಖಾಯಿಲೆಯೊಂದರಿಂದಲೇ ಶೇಕಡಾ 26ರಷ್ಟು ಮಕ್ಕಳು ಸಾವನ್ನಪ್ಪುತ್ತಿದ್ದಾರೆ.

            ಇಡೀ ಪ್ರಪಂಚದಲ್ಲೇ ಕಳೆದ 20ವರ್ಷಗಳ ಪರಿಶ್ರಮದ ಫಲವಾಗಿ ಪೋಲಿಯೋವನ್ನು ಶೇಕಡಾ 99ರಷ್ಟು ಹೊಡೆದೋಡಿಸಿದ್ದರೆ, ಅಫ್ಘಾನಿಸ್ತಾನ ಹಾಗೂ ಪಾಕಿಸ್ತಾನಗಳು ಮಾತ್ರ ಇದರಿಂದ ಹೊರತಾಗಿದ್ದು, ಪೋಲಿಯೋ ಸಂಖ್ಯೆ ಹೆಚ್ಚುತ್ತಿರುವ ಪ್ರಪಂಚದ ನಾಲ್ಕು ದೇಶಗಳ ಪೈಕಿ ಈ ಎರಡೂ ದೇಶಗಳೂ ಸೇರಿವೆ. ಮನುಷ್ಯನನ್ನು ಶಾಶ್ವತವಾಗಿ ಅಂಗವಿಕಲನನ್ನಾಗಿಸುವ ಪೋಲಿಯೊವನ್ನು ತಡೆಗಟ್ಟಬಹುದಾಗಿದ್ದರೂ, ಈ ದೇಶಗಳ ಮಕ್ಕಳು ಮಾತ್ರ ಇದರಿಂದ ನರಳುತ್ತಿದ್ದಾರೆ. ಒಂದು ದೇಶದಿಂದ ಇನ್ನೊಂದಕ್ಕೆ ಪರಸ್ಪರ ಹರಡಿಕೊಳ್ಳುತ್ತಿರುವ ಈ ಖಾಯಿಲೆಯನ್ನು ಎರಡೂ ಕಡೆ ಒಮ್ಮೆಲೇ ನಿವಾರಿಸುವ ಅನಿವಾರ್ಯ ಪರಿಸ್ಥಿತಿ ಇಂದಿನದು.

            ಶ್ರೀ ಶ್ರೀ ಶೇಖ್ ಮೊಹಮ್ಮದ್ ಅವರಂತಹ ವಿಶ್ವನಾಯಕರ ಸಹಕಾರದಿಂದ ಇನ್ನೂ ಹೆಚ್ಚಿನ ಹುಮ್ಮಸ್ಸು ನನಗೆ ದೊರೆತಿದ್ದು, ಅಫ್ಘನ್ ಹಾಗೂ ಪಾಕಿಸ್ತಾನಿ ಮಕ್ಕಳ ಆರೋಗ್ಯವನ್ನು ಸುಧಾರಿಸುವ ಮೂಲಕ ಅವರ ಜೀವನವನ್ನು ಆರೋಗ್ಯಕರವಾಗಿ ಪ್ರಾರಂಭಿಸುವುದರ ಕಡೆಗೆ ದಾಪುಗಾಲು ಹಾಕುವ ವಿಶ್ವಾಸ ನನಗಿದೆ.