ಲೇಬಲ್ಗಳು
ವಿಜಯವಾಣಿ
(55)
ಪತ್ರಿಕೋದ್ಯಮ
(48)
Karnataka
(34)
ಕರ್ನಾಟಕ
(26)
Politics
(24)
ಕನ್ನಡ ಮತ್ತು ಸಂಸ್ಕೃತಿ
(23)
National
(22)
ಸಂದರ್ಶನ
(17)
ವಿವಾದ
(11)
ಜೀವನ
(10)
Commerce
(8)
Justice
(7)
ಆರೆಸ್ಸೆಸ್
(7)
Congress
(6)
ಭಗವದ್ಗೀತೆ
(6)
ಭ್ರಷ್ಟಾಚಾರ
(6)
Book
(5)
External Affairs
(5)
Vijay Karnataka
(5)
ರಾಜಕೀಯ
(5)
Army
(4)
Budget
(4)
Religion
(4)
ಟೌನ್ ಹಾಲ್
(4)
ಶಿಕ್ಷಣ
(4)
Kashmir
(3)
SL Bhyrappa
(3)
Vijayavani
(3)
ಸಾಹಿತ್ಯ
(3)
Freedom
(2)
Modi
(2)
Yedyurappa
(2)
ಇಸ್ರೊ
(2)
ಉದ್ಯೋಗ
(2)
ಪರಿಸರ ಮಾಲಿನ್ಯ
(2)
ಬಾಹ್ಯಾಕಾಶ
(2)
ವಂಚನೆ
(2)
ವಿಜ್ಞಾನ
(2)
Arundhati Roy
(1)
Bhagat singh
(1)
Bharat
(1)
Fashion
(1)
Internet
(1)
Interview
(1)
Mohan Bhagwat
(1)
Muslim
(1)
Opinion
(1)
Poem
(1)
RSS
(1)
Real Estate
(1)
Sikh
(1)
Sports
(1)
ಕನ್ನಡ ಪ್ರಭ
(1)
ಚೀನಾ
(1)
ಹೊಸ ದಿಗಂತ
(1)
ಶನಿವಾರ, ಜುಲೈ 24, 2010
ಗುರುವಾರ, ಜುಲೈ 15, 2010
ಕ್ರೀಡೋದ್ಯಮ-ಕ್ರೀಡಾಸ್ತ್ರ; ಕಳೆದು ಕಳೆದು ಹೋಯ್ತು ಕ್ರೀಡಾಶಯ
ಕ್ರೀಡೋದ್ಯಮ-ಕ್ರೀಡಾಸ್ತ್ರ; ಕಳೆದು ಕಳೆದು ಹೋಯ್ತು ಕ್ರೀಡಾಶಯ

ಕ್ರೀಡೆಯು ಎರಡು ದೇಶಗಳ ನಡುವಣ ಸಂಬಂಧ ವೃದ್ಧಿಗೊಳಿಸಲು ಉಪಕರಣ(Tool) ಆಗಿಯೂ ಬಳಕೆಯಾಗುತ್ತಿದೆ. ಕ್ರೀಡೆಯನ್ನು ಅಂತರರಾಷ್ಟ್ರೀಯ ಸಂಬಂಧಗಳಿಗೆ ಬಳಸಿಕೊಂಡ ಉತ್ತಮ ಉದಾಹರಣೆಯೆಂದರೆ, 1971ರಲ್ಲಿ ಅಮೇರಿಕಾ ಹಾಗೂ ಚೀನಾ ನಡುವಣ ನಡೆದ ಟೇಬಲ್ ಟೆನ್ನಿಸ್ ಪಂದ್ಯಾವಳಿಗಳು. 1949 ರಲ್ಲಿ ಕಮ್ಯೂನಿಸ್ಟ್ ರಾಜ್ಯಭಾರ ಪ್ರಾರಂಭವಾದಂದಿನಿಂದ ಮೊದಲ ಬಾರಿಗೆ ಒಂದು ಕ್ರೀಡಾ ತಂಡವನ್ನು ಚೀನಾಕ್ಕೆ ಕಳುಹಿಸಲು ಅಮೇರಿಕಾ ಅಧ್ಯಕ್ಷ ನಿಕ್ಸನ್ ಒಪ್ಪಿದ್ದರು. ಚೀನಾದಲ್ಲಿ ಅತ್ಯುತ್ತಮ ಟಿ.ಟಿ ಆಟಗಾರರಿದ್ದರು. ಆದರೆ ಅಮೇರಿಕಾ ಆ ಆಟದಲ್ಲಿ ಇನ್ನೂ ಕೂಸು. ಅಂದುಕೊಂಡಂತೆಯೇ ಚೀನಾ, ಈ ಪಂದ್ಯಾವಳಿಗಳಲ್ಲಿ ಗೆದ್ದಿತು. ಇಷ್ಟಕ್ಕೇ ಸುಮ್ಮನಿರದ ಚೀನಾ, ಒಂದು ಬಾಸ್ಕೆಟ್ ಬಾಲ್ ಕ್ರೀಡಾಕೂಟವನ್ನು ಆಯೋಜಿಸಲು ನಿರ್ಧರಿಸಿತು. ಆದರೆ ಬಾಸ್ಕೆಟ್ ಬಾಲ್ನಲ್ಲಿ ಅಮೇರಿಕಾ ಹೆಚ್ಚು ಪ್ರಾವಿಣ್ಯತೆ ಪಡೆದಿದ್ದರೆ, ಚೀನಾ ಇನ್ನೂ ಕಲಿಯುತ್ತಿತ್ತು. ಇಲ್ಲೂ ಸಹಾ ಅಂದುಕೊಂಡಂತೆಯೇ ಅಮೇರಿಕಾ ಗೆದ್ದಿತು. ಆದರೆ, ಈ ಸೋಲು ಗೆಲುವುಗಳ ನಡುವೆ ಎರಡೂ ದೇಶಗಳ ನಡುವಣ 20 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ವ್ಯಾಪಾರ ಒಪ್ಪಂದಗಳು ಮತ್ತೆ ಪ್ರಾರಂಭಗೊಂಡವು. ಈ ಪರಿಣಾಮ 1979ರಲ್ಲಿಯೇ ನಿಕ್ಸನ್ ಚೀನಾಭೇಟಿಯನ್ನೂ ಮಾಡಿದರು. ಕ್ರೀಡೆಯು ಎರಡು ಬೃಹತ್ ರಾಷ್ಟ್ರಗಳ ನಡುವಣ ಸಂಬಂಧಗಳನ್ನು ಮರುಸ್ಥಾಪಿಸಲು ಬಳಕೆಯಾಯಿತು.
ಆದರೆ, ಅದೇ ಚೀನಾ, ಕಳೆದ ಒಲಿಂಪಿಕ್ನಲ್ಲಿ ಅಮೇರಿಕಾಕ್ಕಿಂತ ಮೇಲೆಂದು ತೋರಿಸಿಕೊಳ್ಳಲು ಒಲಿಂಪಿಕ್ ಅನ್ನೇ ಉಪಕರಣವಾಗಿಯಲ್ಲಾ, ಅಸ್ತ್ರವಾಗಿ ಉಪಯೋಗಿಸಿದ್ದು ಪರಿಸ್ಥಿತಿಯ ದುರಂತವೇ ಸರಿ. ದೇಶದ ಹಲವೆಡೆ ಕಿತ್ತು ತಿನ್ನುವ ಬಡತನವಿದ್ದರೂ ಆ ಸ್ಥಳಗಳಿಗೆ ಮಾಧ್ಯಮದವರು ಹೋಗದಂತೆ, ಕೇವಲ ವಿಜೃಂಭಣೆಯಿಂದ ತಯಾರುಮಾಡಿದ ಹಕ್ಕಿಗೂಡು (ಒಲಿಂಪಿಕ್ ಕ್ರೀಡಾಂಗಣ) ಸುತ್ತ ಬಣ್ಣ-ಬಣ್ಣದ ಸೆಟ್ಅನ್ನು ತೋರಿಸಿ, ಇದೇ ಚೀನಾ ಎಂದು ಹೇಳಿತು. ಮೂರು-ನಾಲ್ಕು ವರ್ಷಗಳಿಂದ ತಮ್ಮ ತನವನ್ನೇ ಅಡವಿಟ್ಟು, ಗಂಡ-ಮಕ್ಕಳ ಮುಖವನ್ನೂ ನೋಡಲಾರದಂತಹ ಮಾನಸಿಕ ಸಂದಿಗ್ಧದಲ್ಲಿ ಅಭ್ಯಾಸ ಮಾಡಿ ಚಿನ್ನದ ಪದಕ ಗೆದ್ದುಕೊಟ್ಟ ಹೆಣ್ಣುಮಕ್ಕಳನ್ನು ತೋರಿಸಿ ಇದೇ ನಿಜವಾದ Sportiveness ಎಂದಿತು. ಒಲಿಂಪಿಕ್ನಂತರ ಕರ್ಪ್ಯೂನಂತಹ ಆ ಸ್ಥಿತಿ ತಿಳಿಗೊಂಡ ನಂತರವೇ ಚೀನಾದ ಈ ಹುಳುಕುಗಳೆಲ್ಲಾ ಹೊರಗಡೆ ಬಂದದ್ದು.
ಇನ್ನು, ಭಾರತದ ವಿಷಯದಲ್ಲಿ, ಕ್ರೀಡೆ ಎನ್ನುವ ಪದದ ವ್ಯಾಪಕತೆಯನ್ನೇ ಮೀರಿ ಬೆಳೆದುನಿಂತಿರುವುದು ಕ್ರಿಕೆಟ್. Cricket is the Largest practicing religion in India ಎಂದು ಹಲವರು ಹೇಳಿದ್ದನ್ನು ನಾವು ಕೇಳಿರುತ್ತೇವೆ. ಇಂಟರ್ನೆಟ್ನ ವಿವಿಧ ವಿಭಾಗಗಳಲ್ಲಿ ವ್ಯಾಪಾರ, ರಾಜಕೀಯ, ದೇಶ, ಅಂತರರಾಷ್ಟ್ರೀಯ, ಕ್ರೀಡೆ ಎಂಬವುಗಳ ಜೊತೆಗೆ ಕ್ರಿಕೆಟ್ ಎಂಬ ವಿಭಾಗವೇ ಪ್ರತ್ಯೇಕವಾಗಿದೆ. ತನ್ನ ಸ್ವಯಂಕೃತ ಅಪರಾಧಗಳಿಂದಲೇ ಪಾತಾಳಕ್ಕಿಳಿದಿರುವ ಹಾಕಿಯೆಂಬ ಭಾರತದ ಅಧಿಕೃತ ರಾಷ್ಟ್ರೀಯ ಆಟವನ್ನು ಇದರ ನೆರಳು ಆವರಿಸಿದೆ ಎನ್ನುವಷ್ಟರ ಮಟ್ಟಿಗೆ ಕ್ರಿಕೆಟ್ ಬೆಳೆದು ನಿಂತಿದೆ. ಇದೇ ಕ್ರಿಕೆಟ್ ನೋಡಲು ಪಾಕಿಸ್ತಾನದಿಂದ ಬಂದ ವೀಕ್ಷಕರು ! ವರ್ಷಗಳೇ ಕಳೆದರೂ ಭಾರತದಿಂದ ವಾಪಸ್ ತವರು ದೇಶಕ್ಕೆ ಹೋಗಿಲ್ಲ. ಅವರೆಲ್ಲಾ ಇಲ್ಲೇ ಉಳಿದು ಭಾರತದಲ್ಲಿ ನಿರಂತರ ನಡೆಯುತ್ತಿರುವ ಭಯೋತ್ಪಾದನೆಗೆ ಪ್ರಚೋದಿಸುತ್ತಿರುವ ಅನುಮಾನಗಳೂ ದಟ್ಟವಾಗಿವೆ. ಇಂತಹವರಿಗೆ ಕ್ರಿಕೆಟ್ ಎನ್ನುವುದು ಭಯವನ್ನು ಉತ್ಪಾದನೆ ಮಾಡಲು ಸಹಕಾರಿಯಾದ ಒಂದು ಉತ್ಪಾದನಾ ಕಾರ್ಖಾನೆ (Production Industry). ದೇಶ-ದೇಶಗಳು ಯುದ್ಧ ಭೂಮಿಯಲ್ಲಿ ಹೊಡೆದಾಡಿ ಸಾಯುವ ಬದಲು, ಕ್ರೀಡಾಂಗಣದಲ್ಲಿ ಒಂದಾಗಲಿ ಎನ್ನುವುದು ಕ್ರೀಡೆಗಳ ಆಶಯವಾದರೆ, ಅದೇ ಕ್ರೀಡೆಗಳಿಂದಲೇ ರಣಾಂಗಣಕ್ಕೆ ಟಿಕೆಟ್ ಪಡೆಯುತ್ತಿರುವುದು ವಿಪಯರ್ಾಸ. ಒಂದು ಬಟ್ಟೆಯ ತುಂಡು ಒಬ್ಬನಿಗೆ ಕರವಸ್ತ್ರವಾಗಿ, ಒಬ್ಬನಿಗೆ ಸ್ಕಾರ್ಪ್ ಆಗಿ, ಮತ್ತೊಬ್ಬನಿಗೆ ಧ್ವಜವಾಗಿ ಕಾಣುವಂತೆ, ಶಾಂತಿ ಸ್ಥಾಪಿಸಲು ಹೊರಟ ಕ್ರೀಡೆಯೂ ಉಗ್ರರಿಗೆ ಅಸ್ತ್ರವಾಗಿ ಕಾಣುತ್ತಿದೆ. ಭಾರತದ ಮಟ್ಟಿಗೆ ಕ್ರೀಡೆ ಎನ್ನುವುದು ಒಂದು ನಕಾರಾತ್ಮಕ ಅಂಶವಾಗಿಯೇ ಉಳಿದಿದೆ. ಅಥ್ಲೆಟಿಕ್ ಕ್ರೀಡೆಗಳಲ್ಲಿ ಪದಕ ಗೆಲ್ಲಲು ತಿಣುಕಾಡಿದರೆ ಕ್ರಿಕೆಟ್, ಪರಸ್ಪರ ಸಂಬಂಧಗಳನ್ನು ಬೆಳೆಸುವ ಬದಲು, ಪಾಕಿಸ್ತಾನದ ಜೊತೆ ಸಂಬಂಧ ಹಳಸಲು ಸಹಕರಿಸಿದ್ದೇ ಹೆಚ್ಚು. ಅದಕ್ಕೆ ತಕ್ಕಂತೆ ನಮ್ಮ ಮಾಧ್ಯಮಗಳು ನೀಡಿದ ಭಾರತ-ಪಾಕ್ ರನ್ ಸಮರ, ಭಾರತದ ಸಾಂಪ್ರದಾಯಿಕ ಎದುರಾಳಿ ಪಾಕ್, ನಾಳೆಯ ಪಂದ್ಯಕ್ಕೆ ರಣತಂತ್ರ,..... ಎನ್ನುವಂತಹ ತಲೆಯಿಲ್ಲದೇ ನೀಡಿದ ತಲೆಬರಹಗಳ ಕಾರಣದಿಂದ ಆಟ ಎನ್ನುವುದು ರಣರಂಗವೇ ಆಗಿದೆ.
ಇನ್ನೊಂದು ಕಡೆ ಕ್ರೀಡಾಕೂಟಗಳನ್ನು ಬಹಿಷ್ಕರಿಸುವ ಮೂಲಕ ಇನ್ನೊಂದು ದೇಶದೊಡನೆ ರಾಜತಾಂತ್ರಿಕ ಒತ್ತಡ ಹಾಕುವ ಕೆಲಸಗಳೂ ನಡೆದಿವೆ. ಅದು ಪ್ಯಾಲೆಸ್ತೀನಿನ ಜನರ ಹೋರಾಟದ ಬೆಂಬಲಕ್ಕೋಸ್ಕರ 2004ರ ಒಲಿಂಪಿಕ್ನ್ನೇ ಬಹಿಷ್ಕರಿಸಿದ ಇರಾನಿನ ಜೂಡೋ ಆಟಗಾರ Arash Miresmaeli ಯಿಂದ ಮೊದಲ್ಗೊಂಡು, ಪಾಕಿಸ್ತಾನದಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡದ ಮೇಲಿನ ಉಗ್ರರ ಆಕ್ರಮಣ ಆಗುವವರೆಗೂ ಕ್ರೀಡೆಯನ್ನು ಬಳಸಿಕೊಂಡು ಬ್ಲಾಕ್ಮೇಲ್ ಮಾಡುವ ತಂತ್ರಗಳೂ ನಡೆದಿವೆ. ಪಾಕಿಸ್ತಾನದಲ್ಲಾದ ಆ ಘಟನೆ ನಡೆದಾಗಿನಿಂದ, ಅಲ್ಲಿ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳಲ್ಲೂ ಭಾಗವಹಿಸುವುದಿಲ್ಲವೆಂದು ಹಲವು ದೇಶಗಳು ಹೇಳಿದ ಮೇಲಂತೂ, ಪಾಕಿಸ್ತಾನದ ಮಾನ ಅಂತಾರಾಷ್ಟ್ರೀಯ ಮಟ್ಟದಲ್ಲಿ(ಮಾರುಕಟ್ಟೆಯಲ್ಲಿ !) ಹರಾಜಗುತ್ತಿರುವುದು ಕ್ರೀಡೆಯ ಪ್ರಭಾವವನ್ನು ಸೂಚಿಸುತ್ತದೆ. ಈ ರೀತಿಯ ಬಹಿಷ್ಕಾರಗಳು, ಬೆದರಿಕೆಗಳು ಭಾರತವನ್ನೂ ಬಿಟ್ಟಿಲ್ಲಾ ಎನ್ನುವುದೂ ಸತ್ಯ.
ಇವೆಲ್ಲವುಗಳ ನಡುವೆಯೂ ಹಲವು ಒಳ್ಳೆಯ ಪಂದ್ಯಗಳು ನೋಡಲು ಸಿಗುತ್ತಿವೆ, ಆರೋಗ್ಯಕರ ಸೆಣೆಸಾಟಗಳೂ ನಡೆಯುತ್ತಿವೆ. ಇಂದು ಆರ್ಕುಟ್ ಒಂದರಲ್ಲೇ ಕ್ರಿಕೆಟ್ ಹೆಸರಿನಲ್ಲಿ ಸಾವಿರಕ್ಕೂ ಹೆಚ್ಚು ಕಮ್ಯೂನಿಟಿಗಳಿವೆ, ಸಾವಿರಕ್ಕೂ ಹೆಚ್ಚು ಜನರ ಪ್ರೊಫೈಲ್ನಲ್ಲಿನ ಕ್ರೀಡೆಗಳ ಪಟ್ಟಿಯಲ್ಲಿ ಕ್ರಿಕೆಟ್ ಅಗ್ರಸ್ಥಾನ ಪಡೆದಿದೆ. ಇನ್ನೊಂದು ವಿಷಯವೆಂದರೆ ಕ್ರಿಕೆಟ್, ಹಾಕಿ, ಫುಟ್ಬಾಲ್, ಶೂಟಿಂಗ್, ಬಾಕ್ಸಿಂಗ್ ಎಂಬ ಯಾವ ಭೇದವೂ ಸಾಮಾನ್ಯ ಜನರಿಗಿಲ್ಲ ಎನ್ನುವುದು ಹಲವುಬಾರಿ ಸಾಬೀತಾಗಿದೆ. ಬುಗುರಿಯ ಆಟದಲ್ಲಿ ಭಾರತ ಒಲಿಂಪಿಕ್ ಚಿನ್ನದ ಪದಕ ಗೆದ್ದರೂ ಜನರು ಅದನ್ನೂ ಇಷ್ಟ ಪಡುತ್ತಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ. ರಾಜಕೀಯ(ಕೆಟ್ಟ) ರಹಿತ ಕ್ರೀಡೆಗಳನ್ನು ಆಡಿದ್ದೇ ಆದರೆ ದೇಶದ ಬೊಕ್ಕಸಕ್ಕೆ ಆದಾಯ, ದೇಶದ ಹೆಸರಿಗೆ ಕೀತಿ, ಎರಡನ್ನೂ ತಂದುಕೊಡುವ ಉಪಕರಣವಾಗಿ ಕ್ರೀಡೆ ರೂಪುಗೊಳ್ಳುತ್ತದೆ ಎನ್ನುವುದರಲ್ಲಿ ಅತಿಶಯವಿಲ್ಲಾ ಎನ್ನಿಸುತ್ತದೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)